ADVERTISEMENT

ರಣಜಿ ಟ್ರೋಫಿ: ಸ್ಪರ್ಧಾತ್ಮಕ ಕ್ರಿಕೆಟ್ ಕಣಕ್ಕೆ ಮರಳಿದ ಮೊಹಮ್ಮದ್ ಶಮಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 19:30 IST
Last Updated 13 ನವೆಂಬರ್ 2024, 19:30 IST
<div class="paragraphs"><p>ಬಂಗಾಳ ತಂಡದ ಮೊಹಮ್ಮದ್ ಶಮಿ ಬೌಲಿಂಗ್‌&nbsp;</p></div>

ಬಂಗಾಳ ತಂಡದ ಮೊಹಮ್ಮದ್ ಶಮಿ ಬೌಲಿಂಗ್‌ 

   

–ಪಿಟಿಐ ಚಿತ್ರ

ಇಂದೋರ್: ಸುಮಾರು ಒಂದು ವರ್ಷದ ನಂತರ ವೇಗಿ ಮೊಹಮ್ಮದ್ ಶಮಿ ಅವರು ಸ್ಪರ್ಧಾತ್ಮಕ ಕ್ರಿಕೆಟ್ ಕಣಕ್ಕೆ ಮರಳಿದರು. 

ADVERTISEMENT

ಹೋಳ್ಕರ್ ಮೈದಾನದಲ್ಲಿ ಬುಧವಾರ ಆರಂಭವಾದ ಸಿ ಗುಂಪಿನ ಪಂದ್ಯದಲ್ಲಿ  ತಮ್ಮ ತವರು ಬಂಗಾಳ ತಂಡದಲ್ಲಿ ಶಮಿ ಕಣಕ್ಕಿಳಿದರು. ಮಧ್ಯಪ್ರದೇಶ ಎದುರು 10 ಓವರ್ ಬೌಲಿಂಗ್ ಮಾಡಿದ ಅವರು 34 ರನ್ ನೀಡಿ, 1 ಓವರ್ ಮೇಡನ್ ಮಾಡಿದರು. ಆದರೆ ಅವರಿಗೆ ಒಂದೂ ವಿಕೆಟ್ ಒಲಿಯಲಿಲ್ಲ. 

ಶಮಿ ಅವರು 2023ರ ನವೆಂಬರ್ 19 ರಂದು ಅಹಮದಾಬಾದಿನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಆಡಿದ್ದರು. ಅದರ ನಂತರ ಅವರು ಇದುವರೆಗೂ ಯಾವುದೇ ಪಂದ್ಯದಲ್ಲಿ ಆಡಿರಲಿಲ್ಲ. ಹಿಮ್ಮಡಿಯ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಅವರು ಎನ್‌ಸಿಎ ಪುನಶ್ಚೇತನ ವಿಭಾಗದಲ್ಲಿ ಆರೈಕೆ ಪಡೆದಿದ್ದರು. 

ಈ ರಣಜಿ ಪಂದ್ಯದಲ್ಲಿ ಟಾಸ್ ಗೆದ್ದ ಮಧ್ಯಪ್ರದೇಶ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬಂಗಾಳ ತಂಡವು 51.2 ಓವರ್‌ಗಳಲ್ಲಿ 228 ರನ್‌ ಗಳಿಸಿ ಆಲೌಟ್ ಆಯಿತು. ಇನಿಂಗ್ಸ್ ಆರಂಭಿಸಿರುವ ಆತಿಥೇಯ ತಂಡವು ದಿನದಾಟದ ಅಂತ್ಯಕ್ಕೆ 30 ಓವರ್‌ಗಳಲ್ಲಿ 1 ವಿಕೆಟ್‌ಗೆ 103 ರನ್ ಗಳಿಸಿದೆ. 

ಬಂಗಾಳ ತಂಡದ ವೇಗಿಗಳಾದ ಇಶಾನ್ ಪೊರೆಲ್ ಹಾಗೂ ರಿಷವ್ ವಿವೇಕ್ ಅವರು ಗಾಯಗೊಂಡಿದ್ದಾರೆ. ಮುಕೇಶ್ ಕುಮಾರ್ ಮತ್ತು ಆಕಾಶ್ ದೀಪ್ ಅವರು ಭಾರತ ತಂಡದಲ್ಲಿ ಆಡುತ್ತಿದ್ದಾರೆ. ಆದ್ದರಿಂದ ಈಗ ಬಂಗಾಳ ತಂಡಕ್ಕೆ ಆಸರೆಯಾಗುವ ಒತ್ತಡ ಶಮಿ ಮೇಲೆ ಇದೆ. 

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: ಬಂಗಾಳ: 51.2 ಓವರ್‌ಗಳಲ್ಲಿ 228 (ಶಹಬಾಜ್ ಅಹಮದ್ 92, ಅನುಸ್ಟುಪ್ ಮಜುಂದಾರ್ 44, ಆರ್ಯನ್ ಪಾಂಡೆ 47ಕ್ಕೆ4, ಕುಲವಂತ್ ಖೆಜ್ರೊಲಿಯಾ 94ಕ್ಕೆ4)

ಮಧ್ಯಪ್ರದೇಶ: 30 ಓವರ್‌ಗಳಲ್ಲಿ 1 ವಿಕೆಟ್‌ಗೆ 103 (ಶುಭ್ರಾಂಶು ಸೇನಾಪತಿ ಬ್ಯಾಟಿಂಗ್ 44, ರಜತ್ ಪಾಟೀದಾರ್ ಬ್ಯಾಟಿಂಗ್ 41, ಮೊಹಮ್ಮದ್ ಕೈಫ್ 31ಕ್ಕೆ1)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.