ADVERTISEMENT

ಶಾರ್ದೂಲ್‌ ಠಾಕೂರ್‌ಗೆ ಪಾದದ ಶಸ್ತ್ರಚಿಕಿತ್ಸೆ

ಪಿಟಿಐ
Published 12 ಜೂನ್ 2024, 14:28 IST
Last Updated 12 ಜೂನ್ 2024, 14:28 IST
<div class="paragraphs"><p>ಶಾರ್ದೂಲ್‌ ಠಾಕೂರ್‌</p></div>

ಶಾರ್ದೂಲ್‌ ಠಾಕೂರ್‌

   

(ಪಿಟಿಐ ಚಿತ್ರ)

ಲಂಡನ್‌: ಭಾರತ ತಂಡದ ಆಲ್‌ರೌಂಡರ್‌ ಶಾರ್ದೂಲ್ ಠಾಕೂರ್ ಅವರಿಗೆ ಬುಧವಾರ ಇಲ್ಲಿ ಪಾದದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಿತು. ಕನಿಷ್ಠ ಮೂರು ತಿಂಗಳು ಅವರು ಕ್ರಿಕೆಟ್‌ನಿಂದ ದೂರವಿರುವ ನಿರೀಕ್ಷೆಯಿದೆ.

ADVERTISEMENT

32 ವರ್ಷ ವಯಸ್ಸಿನ ಶಾರ್ದೂಲ್‌, ಶಸ್ತ್ರಚಿಕಿತ್ಸೆಯ ಬಳಿಕದ ಚಿತ್ರವನ್ನು ‘ಆಪರೇಟೆಡ್‌ ಸಕ್ಸಸ್‌ಫುಲಿ’ ಎಂಬ ಶೀರ್ಷಿಕೆಯೊಡನೆ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದು ಅವರಿಗೆ ಎರಡನೇ ಶಸ್ತ್ರಚಿಕಿತ್ಸೆ. 2019ರಲ್ಲೂ ಅವರಿಗೆ ಪಾದದ ಶಸ್ತ್ರಚಿಕಿತ್ಸೆಯಾಗಿತ್ತು. ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಪಾದದ ನೋವು ಕಾಣಿಸಿಕೊಂಡಿತ್ತು. ರಣಜಿ ಟ್ರೋಫಿ ಋತುವಿನಲ್ಲಿ ಆಡಿ ಮುಂಬೈಗೆ ಪ್ರಶಸ್ತಿ ಗೆಲ್ಲಲು ನೆರವಾಗಿದ್ದರು. ಜೊತೆಗೆ ಮುಂದಿನ ಪಂದ್ಯಕ್ಕೆ ಮಾನಸಿಕವಾಗಿ ಸಜ್ಜಾಗಲು, ಎರಡು ಪಂದ್ಯಗಳ ನಡುವೆ ಹೆಚ್ಚಿನ ವಿರಾಮ ನೀಡುವಂತೆ ಬಿಸಿಸಿಐಗೆ ಅವರು ಮನವಿ ಮಾಡಿದ್ದರು.

ಕಳೆದ ತಿಂಗಳು ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಪರ ಆಡಿದ್ದ ಅವರು 9 ಪಂದ್ಯಗಳಲ್ಲಿ 9.75ರ ಇಕಾನಮಿ ದರದಲ್ಲಿ ಐದು ವಿಕೆಟ್‌ಗಳನ್ನಷ್ಟೇ ಪಡೆದಿದ್ದರು.

ಕೇಂದ್ರಿಯ ಗುತ್ತಿಗೆಯಲ್ಲಿ ಅವರು ‘ಸಿ’ ಗ್ರೇಡ್‌ ವ್ಯಾಪ್ತಿಯಲ್ಲಿರುವ ಕಾರಣ ಅವರ ಚಿಕಿತ್ಸೆಯ ವೆಚ್ಚವನ್ನು ಬಿಸಿಸಿಐ ಭರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.