ADVERTISEMENT

ರಣಜಿ | ಫಿಟ್‌ನೆಸ್ ಕೊರತೆ, ಅಶಿಸ್ತು: ಮುಂಬೈ ತಂಡದಿಂದ ಪೃಥ್ವಿ ಶಾಗೆ ಕೊಕ್

ಪಿಟಿಐ
Published 22 ಅಕ್ಟೋಬರ್ 2024, 13:58 IST
Last Updated 22 ಅಕ್ಟೋಬರ್ 2024, 13:58 IST
ಪೃಥ್ವಿ ‌ಶಾ
ಪೃಥ್ವಿ ‌ಶಾ   

ಮುಂಬೈ: ಆರಂಭಿಕ ಬ್ಯಾಟರ್ ಪೃಥ್ವಿ ಶಾ ಅವರನ್ನು ಮುಂಬೈ ತಂಡದಿಂದ ಕೈಬಿಡಲಾಗಿದೆ. ಫಿಟ್‌ನೆಸ್ ಕೊರತೆ ಮತ್ತು ಅಶಿಸ್ತಿನ ಕಾರಣಗಳಿಗಾಗಿ ಅವರನ್ನು ಕೈಬಿಡಲಾಗಿದೆ.

ಇದೇ 26 ರಿಂದ 29ರವರೆಗೆ ಅಗರ್ತಲಾದಲ್ಲಿ ಮುಂಬೈ ಮತ್ತು ತ್ರಿಪುರ ಪಂದ್ಯವು ನಡೆಯಲಿದೆ. 

24 ವರ್ಷದ ಪೃಥ್ವಿ ಅವರು ತಂಡದ ತರಬೇತಿ ಅವಧಿಗಳಿಗೆ ಆಗಾಗ ಗೈರಾಗುತ್ತಾರೆ. ಅವರ ‘ದೇಹತೂಕ ಹೆಚ್ಚಾಗಿದೆ’ ಎಂದು ಹೇಳಲಾಗಿದೆ.

ADVERTISEMENT

‘ಕ್ರೀಡಾಂಗಣದಲ್ಲಿ ಅವರ ಫಿಟ್‌ನೆಸ್ ಮತ್ತು ಓಟವನ್ನು ಗಮನಿಸಬೇಕು. ಎಂಸಿಎ (ಮುಂಬೈ ಕ್ರಿಕೆಟ್ ಸಂಸ್ಥೆ)ಗೆ ಬಹಳ ಶ್ರೀಮಂತ ಪರಂಪರೆ ಇದೆ. ಆದ್ದರಿಂದ ಎಲ್ಲ ಆಟಗಾರರಿಗೂ ಒಂದೇ ರೀತಿಯ ನಿಯಮ ಅನ್ವಯವಾಗುತ್ತದೆ’ ಎಂದು ಪದಾಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ರಣಜಿ ಟ್ರೋಫಿ ಟೂರ್ನಿಯ ಕಳೆದ ಎರಡು ಪಂದ್ಯಗಳಲ್ಲಿ ಪೃಥ್ವಿ (7,12, 1 ಮತ್ತು ಔಟಾಗದೆ 39 ) ಅವರು ಫಾರ್ಮ್ ಕಂಡುಕೊಂಡಿರಲಿಲ್ಲ. ಅವರನ್ನು ತಂಡದಿಂದ ಕೈಬಿಡುವ ನಿರ್ಧಾರವನ್ನು ಮುಂಬೈ ಸೀನಿಯರ್ ತಂಡದ ಆಯ್ಕೆ ಸಮಿತಿ ತೆಗೆದುಕೊಂಡಿದೆ. 

ಪೃಥ್ವಿ ಅವರ ಸ್ಥಾನಕ್ಕೆ 29 ವರ್ಷದ ಎಡಗೈ ಬ್ಯಾಟರ್ ಅಖಿಲ್ ಹೆರವಾಡ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಸೂರ್ಯಕುಮಾರ್ ಯಾದವ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಪೃಥ್ವಿ ಐದು ಟೆಸ್ಟ್, ಆರು ಏಕದಿನ ಮತ್ತು ಒಂದು ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.