ಮೈಸೂರು: ಮೊನಚಿಲ್ಲದ ಬೌಲಿಂಗ್ ಮತ್ತು ಕಳಪೆ ಫೀಲ್ಡಿಂಗ್‌ಗೆ ಭಾರಿ ಬೆಲೆ ತೆತ್ತ ಶಿವಮೊಗ್ಗ ಲಯನ್ಸ್ ತಂಡ ಕೆಪಿಎಲ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಸತತ ನಾಲ್ಕನೇ ಸೋಲು ಅನುಭವಿಸಿ ಸೆಮಿಫೈನಲ್ ‘ರೇಸ್’ನಿಂದ ಹೊರಬಿತ್ತು.
ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡ ಐದು ವಿಕೆಟ್‌ಗಳಿಂದ ಜಯಿಸಿತು. ಮೊದಲು ಬ್ಯಾಟ್ ಮಾಡಿದ ಲಯನ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 163 ರನ್ ಗಳಿಸಿದರೆ, ಸ್ಟುವರ್ಟ್ ಬಿನ್ನಿ ಬಳಗ 19.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ದಾಟಿತು.
ಸವಾಲಿನ ಗುರಿ ಬೆನ್ನಟ್ಟಿದ ಪ್ಯಾಂಥರ್ಸ್ ತಂಡ ಸ್ಟಾಲಿನ್ ಹೂವರ್ (5) ಅವರ ವಿಕೆಟ್ ಅನ್ನು ಬೇಗನೇ ಕಳೆದುಕೊಂಡಿತು. ದೀಕ್ಷಾನ್ಶು ನೇಗಿ (54, 49 ಎಸೆತ) ಅವರು ಎಸ್.ರಕ್ಷಿತ್ (22, 17 ಎಸೆತ) ಜತೆ ಎರಡನೇ ವಿಕೆಟ್‌ಗೆ 45 ರನ್ ಹಾಗೂ ಸ್ಟುವರ್ಟ್ ಬಿನ್ನಿ (32, 17 ಎಸೆತ) ಜತೆ ಮೂರನೇ ವಿಕೆಟ್‌ಗೆ 56 ರನ್ ಕಲೆಹಾಕಿದರು.
ನೇಗಿ ಮತ್ತು ಬಿನ್ನಿ ಔಟಾದ ಬಳಿಕ ಡಿ.ಅವಿನಾಶ್ (ಅಜೇಯ 35, 17 ಎಸೆತ) ತಂಡವನ್ನು ಜಯದತ್ತ ಮುನ್ನಡೆಸಿದರು. ನಿರ್ಣಾಯಕ ಘಟ್ಟದಲ್ಲಿ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಲಯನ್ಸ್‌ಗೆ ಮುಳುವಾಯಿತು.
ಸಂಕ್ಷಿಪ್ತ ಸ್ಕೋರ್: ಶಿವಮೊಗ್ಗ ಲಯನ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 163 (ಬಿ.ಆರ್.ಶರತ್ 17, ನಿಹಾಲ್ ಉಳ್ಳಾಲ್ 34, ಅನಿರುದ್ಧ್ ಜೋಶಿ 54, ಅಭಿಮನ್ಯು ಮಿಥುನ್ 23, ಸ್ಟುವರ್ಟ್ ಬಿನ್ನಿ 30ಕ್ಕೆ 2)
ಬೆಳಗಾವಿ ಪ್ಯಾಂಥರ್ಸ್: 19.3 ಓವರ್‌ಗಳಲ್ಲಿ 5 ವಿಕೆಟ್‌ಗೆ 166 (ದೀಕ್ಷಾನ್ಶು ನೇಗಿ 54, ಸ್ಟುವರ್ಟ್ ಬಿನ್ನಿ 32, ಡಿ.ಅವಿನಾಶ್ ಔಟಾಗದೆ 35, ಅಭಿಮನ್ಯು ಮಿಥುನ್24ಕ್ಕೆ 2, ಪೃಥ್ವಿ ಶೆಖಾವತ್ 31ಕ್ಕೆ 1). ಫಲಿತಾಂಶ: ಬೆಳ
ಗಾವಿ ಪ್ಯಾಂಥರ್ಸ್‌ಗೆ 5 ವಿಕೆಟ್ ಜಯ. ಪಂದ್ಯಶ್ರೇಷ್ಠ: ದೀಕ್ಷಾನ್ಶು ನೇಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.