ADVERTISEMENT

Bihar v Karnataka Ranji: 143 ರನ್ನಿಗೆ ಉರುಳಿದ ಬಿಹಾರ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:41 IST
Last Updated 26 ಅಕ್ಟೋಬರ್ 2024, 15:41 IST
<div class="paragraphs"><p>ಶ್ರೇಯಸ್ ಗೋಪಾಲ್</p></div>

ಶ್ರೇಯಸ್ ಗೋಪಾಲ್

   

ಪ್ರಜಾವಾಣಿ ಸಂಗ್ರಹ ಚಿತ್ರ

ADVERTISEMENT

ಪಟ್ನಾ: ಕರ್ನಾಟಕದ ಸ್ಪಿನ್ನರ್‌ದ್ವಯರಾದ ಶ್ರೇಯಸ್‌ ಗೋಪಾಲ್ ಮತ್ತು ಮೊಹ್ಸಿನ್ ಖಾನ್ ಏಳು ವಿಕೆಟ್‌ಗಳನ್ನು ಹಂಚಿಕೊಂಡರು. ಇದರಿಂದ ಬಿಹಾರ ತಂಡ, ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದ ಮೊದಲ ದಿನವಾದ ಶನಿವಾರ 143 ರನ್‌ಗಳಿಗೆ ಉರುಳಿತು.

ಲೆಗ್‌ ಸ್ಪಿನ್ನರ್ ಶ್ರೇಯಸ್‌ ಗೋಪಾಲ್ 14 ಓವರುಗಳಲ್ಲಿ 28 ರನ್ನಿಗೆ 4 ವಿಕೆಟ್‌ ಪಡೆದರೆ, ಆಫ್‌ ಸ್ಪಿನ್ನರ್ ಮೊಹ್ಸಿನ್ 16.5 ಓವರುಗಳಲ್ಲಿ 50 ರನ್ನಿಗೆ 3 ವಿಕೆಟ್ ಪಡೆದರು.

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ಆಯ್ಕೆಯಾದ ಸಂಭ್ರಮದಲ್ಲಿರುವ ವಿಜಯಕುಮಾರ್ ವೈಶಾಖ (29ಕ್ಕೆ1) ಜೊತೆಗೆ ಇನ್ನೊಬ್ಬ ವೇಗಿ ವಿ.ಕೌಶಿಕ್ (21ಕ್ಕೆ1) ಅವರು, ಬೌಲಿಂಗ್ ಮಾಡಲು ನಿರ್ಧರಿಸಿದ  ಕರ್ನಾಟಕಕ್ಕೆ ಆರಂಭದಲ್ಲಿ ಯಶಸ್ಸು ಗಳಿಸಿಕೊಟ್ಟರು. ನಂತರ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಿದರು.

ಆರಂಭ ಆಟಗಾರ ಶರ್ಮನ್ ನಿಗ್ರೋಧ್ 143 ಎಸೆತಗಳನ್ನು ಎದುರಿಸಿ 60 ರನ್ (4x6) ಗಳಿಸಿದರು. ಅವರನ್ನು ಬಿಟ್ಟರೆ ಹೆಚ್ಚಿನ ಕೊಡುಗೆ ನೀಡಿದವರು ಬಿಪಿನ್ ಸೌರಬ್. ಬಿರುಸಿನ ಆಟವಾಡಿದ ಅವರು 38 ಎಸೆತಗಳಲ್ಲಿ 31 ರನ್ ಗಳಿಸಿದರು.

ಮಂದ ಬೆಳಕಿನಿಂದ ಮೊದಲ ದಿನದಾಟ ಬೇಗನೇ ಕೊನೆಗೊಳಿಸದಾಗ ಕರ್ನಾಟಕ ಮೂರು ಓವರುಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 16 ರನ್ ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.