ಪರ್ತ್: ಸೋಮವಾರ ಇಲ್ಲಿ ಮುಕ್ತಾಯವಾದ ಟೆಸ್ಟ್ ಪಂದ್ಯದಿಂದ ‘ಪಿತೃತ್ವ ರಜೆ’ ಪಡೆದಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾಕ್ಕೆ ಬಂದಿಳಿದಿದ್ದಾರೆ. ಅಡಿಲೇಡ್‌ನಲ್ಲಿ ನಡೆಯಲಿರುವ ಸರಣಿಯ ಕ್ಕಾಗಿ ನೆಟ್ಸ್ ಅಭ್ಯಾಸ ಮಾಡಿದರು.
ಭಾನುವಾರ ಸಂಜೆ ಅವರು ಪರ್ತ್‌ಗೆ ಬಂದರು. ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಟೆಸ್ಟ್ ಪಂದ್ಯ ವೀಕ್ಷಿಸಲು ತೆರಳಿದರು. ತಂಡದ ಡ್ರೆಸಿಂಗ್ ಕೋಣೆಯಲ್ಲಿ ಕುಳಿತು ಪಂದ್ಯ ವೀಕ್ಷಿಸಿದ್ದರು.
ಸೋಮವಾರ ಅವರು ನೆಟ್ಸ್‌ನಲ್ಲಿ ಪಿಂಕ್ ಬಾಲ್ ಎದುರಿಸುವ ಅಭ್ಯಾಸ ಮಾಡಿದರು. ವೇಗಿಗಳಾದ ನವದೀಪ್ ಸೈನಿ, ಯಶ್ ದಯಾಳ್ ಮತ್ತು ಮುಕೇಶ್ ಕುಮಾರ್ ಅವರು ಬೌಲಿಂಗ್ ಮಾಡಿದರು. ಅನುಭವಿ ಸ್ಪಿನ್ನರ್ ರವೀಂದ್ರ ಜಡೇಜ ಅವರೂ ರೋಹಿತ್‌ಗೆ ಬೌಲಿಂಗ್ ಮಾಡಿದರು. ತಂಡದ ಸ್ಲಿಂಗರ್ ಆಗಿರುವ ನುವಾನ ಸೆನಾವಿರತನೆ ಅವರ ಎಡಗೈ ಥ್ರೋಡೌನ್ ಬೌನ್ಸರ್‌ಗಳನ್ನೂ ರೋಹಿತ್ ಎದುರಿಸಿದರು. ತಮ್ಮ ಅಚ್ಚುಮೆಚ್ಚಿನ ಪುಲ್ ಶಾಟ್‌ಗಳನ್ನು ಪ್ರಯೋಗಿಸಿದರು.
ಡಿಸೆಂಬರ್ 6ರಿಂದ ಅಡಿಲೇಡ್‌ನಲ್ಲಿ ಹೊನಲು ಬೆಳಕಿನ ಟೆಸ್ಟ್ ನಡೆಯಲಿದೆ.
ನವೆಂಬರ್ 30ರಂದು ಕ್ಯಾನ್‌ಬೆರಾದಲ್ಲಿ ಎರಡು ಪಂದ್ಯಗಳ ಅಭ್ಯಾಸ ಪಂದ್ಯ ನಡೆಯಲಿದೆ. ಭಾರತ ತಂಡವು ಬುಧವಾರ ಕ್ಯಾನ್‌ಬೆರಾಗೆ ಪ್ರಯಾಣಿಸಲಿದೆ.
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ನಾಯಕತ್ವ ವಹಿಸಿದ್ದರು. ಅವರು ಒಟ್ಟು 8 ವಿಕೆಟ್ ಗಳಿಸಿ ತಂಡದ ಗೆಲುವಿನ ರೂವಾರಿಯೂ ಆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.