ADVERTISEMENT

ಮುಷ್ತಾಕ್‌ ಅಲಿ ಟಿ20 ಟೂರ್ನಿ: ಕರ್ನಾಟಕ ತಂಡದಲ್ಲಿ ಸ್ಮರಣ್‌, ನೊರೊನ್ಹಾ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 12:20 IST
Last Updated 12 ನವೆಂಬರ್ 2024, 12:20 IST
ಆರ್‌. ಸ್ಮರಣ್‌
ಆರ್‌. ಸ್ಮರಣ್‌   

ಬೆಂಗಳೂರು:ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಸ್‌ಸಿಎ)ನ.11ರಿಂದ ಆರಂಭವಾಗಲಿರುವ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಗೆ 26 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ. 

ಯುವ ಪ್ರತಿಭಾನ್ವಿತಾ ಯುವ ಬ್ಯಾಟರ್‌ಗಳಾದ  ಆರ್‌.ಸ್ಮರಣ್‌ ಮತ್ತು ಮ್ಯಾಕ್ನಿಲ್‌ ನೊರೊನ್ಹಾಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. 

ಕಳೆದ ಆವೃತ್ತಿಯ 23 ವರ್ಷದೊಳಗಿನವರ ಬಿಸಿಸಿಐ ಸಿಕೆ ನಾಯ್ಡು ಟ್ರೋಫಿಯಲ್ಲಿ ಆರ್‌.ಸ್ಮರಣ್‌ ಮತ್ತು ಮ್ಯಾಕ್ನಿಲ್‌ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.  

ADVERTISEMENT

ತಂಡದ ಪರ ಸ್ಮರಣ್‌ 16 ಇನ್ನಿಂಗ್ಸ್‌ಗಳಿಂದ 829 ರನ್‌ ಕಲೆ ಹಾಕಿ ತಂಡದ ಪರ ಎರಡನೆ ಅತಿ ಹೆಚ್ಚು ರನ್‌ ಹೊಡೆದ ಆಟಗಾರ ಎನಿಸಿದ್ದರು. ಇನ್ನು ನೊರೊನ್ಹಾ ಇನ್ತಿಂಗ್ಸ್‌ವೊಂದರಲ್ಲಿ 117 ರನ್‌ ಹೊಡೆದು ಒಟ್ಟು  638 ರನ್‌ ಮೊತ್ತ ಗಳಿಸಿದ್ದರು. 

ಪ್ರಸಕ್ತ ರಣಜಿ ಟೂರ್ನಿಗೆ ಪಾದಾರ್ಪಣೆ ಮಾಡಿರುವ ಸ್ಮರಣ್‌ ಮೂರು ಪಂದ್ಯಗಳನ್ನ ಆಡಿದ್ದಾರೆ. ಉತ್ತಮ ಲಯದಲ್ಲಿರುವ ನೊರೊನ್ಹಾ ಸಿಕೆ ನಾಯ್ಡು ಟೂರ್ನಿಯಲ್ಲಿ ತ್ರಿಪುರ ವಿರುದ್ಧ ತ್ರಿಶತಕ ಸಿಡಿಸಿದ್ದಾರೆ.  

ಟೂರ್ನಿಯಲ್ಲಿ ಕರ್ನಾಟಕ ಕ್ರಿಕೆಟ್‌ ತಂಡ ಉತ್ತರಾಖಂಡ, ತ್ರಿಪುರ, ಸೌರಾಷ್ಟ್ರ, ಸಿಕ್ಕಿಂ, ತಮಿಳುನಾಡು, ಬರೋಡಾ ತಂಡಗಳೊಂದಿಗೆ  ಬಿ ಗುಂಪಿನಲ್ಲಿ ಸ್ಥಾನ ‍ಪಡೆದಿದೆ. ಹಾಲಿ ಚಾಂಪಿಯನ್‌ ಕರ್ನಾಟಕ ಕ್ರಿಕೆಟ್‌ ತಂಡ ನ.23ರಂದು ಅಭಿಯಾನ ಆರಂಭಿಸಲಿದೆ.  

ಸಂಭಾವ್ಯ ತಂಡ: ಕೆ.ಎಲ್‌.ರಾಹುಲ್‌, ಮಯಂಕ್‌ ಅಗರ್‌ವಾಲ್‌, ಮನೀಶ್‌ ಪಾಂಡೆ, ಪ್ರಸಿದ್ಧಎಂ.ಕೃಷ್ಣ, ದೇವದತ್‌ ಪಡಿಕ್ಕಲ್‌, ಎಲ್‌.ಆರ್‌.ಚೇತನ್‌, ಮ್ಯಾಕ್ನಿಲ್‌ ನೊರೊನ್ಹಾ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ಶ್ರೀಜಿತ್‌ (ವಿಕೆಟ್‌ ಕೀಪರ್‌), ಅಭಿನವ್‌ ಮನೋಹರ್, ಮನೋಜ್‌ ಭಾಂಡಗೆ, ಹಾರ್ದಿಕ್‌ ರಾಜ್‌, ವಿ.ಕೌಶಿಕ್‌, ವಿದ್ಯಾಧರ್‌ ಪಾಟೀಲ್‌, ಶುಭಾಂಗ್‌ ಹೆಗಡೆ, ಅಭಿಲಾಶ್‌ ಶೆಟ್ಟಿ, ಮೊಹ್ಸಿನ್‌ ಖಾನ್‌, ಆರ್‌.ಸ್ಮರಣ್‌, ಲವಿನಿತ್‌ ಸಿಸೋಡಿಯಾ (ವಿಕೆಟ್‌ ಕೀಪರ್‌), ವೈಶಾಕ್‌ ವಿಜಯ್‌ ಕುಮಾರ್‌,   ಮನ್ವಂತ್‌ ಕುಮಾರ್‌ ಎಲ್‌, ಯಶೋವರ್ಧನ್‌ ಪರಾಣ್‌ತಾಪ್‌, ಅದ್ಕೋಶ್‌ ಹೆಗಡೆ, ಶರತ್‌ ಬಿ.ಆರ್‌ (ವಿಕೆಟ್‌ ಕೀಪರ್‌), ಪ್ರವೀಣ್‌ ದುಬೆ, ವೆಂಕಟೇಶ್‌ ಎಂ. 

ಕೋಚ್‌: ಯರ್‍ರೆಗೌಡ : ಬೌಲಿಂಗ್‌ ಕೋಚ್‌; ಮನ್ಸೂರ್‌ ಅಲಿ ಖಾನ್‌:ಫೀಲ್ಡಿಂಗ್‌ ಕೋಚ್‌; ಶಬರೀಶ್‌ ಪಿ ಮೋಹನ್‌: ಮ್ಯಾನೇಜರ್‌ : ಎ.ರಮೇಶ್‌ ರಾವ್‌: ಫಿಸಿಯೊಥೆರೆಪಿಸ್ಟ್‌; ಜಾಬಾ ಪ್ರಭು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.