ADVERTISEMENT

ಸೂಪರ್‌ ಲೀಗ್‌: ಹೆಚ್ಚು ರನ್‌ ಗಳಿಸಿ ದಾಖಲೆ ಬರೆದ ಸ್ಮೃತಿ ಮಂದಾನ 

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2018, 14:29 IST
Last Updated 6 ಆಗಸ್ಟ್ 2018, 14:29 IST
ಸ್ಮೃತಿ ಮಂದಾನ (ಸಂಗ್ರಹ ಚಿತ್ರ).
ಸ್ಮೃತಿ ಮಂದಾನ (ಸಂಗ್ರಹ ಚಿತ್ರ).    

ಟೌನ್‌ಟನ್: ಇಂಗ್ಲೆಂಡ್‍ನ ಟೌನ್‌ಟನ್‌ನಲ್ಲಿನಡೆಯುತ್ತಿರುವ ಸೂಪರ್ ಲೀಗ್ ಟ್ವಿಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಭಾರತದ ಸ್ಮೃತಿ ಮಂದಾನ ಹೆಚ್ಚು ರನ್‌ (338*) ಗಳಿಸಿಹೊಸ ದಾಖಲೆ ಬರೆದಿದ್ದಾರೆ.

2016ರಲ್ಲಿ ವೆಸ್ಟ್‌ ವಿಂಡೀಸ್‌ ಮೂಲದ ಸ್ಟೆಫಾನಿ ಟೇಲರ್‌ 289 ರನ್‌ ಕಲೆ ಹಾಕಿದ್ದುಈವರೆಗಿನ ದಾಖಲೆಯಾಗಿತ್ತು.

ಸೂಪರ್‌ ಲೀಗ್‌ನಲ್ಲಿ ವೆಸ್ಟರ್ನ್‌ ಸ್ಟೋಮ್‌ ತಂಡಪರಆಡಿರುವ ಮಂದಾನ ಆರು ಪಂದ್ಯಗಳಲ್ಲಿ48, 37, 52*, 43*,102, 56 ರನ್‌ ಗಳಿಸಿಉತ್ತಮ ಫಾರ್ಮ್‌ನಲ್ಲಿದ್ದಾರೆ.ಜತೆಗೆ, ಹೀದರ್ ನೈಟ್‌, ಸ್ಟಾಫನಿ ಟೇಲರ್‌, ರಾಚೆಲ್‌ ಪ್ರೀಸ್ಟ್‌ ಮಿಂಚಿನ ಆಟವಾಡಿ ಗಮನ ಸೆಳೆದಿದ್ದಾರೆ.

ADVERTISEMENT

ವೆಸ್ಟರ್ನ್ ಸ್ಟೋಮ್ ಪರ ಮೂರು ಆವೃತ್ತಿಗಳಲ್ಲಿ ಹೆಚ್ಚು ರನ್‌ ಗಳಿಸಿದ ಆಟಗಾರ್ತಿಯರು
2018: ಸ್ಮೃತಿ ಮಂದಾನ – 338*
2017: ರಾಚೆಲ್‌ ಪ್ರೀಸ್ಟ್‌ - 261 ರನ್‌
2016: ಸ್ಟೆಫಾನಿ ಟೇಲರ್‌ - 289 ರನ್‌

ಸ್ಮೃತಿ ಮಂದಾನಐಸಿಸಿ ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್ಸ್‌ನಲ್ಲಿ4ನೇ ಸ್ಥಾನ ಹಾಗೂ ಟಿ–20ಯಲ್ಲಿ 13ನೇ ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.