ADVERTISEMENT

ಜಿಎಸ್‌ಡಬ್ಲ್ಯು ಸ್ಫೋರ್ಟ್ಸ್‌: ಕ್ರಿಕೆಟ್ ನಿರ್ದೇಶಕರಾಗಿ ಗಂಗೂಲಿ

ಪಿಟಿಐ
Published 17 ಅಕ್ಟೋಬರ್ 2024, 15:41 IST
Last Updated 17 ಅಕ್ಟೋಬರ್ 2024, 15:41 IST
ಗಂಗೂಲಿ
ಗಂಗೂಲಿ   

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ನ ಕ್ರಿಕೆಟ್‌ ನಿರ್ದೇಶಕರಾಗಿ ಗುರುವಾರ ನೇಮಕ ಮಾಡಲಾಗಿದೆ.

ಐಪಿಎಲ್‌ ಮತ್ತು ಡಬ್ಲ್ಯುಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಜೊತೆ ದಕ್ಷಿಣ ಆಫ್ರಿಕಾದ ಎಸ್‌ಎ20 ಫ್ರಾಂಚೈಸಿಯಾದ ಪ್ರಿಟೋರಿಯಾ ಕ್ಯಾಪಿಟಲ್ಸ್‌ ಪ್ರಾಂಚೈಸಿ ಈ ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ ವ್ಯಾಪ್ತಿಯಲ್ಲಿದೆ. ಇವುಗಳ ಮೇಲ್ವಿಚಾರಣೆಯ ಪಾತ್ರವನ್ನು ಗಂಗೂಲಿ ವಹಿಸಲಿದ್ದಾರೆ.

ಐಪಿಎಲ್‌ ಮತ್ತು ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿಯ ಮಾಲೀಕತ್ವನ್ನು ಜೆಎಸ್‌ಡಬ್ಲ್ಗು ಮತ್ತು ಜಿಎಂಆರ್‌ ಗ್ರೂಪ್‌ ಜಂಟಿಯಾಗಿ ವಹಿಸಿಕೊಂಡಿವೆ. ಆದರೆ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾ ಕ್ಯಾಪಿಟಲ್ಸ್‌ ಮಾಲೀಕತ್ವವನ್ನು ಜೆಎಸ್‌ಡಬ್ಲ್ಯು ಮಾತ್ರ ಹೊಂದಿದೆ.

ADVERTISEMENT

ಗಂಗೂಲಿ 2019ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸಲಹೆಗಾರರಾಗಿ ನೇಮಕಗೊಂಡಿದ್ದರು. ರಿಕಿ ಪಾಂಟಿಂಗ್ ಕೋಚ್‌ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.