ADVERTISEMENT

ಭಾರತದ ಎದುರಿನ ಸೋಲಿನ ಬೆನ್ನಲ್ಲೇ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತರಾದ ಡಿ ಕಾಕ್

ಏಜೆನ್ಸೀಸ್
Published 31 ಡಿಸೆಂಬರ್ 2021, 0:50 IST
Last Updated 31 ಡಿಸೆಂಬರ್ 2021, 0:50 IST
ಕ್ವಿಂಟನ್ ಡಿ ಕಾಕ್ –ಎಎಫ್‌ಪಿ ಚಿತ್ರ
ಕ್ವಿಂಟನ್ ಡಿ ಕಾಕ್ –ಎಎಫ್‌ಪಿ ಚಿತ್ರ   

ಸೆಂಚುರಿಯನ್: ಭಾರತದ ಎದುರಿನ ಸೋಲಿನ ಬೆನ್ನಲ್ಲೇ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್‌ ಕ್ವಿಂಟನ್ ಡಿ ಕಾಕ್ ಅವರು, ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ನಿವೃತ್ತನಾಗುತ್ತಿರುವುದಾಗಿ ಅವರು ತಿಳಿಸಿದ್ದಾರೆ.

29 ವರ್ಷದ ಡಿ ಕಾಕ್ ಅವರ ಪತ್ನಿ ತುಂಬು ಗರ್ಭಿಣಿ. ಆದ್ದರಿಂದ ಭಾರತ ಎದುರಿನ ಎರಡನೇ ಮತ್ತು ಮೂರನೇ ಟೆಸ್ಟ್‌ಗೆ ಅವರು ಲಭ್ಯ ಇರುವುದಿಲ್ಲ ಎಂದು ಈಗಾಗಲೇ ತಿಳಿಸಲಾಗಿತ್ತು. ಎರಡು ಬಾರಿ ದಕ್ಷಿಣ ಆಫ್ರಿಕಾದ ಶ್ರೇಷ್ಠ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗಿದ್ದರು. ಟ್ವೆಂಟಿ20 ವಿಶ್ವಕಪ್ ಟೂರ್ನಿ ವೇಳೆ ಬ್ಲ್ಯಾಕ್‌ ಲಿವ್ಸ್ ಮ್ಯಾಟರ್ ಅಭಿಯಾನಕ್ಕೆ ಬೆಂಬಲ ಸೂಚಿಸದ ಕಾರಣ ವಿವಾದಕ್ಕೆ ಒಳಗಾಗಿದ್ದರು.

54 ಟೆಸ್ಟ್ ಪಂದ್ಯಗಳಲ್ಲಿ 3,300 ರನ್ ಕಲೆ ಹಾಕಿರುವ ಅವರು 221 ಕ್ಯಾಚ್ ಪಡೆದುಕೊಂಡಿದ್ದು 11 ಸ್ಟಂಪಿಂಗ್ ಮಾಡಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.