ಮೀರಪುರ (ಬಾಂಗ್ಲಾದೇಶ), (ಎಪಿ): ವೇಗದ ಬೌಲರ್ ಕಗಿಸೊ ರಬಾಡ (46ಕ್ಕೆ6) ಅವರ ಅಮೋಘ ಬೌಲಿಂಗ್ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ, ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು. ಇದು ಹತ್ತು ವರ್ಷಗಳ ಅವಧಿಯಲ್ಲಿ ಬಾಂಗ್ಲಾದೇಶ ತಂಡ ಏಷ್ಯಾ ಖಂಡದಲ್ಲಿ ದಾಖಲಿಸಿದ ಮೊದಲ ಜಯ ಎನಿಸಿತು.
ಪಂದ್ಯದ ನಾಲ್ಕನೇ ದಿನವಾದ ಗುರುವಾರ ಬೆಳಿಗ್ಗೆ ಬಾಂಗ್ಲಾದೇಶ (3ನೇ ದಿನದಾಟದ ಕೊನೆಗೆ 7 ವಿಕೆಟ್‌ಗೆ 283) ತನ್ನ ಎರಡನೇ ಇನಿಂಗ್ಸ್‌ನಲ್ಲಿ 307 ರನ್‌ಗಳಿಗೆ ಆಲೌಟ್ ಆಯಿತು. ಗೆಲುವಿಗೆ ಬೇಕಾದ 106 ರನ್‌ಗಳ ಗುರಿಯನ್ನು 22 ಓವರುಗಳಲ್ಲಿ 3 ವಿಕೆಟ್ ನಷ್ಟದಲ್ಲಿ ತಲುಪಿತು.
ದಕ್ಷಿಣ ಆಫ್ರಿಕಾ ಏಷ್ಯಾದಲ್ಲಿ ಈ ಹಿಂದೆ 2014ರಲ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯವೊಂದರಲ್ಲಿ (ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ) ಜಯಗಳಿಸಿತ್ತು.
ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಛತ್ತೊಗ್ರಾಮ್‌ನಲ್ಲಿ ಮಂಗಳವಾರ (ಆ. 29 ರಂದು) ಆರಂಭವಾಗಲಿದೆ.
ಸ್ಕೋರುಗಳು:
ಬಾಂಗ್ಲಾದೇಶ: 106 ಮತ್ತ 307 (ಮೆಹಿದಿ ಹಸನ್ ಮಿರಾಜ್ 97; ಕಗಿಸೊ ರಬಾಡ 46ಕ್ಕೆ6, ಕೇಶವ ಮಹಾರಾಜ್ 105ಕ್ಕೆ3); ದಕ್ಷಿಣ ಆಫ್ರಿಕಾ: 308 ಮತ್ತು 22 ಓವರುಗಳಲ್ಲಿ 3 ವಿಕೆಟ್‌ಗೆ 106 (ಟೋನಿ ಡಿ ಝೊರ್ಜಿ 41, ಟ್ರಿಸ್ಟನ್ ಸ್ಟಬ್ಸ್ ಔಟಾಗದೇ 30; ತೈಜುಲ್ ಇಸ್ಲಾಂ 43ಕ್ಕೆ3). ಪಂದ್ಯದ ಆಟಗಾರ: ಕೈಲ್ ವರೇಯ್ನ್ (ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.