ತಿರುವನಂತಪುರ: ಮಧ್ಯಮವೇಗದ ಬೌಲರ್ ಎಸ್. ಶ್ರೀಶಾಂತ್ ಕೇರಳ ರಾಜ್ಯದ ಸಂಭವನೀಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಸಿದ್ಧತೆ ನಡೆಸಿರುವ ತಂಡ ಇದಾಗಿದೆ. 26 ಆಟಗಾರರನ್ನು ಈ ಸಂಭವನೀಯ ತಂಡದಲ್ಲಿ ಆಯ್ಕೆ ಮಾಡಲಾಗಿದೆ. 37 ವರ್ಷದ ಶ್ರೀಶಾಂತ್ ಕೂಡ ಅದರಲ್ಲಿ ಒಬ್ಬರಾಗಿದ್ದಾರೆ.
ಈ ತಂಡದಲ್ಲಿ ಸಂಜು ಸ್ಯಾಮ್ಸನ್, ಸಚಿನ್ ಬೇಬಿ, ಜಲಜ್ ಸಕ್ಸೆನಾ, ಕನ್ನಡಿಗ ರಾಬಿನ್ ಉತ್ತಪ್ಪ ಮತ್ತು ಬಾಸಿಲ್ ಥಂಪಿ ಕೂಡ ಇದ್ದಾರೆ.
ಇದೇ 20 ರಿಂದ 30ರವರೆಗೆ ನಡೆಯಲಿರುವ ಸಿದ್ಧತಾ ಶಿಬಿರದಲ್ಲಿ ಆಟಗಾರರು ಭಾಗವಹಿಸುವರು.
2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಶಾಂತ್ ಆರೋಪಿಯಾಗಿದ್ದರು. ಅವರ ಮೇಲೆ ಇದ್ದ ನಿಷೇಧವನ್ನು ಈಚೆಗೆ ಬಿಸಿಸಿಐ ತೆರವುಗೊಳಿಸಿತ್ತು. ಶ್ರೀಶಾಂತ್ 2007ರ ಟ್ವೆಂಟಿ–20 ವಿಶ್ವಕಪ್ ಮತ್ತು 2011ರ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿ ಆಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.