ADVERTISEMENT

T20 WC: ನೆದರ್‌ಲ್ಯಾಂಡ್ಸ್ ವಿರುದ್ಧ 83 ರನ್‌ಗಳ ಗೆಲುವು ದಾಖಲಿಸಿದ ಶ್ರೀಲಂಕಾ

ಪಿಟಿಐ
Published 17 ಜೂನ್ 2024, 8:28 IST
Last Updated 17 ಜೂನ್ 2024, 8:28 IST
<div class="paragraphs"><p>ಶ್ರೀಲಂಕಾ ತಂಡದ ಆಟಗಾರರು</p></div>

ಶ್ರೀಲಂಕಾ ತಂಡದ ಆಟಗಾರರು

   

(ಪಿಟಿಐ ಚಿತ್ರ)

ಸೇಂಟ್ ಲೂಸಿಯಾ: ಶ್ರೀಲಂಕಾ ತಂಡವು ಟಿ20 ವಿಶ್ವಕಪ್‌ನ ‘ಡಿ’ ಗುಂಪಿನ ಔಪಚಾರಿಕ ಪಂದ್ಯದಲ್ಲಿ ನೆದರ್ಲೆಂಡ್ಸ್‌ ತಂಡವನ್ನು 83 ರನ್‌ಗಳಿಂದ ಮಣಿಸಿ ಲೀಗ್ ಹಂತದ ಅಭಿಯಾನವನ್ನು ಮುಗಿಸಿತು.

ADVERTISEMENT

ಗುಂಪಿನಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದಿರುವ ದಕ್ಷಿಣ ಆಫ್ರಿಕಾ (8 ಅಂಕ) ಮತ್ತು ಬಾಂಗ್ಲಾದೇಶ (6 ಅಂಕ) ತಂಡಗಳು ಈಗಾಗಲೇ ಸೂಪರ್‌ ಎಂಟರ ಘಟ್ಟಕ್ಕೆ ಪ್ರವೇಶ ಪಡೆದಿವೆ. ಸೋಮವಾರ ನಡೆದ ಕೊನೆಯ ಪಂದ್ಯ ಗೆಲ್ಲುವ ಮೂಲಕ ಶ್ರೀಲಂಕಾ ಒಟ್ಟಾರೆ 3 ಪಾಯಿಂಟ್ಸ್‌  ಪಡೆಯಿತು.

ಮತ್ತೊಂದೆಡೆ ನೇಪಾಳ ವಿರುದ್ಧ ಮಾತ್ರ ಗೆಲುವು ಸಾಧಿಸಿದ ನೆದರ್ಲೆಂಡ್ಸ್‌ ತಂಡವೂ ಟೂರ್ನಿಯಿಂದ ಹೊರಬಿತ್ತು.

ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 201 ರನ್‌ ಕಲೆಹಾಕಿತು. ಕುಶಾಲ್‌ ಮೆಂಡಿಸ್‌ (46; 29ಎ, 4x5) ಮತ್ತು ಚರಿತ್‌ ಅಸಲಂಕ (46; 21ಎ, 4x1, 6x5) ಉಪಯುಕ್ತ ಕಾಣಿಕೆ ನೀಡಿದರು. ಆ್ಯಂಜೆಲೊ ಮ್ಯಾಥ್ಯೂಸ್ (ಔಟಾಗದೇ 30; 15ಎ, 4x1, 6x2) ಮತ್ತು ವನಿಂದು ಹಸರಂಗ (ಔಟಾಗದೇ 20; 6ಎ, 4x1, 6x2) ಕೊನೆಯಲ್ಲಿ ಅಬ್ಬರಿಸಿ ತಂಡದ ಮೊತ್ತ ಇನ್ನೂರರ ಗಡಿ ದಾಟಿಸಿದರು. ಡಚ್ ಪಡೆ 16.4 ಓವರ್‌ಗಳಲ್ಲಿ 118 ರನ್‌ ಗಳಿಸಿ ಸವಾಲು ಮುಗಿಸಿತು. ಆರಂಭ ಆಟಗಾರ ಮೈಕೆಲ್ ಲೆವಿಟ್ ಮತ್ತು ನಾಯಕ ಸ್ಕಾಟ್ ಎಡ್ವರ್ಡ್ಸ್ ತಲಾ 31 ರನ್‌ ಗಳಿಸಿ ಸ್ವಲ್ಪ ಹೋರಾಟ ತೋರಿದರು. ನುವಾನ್ ತುಷಾರ ಮೂರು ವಿಕೆಟ್‌ ಪಡೆದರೆ, ವನಿಂದು ಹಸರಂಗ ಮತ್ತು ಮಥೀಶ ಪಥಿರಾಣ ತಲಾ ಎರಡು ವಿಕೆಟ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 201 (ಕುಶಾಲ್‌ ಮೆಂಡಿಸ್‌ 46, ಧನಂಜಯ ಡಿಸಿಲ್ವ 34, ಚರಿತ್‌ ಅಸಲಂಕ 46, ಆ್ಯಂಜೆಲೊ ಮ್ಯಾಥ್ಯೂಸ್‌ ಔಟಾಗದೇ 30; ಲೋಗನ್ ವ್ಯಾನ್ ಬೀಕ್ 45ಕ್ಕೆ 2). ನೆದರ್ಲೆಂಡ್ಸ್‌: 16.4 ಓವರ್‌ಗಳಲ್ಲಿ 118 (ಮೈಕೆಲ್ ಲೆವಿಟ್ 31, ಸ್ಕಾಟ್ ಎಡ್ವರ್ಡ್ಸ್ 31; ನುವಾನ್ ತುಷಾರ 24ಕ್ಕೆ 3, ವನಿಂದು ಹಸರಂಗ 25ಕ್ಕೆ 2, ಮಥೀಶ ಪಥಿರಾಣ 12ಕ್ಕೆ 2). ಪಂದ್ಯದ ಆಟಗಾರ: ಚರಿತ್‌ ಅಸಲಂಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.