ADVERTISEMENT

ನಾಲ್ಕನೇ ಟಿ20ಯಲ್ಲಿ ಅಂಪೈರ್ ನಿರ್ಧಾರದ ವಿರುದ್ಧ ಅಸಮಾಧಾನ: ಕೊಟ್ಜಿಯಗೆ ವಾಗ್ದಂಡನೆ

ಪಿಟಿಐ
Published 19 ನವೆಂಬರ್ 2024, 14:04 IST
Last Updated 19 ನವೆಂಬರ್ 2024, 14:04 IST
<div class="paragraphs"><p>ಕೊಟ್ಜಿಯ</p></div>

ಕೊಟ್ಜಿಯ

   

ಪಿಟಿಐ ಚಿತ್ರ

ದುಬೈ: ಭಾರತ ವಿರುದ್ಧ ಜೊಹಾನೆಸ್‌ಬರ್ಗ್‌ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದ ವೇಳೆ ಅಂಪೈರ್‌ ನಿರ್ಧಾರದ ವಿರುದ್ಧ ಅಸಮಾಧಾನ ಹೊರಹಾಕಿದ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಜೆರಾಲ್ಡ್‌ ಕೊಟ್ಜಿಯ ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ ಎಂದು ಐಸಿಸಿ ಮಂಗಳವಾರ ತಿಳಿಸಿದೆ.

ADVERTISEMENT

ತಮ್ಮ ಎಸೆತವನ್ನು ವೈಡ್‌ ಎಂದು ಅಂಪೈರ್‌ ಸಾರಿದ ತಕ್ಷಣ ಕೊಟ್ಜಿಯ ಅನುಚಿತ ಪದ ಪ್ರಯೋಗಿಸಿದ್ದರು.

‘ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ನಾಲ್ಕನೇ ಟಿ20 ಪಂದ್ಯದ ವೇಳೆ ಕೊಟ್ಜಿಯ ಅವರು ಐಸಿಸಿ ನೀತಿಸಂಹಿತೆಯ ವಿಧಿ 2.8 ಉಲ್ಲಂಘಿಸಿರುವುದು ದೃಢಪಟ್ಟಿದೆ. ಈ ವಿಧಿಯು  ಅಂತರರಾಷ್ಟ್ರೀಯ ಪಂದ್ಯವೊಂದರ ವೇಳೆ ಅಂಪೈರ್‌ ನಿರ್ಧಾರದ ವಿರುದ್ಧ ಆಟಗಾರರು ಮತ್ತು ನೆರವು ಸಿಬ್ಬಂದಿಯ ವರ್ತನೆಗೆ ಸಂಬಂಧಿಸಿದ್ದಾಗಿದೆ.

‘ಕೊಟ್ಜಿಯ ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ ಮತ್ತು ಅವರ ಶಿಸ್ತು ದಾಖಲೆಗೆ ಒಂದು ಡಿಮೆರಿಟ್‌ ಪಾಯಿಂಟ್‌ ಸೇರಿಸಲಾಗಿದೆ. ಅವರು ತಪ್ಪು ಒಪ್ಪಿಕೊಂಡಿದ್ದಾರೆ. ಮ್ಯಾಚ್‌ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಅವರ ವಿಧಿಸಿದ ನಿರ್ಬಂಧವನ್ನು ಸ್ವೀಕರಿಸಿದ್ದಾರೆ’ ಎಂದು ಐಸಿಸಿ ಹೇಳಿಕೆ ತಿಳಿಸಿದೆ.

ಒಬ್ಬ ಆಟಗಾರ, 24 ತಿಂಗಳ ಅವಧಿಯಲ್ಲಿ ನಾಲ್ಕು ಅಥವಾ ಹೆಚ್ಚಿನ ಡಿಮೆರಿಟ್ಸ್‌ ಪಾಯಿಂಟ್ಸ್ ಪಡೆದರೆ, ಅವು ಅಮಾನತು ಪಾಯಿಂಟ್ಸ್‌ ಆಗಿ ಆಟಗಾರನ ಮೇಲೆ ನಿರ್ಬಂಧ ಹೇರಲು ಅವಕಾಶವಾಗುತ್ತದೆ. ಎರಡು ಅಮಾನತು ಪಾಯಿಂಟ್ಸ್‌ ಪಡೆದರೆ ಆ ಆಟಗಾರ ಒಂದು ಟೆಸ್ಟ್ ಅಥವಾ ಎರಡು ಏಕದಿನ ಪಂದ್ಯಗಳಿಗೆ ನಿಷೇಧಕ್ಕೆ ಒಳಗಾಗುತ್ತಾನರೆ.

ನಾಲ್ಕನೇ ಟಿ20 ಪಂದ್ಯವನ್ನು ಭಾರತ ಭರ್ಜರಿಯಾಗಿ ಗೆದ್ದುಕೊಂಡಿತ್ತು. ಭಾರತ 283 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ 148 ರನ್ನಿಗೆ ಮಗುಚಿತ್ತು. ಭಾರತ 135 ರನ್‌ಗಳಿಂದ ಗೆದ್ದು ಸರಣಿಯನ್ನು 3–1 ರಿಂದ ಕೈವಶ ಮಾಡಿಕೊಂಡಿತ್ತು. ಇದು ರನ್ ಆಧಾರದಲ್ಲಿ ಭಾರತ ಗಳಿಸಿದ ಅತಿ ದೊಡ್ಡ ವಿಜಯವೆನಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.