ವಿಶಾಖಪಟ್ಟಣ: ಮಿಚೆಲ್ ಸ್ಟಾರ್ಕ್ (53ಕ್ಕೆ 5 ವಿಕೆಟ್) ಸೇರಿದಂತೆ ಆಸ್ಟ್ರೇಲಿಯಾ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡವು ಇಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ 26 ಓವರ್‌ಗಳಲ್ಲಿ 117 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
ಈ ಮೂಲಕ ಆಸ್ಟ್ರೇಲಿಯಾ ಗೆಲುವಿಗೆ ಸುಲಭ ಗುರಿ ಒಡ್ಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. 32 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ಶುಭಮನ್ ಗಿಲ್ (0) ಹಾಗೂ ನಾಯಕ ರೋಹಿತ್ ಶರ್ಮಾ (13) ವಿಕೆಟ್‌ಗಳು ನಷ್ಟವಾದವು.
ಅತಿಥೇಯರನ್ನು ಮಿಚೆಲ್ ಮಾರಕವಾಗಿ ಕಾಡಿದರು. ಪರಿಣಾಮ 49 ರನ್‌ಗೆ ಐದು ವಿಕೆಟ್ ಕಳೆದುಕೊಂಡಿತು.
ಸೂರ್ಯಕುಮಾರ್ ಯಾದವ್ ಸತತ ಎರಡನೇ ಬಾರಿಗೆ ಗೋಲ್ಡನ್ ಡೆಕ್ ಔಟ್ ಆದರು. ಕೆ.ಎಲ್. ರಾಹುಲ್ (9) ಹಾಗೂ ಹಾರ್ದಿಕ್ ಪಾಂಡ್ಯ (1) ಪ್ರಭಾವಿ ಎನಿಸಲಿಲ್ಲ.
31 ರನ್ ಗಳಿಸಿದ ವಿರಾಟ್ ಕೊಹ್ಲಿ ಭರವಸೆ ಹುಟ್ಟು ಹಾಕಿದರೂ ಅವರ ಓಟಕ್ಕೆ ನಥನ್ ಎಲ್ಲಿಸ್ ತಡೆ ಒಡ್ಡಿದರು. ಇಲ್ಲಿಂದ ಬಳಿಕ ಮಗದೊಮ್ಮೆ ಕುಸಿತ ಕಂಡ ಭಾರತ 26 ಓವರ್‌ಗಳಲ್ಲೇ ಆಲೌಟ್ ಆಯಿತು.
ಕೆಳ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ 29 ರನ್ ಗಳಿಸಿ ಔಟಾಗದೆ ಉಳಿದರು. ರವೀಂದ್ರ ಜಡೇಜ 16, ಕುಲದೀಪ್ ಯಾದವ್ 4 ರನ್ ಗಳಿಸಿ ಔಟ್ ಔದರು. ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್‌ಗೆ ಖಾತೆ ತೆರೆಯಲಾಗಲಿಲ್ಲ.
ಆಸೀಸ್ ಪರ 53 ರನ್ ತೆತ್ತ ಮಿಚೆಲ್ ಸ್ಟಾರ್ಕ್ ಐದು ವಿಕೆಟ್ ಕಬಳಿಸಿದರು. ಸೀನ್ ಅಬಾಟ್ ಮೂರು ಮತ್ತು ನಥನ್ ಎಲ್ಲಿಸ್ ಎರಡು ವಿಕೆಟ್ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.