ಮುಂಬೈ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾದ ಜೆದ್ದಾದಲ್ಲಿ ಇದೇ 24 ಮತ್ತು 25ರಂದು ನಡೆಯಲಿದೆ.
ಈ ಬಿಡ್ ಪ್ರಕ್ರಿಯೆಯಲ್ಲಿ ಒಟ್ಟು 1,524 ಕ್ರಿಕೆಟಿಗರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಇಂಗ್ಲೆಂಡ್ನ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್, ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.
ಮತ್ತೊಂದೆಡೆ ಅಮೆರಿಕ ಹಾಗೂ ಇಟಲಿಯ ಆಟಗಾರರು ಕಣದಲ್ಲಿದ್ದಾರೆ. ಥಾಮಸ್ ಡ್ರಾಕಾ ಐಪಿಎಲ್ ಕಣದಲ್ಲಿರುವ ಇಟಲಿಯ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಭಾರತೀಯ ಮೂಲದ ಅಮೆರಿಕ ಆಟಗಾರ ಸೌರಭ್ ನೇತ್ರವಾಲ್ಕರ್ ಸಹ ಪಟ್ಟಿಯಲ್ಲಿದ್ದಾರೆ.
ಈ ಬಿಡ್ನಲ್ಲಿ ರಿಷಭ್ ಪಂತ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಯಜುವೇಂದ್ರ ಚಾಹಲ್, ಆರ್.ಅಶ್ವಿನ್ ಸೇರಿ ಹಲವು ಖ್ಯಾತನಾಮ ಆಟಗಾರರು ಲಭ್ಯರಿದ್ದಾರೆ. ಈ ಆಟಗಾರರಿಗೆ ₹2 ಕೋಟಿ ಮೂಲಬೆಲೆ ನಿಗದಿಯಾಗುವ ಸಾಧ್ಯತೆಯಿದೆ.
ಮೊಹಮ್ಮದ್ ಶಮಿ, ಖಲೀಲ್ ಅಹ್ಮದ್, ಮುಕೇಶ್ ಕುಮಾರ್, ವೆಂಕಟೇಶ್ ಅಯ್ಯರ್, ಆವೇಶ್ ಖಾನ್, ದೀಪಕ್ ಚಾಹರ್, ಇಶಾನ್ ಕಿಶನ್, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ದೇವದತ್ತ ಪಡಿಕ್ಕಲ್, ಕೃಣಾಲ್ ಪಾಂಡ್ಯ, ಹರ್ಷಲ್ ಪಟೇಲ್, ಪ್ರಸಿದ್ಧ ಕೃಷ್ಣ, ಟಿ.ನಟರಾಜನ್, ವಾಷ್ಟಿಂಗ್ಟನ್ ಸುಂದರ್, ಉಮೇಶ್ ಯಾದವ್, ಸರ್ಫರಾಜ್ ಖಾನ್, ಪೃಥ್ವಿ ಶಾ ಕಣದಲ್ಲಿರುವ ಇತರೆ ಪ್ರಮುಖ ಭಾರತೀಯ ಆಟಗಾರರಾಗಿದ್ದಾರೆ.
ಇಂಗ್ಲೆಂಡ್ನ ಜೇಮ್ಸ್ ಆ್ಯಂಡರ್ಸನ್, ಆಸ್ಟ್ರೇಲಿಯಾದ ನೇಥನ್ ಲಯನ್, ಮಿಚೆಲ್ ಸ್ಟಾರ್ಕ್ ಸಹ ಬಿಡ್ನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.