ನವದೆಹಲಿ: ‘ಕೋವಿಡ್ ಪೀಡಿತರ ಸಂಕಷ್ಟಕ್ಕೆ ಮಿಡಿದಿರುವಕ್ರೀಡಾಪಟುಗಳು ತಮ್ಮ ಕೈಲಾದಷ್ಟು ದೇಣಿಗೆ ನೀಡುತ್ತಿದ್ದಾರೆ. ಅವರು ನೀಡುವ ಮೊತ್ತವನ್ನೇ ಮುಂದಿಟ್ಟುಕೊಂಡು ಕೆಲವರು ಟೀಕೆ ಮಾಡುತ್ತಿರುವುದು ಸರಿಯಲ್ಲ’ ಎಂದು ಭಾರತದ ಹಿರಿಯ ಕ್ರಿಕೆಟಿಗ ಪ್ರಗ್ಯಾನ್ ಓಜಾ ಸೋಮವಾರ ಹೇಳಿದ್ದಾರೆ.
‘ಯಾರು ಎಷ್ಟು ಹಣ ಕೊಟ್ಟರು ಎಂಬುದು ಈಗ ಮುಖ್ಯವಲ್ಲ. ಇಂತಹ ಸವಾಲಿನ ಸಮಯದಲ್ಲಿ ಕೆಲವರಾದರೂ ನೆರವು ನೀಡಲು ಮುಂದಾಗಿದ್ದಾರೆ. ಅಂತಹವರನ್ನು ನಾವು ಶ್ಲಾಘಿಸಬೇಕು. ಅದನ್ನು ಬಿಟ್ಟು ಅವರ ಬಳಿ ಅಷ್ಟು ಆಸ್ತಿ ಇದೆ, ಕೊಟ್ಟಿದ್ದು ಮಾತ್ರ ಬಿಡಿಗಾಸು ಅಂತೆಲ್ಲಾ ದೂಷಿಸುವುದು ಎಳ್ಳಷ್ಟೂ ಸರಿಯಲ್ಲ’ ಎಂದು ಲೆಗ್ ಸ್ಪಿನ್ನರ್ ಓಜಾ, ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.