ADVERTISEMENT

ಜಿಂಬಾಬ್ವೆ ವಿರುದ್ಧ T20 ಸರಣಿ:ಭಾರತ ತಂಡಕ್ಕೆ ಸುದರ್ಶನ್, ಜಿತೇಶ್, ರಾಣಾ ಸೇರ್ಪಡೆ

ಅವರು ಸಂಜು ಸ್ಯಾಮ್ಸನ್‌, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಅವರಿಗೆ ಬದಲಿಯಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಪಿಟಿಐ
Published 2 ಜುಲೈ 2024, 14:36 IST
Last Updated 2 ಜುಲೈ 2024, 14:36 IST
<div class="paragraphs"><p>ಹರ್ಷಿತ್‌ ರಾಣಾ </p></div>

ಹರ್ಷಿತ್‌ ರಾಣಾ

   

ಪಿಟಿಐ ಚಿತ್ರ

ನವದೆಹಲಿ: ಸಾಯಿ ಸುದರ್ಶನ್, ಜಿತೇಶ್ ಶರ್ಮಾ ಮತ್ತು ಹರ್ಷಿತ್‌ ರಾಣಾ ಅವರನ್ನು, ಜಿಂಬಾಬ್ವೆ ವಿರುದ್ಧ ಟಿ20 ಕ್ರಿಕೆಟ್‌ ಸರಣಿಯ ಮೊದಲ ಎರಡು ಪಂದ್ಯಗಳನ್ನು ಆಡಲಿರುವ ಭಾರತ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಅವರು ಸಂಜು ಸ್ಯಾಮ್ಸನ್‌, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಅವರಿಗೆ ಬದಲಿಯಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ADVERTISEMENT

ಭಾರತವು ಈ ಸರಣಿಯ ಮೊದಲ ಪಂದ್ಯವನ್ನು ಜುಲೈ 6ರಂದು ಹರಾರೆಯಲ್ಲಿ ಆಡಲಿದೆ. ಸಂಜು, ದುಬೆ ಮತ್ತು ಯಶಸ್ವಿ ಅವರು ಅಮೆರಿಕ– ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆದ ಭಾರತ ತಂಡದ ಭಾಗವಾಗಿದ್ದರು. ಆದರೆ ಅವರು ಬೆರಿಲ್ ಚಂಡಮಾರುತದ ಕಾರಣ ಬಾರ್ಬಾಡೋಸ್‌ನಲ್ಲಿ ಸಿಲುಕಿ, ಜಿಂಬಾಬ್ವೆಗೆ ಹೋಗುವ ತಂಡ ಸೇರಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಈ ಮೂವರು ಭಾರತ ತಂಡದ ಇತರ ಆಟಗಾರರ ಜೊತೆ ಮಂಗಳವಾರ ಸಂಜೆ ಚಾರ್ಟರ್ ವಿಮಾನದಲ್ಲಿ ಹೊರಟಿದ್ದು, ಬುಧವಾರ ಬೆಳಿಗ್ಗೆ ದೆಹಲಿಗೆ ತಲುಪಲಿದ್ದಾರೆ. ನಂತರ ಆಟಗಾರರನ್ನು ಪ್ರಧಾನಿ ಮೋದಿ ಅವರು ಸನ್ಮಾನಿಸುವ ಕಾರ್ಯಕ್ರಮವಿದೆ.

ಟಿ20 ವಿಶ್ವಕಪ್‌ಗೆ ಭಾರತ ತಂಡದ ಮೀಸಲು ಆಟಗಾರರಾಗಿದ್ದ ಖಲೀಲ್ ಅಹ್ಮದ್ ಮತ್ತು ರಿಂಕು ಸಿಂಗ್ ಅವರೂ ಬಾರ್ಬಾಡೋಸ್‌ನಲ್ಲೇ ಇದ್ದಾರೆ. ಅವರ ಜಿಂಬಾಬ್ವೆ ಸರಣಿಗೆ ಆಯ್ಕೆಯಾಗಿದ್ದರೂ ಬಿಸಿಸಿಐ ಅವರ ಬದಲಿಗೆ ಬೇರೆ ಆಟಗಾರರನ್ನು ಹೆಸರಿಸಿಲ್ಲ.

ಸಾಯಿ ಸುದರ್ಶನ್‌, ಸದ್ಯ ಲಂಡನ್‌ನಲ್ಲಿದ್ದು ಕೌಂಟಿ ಆಡುತ್ತಿದ್ದಾರೆ. ಅವರು ತಕ್ಷಣ ಹರಾರೆಗೆ ತೆರಳುವ ನಿರೀಕ್ಷೆಯಿದೆ.

ಜಿಂಬಾಬ್ವೆ ವಿರುದ್ಧ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಿಗೆ ಪರಿಷ್ಕೃತ ತಂಡ ಇಂತಿದೆ:

ಶುಭಮನ್ ಗಿಲ್ (ನಾಯಕ), ಋತುರಾಜ್ ಗಾಯಕವಾಡ, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಧ್ರುವ್ ಜುರೇಲ್ (ವಿಕೆಟ್‌ ಕೀಪರ್‌), ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಆವೇಶ್ ಖಾನ್‌, ಖಲೀಲ್‌ ಅಹ್ಮದ್, ಮುಕೇಶ್ ಕುಮಾರ್, ತುಷಾರ್ ದೇಶಪಾಂಡೆ, ಸಾಯಿ ಸುದರ್ಶನ್, ಜಿತೇಶ್‌ ಶರ್ಮಾ (ವಿಕೆಟ್ ಕೀಪರ್) ಮತ್ತು ಹರ್ಷಿತ್ ರಾಣಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.