ವಿಶಾಖಪಟ್ಟಣ: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಚುಟುಕು ಕ್ರಿಕೆಟ್ ಟೂರ್ನಿಯಲ್ಲಿ ಸತತ ಹದಿನಾರನೇ ಪಂದ್ಯ ಜಯಿಸುವ ಕರ್ನಾಟಕ ತಂಡದ ಕನಸಿಗೆ ಬರೋಡಾದ ಲಕ್ಮನ್ ಮೆರಿವಾಲಾ ತಣ್ಣೀರೆರಚಿತು.
ವೈ.ಎಸ್. ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ’ಎ’ ಗುಂಪಿನ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿದ ಮೆರಿವಾಲಾ ಬಲದಿಂದ, ಬರೋಡಾ ತಂಡವು 14 ರನ್‌ಗಳಿಂದ ಕರ್ನಾಟಕ ವಿರುದ್ಧ ಜಯಿಸಿತು. ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಶುಕ್ರವಾರ ಉತ್ತರಾಖಂಡದ ಎದುರು ಗೆದ್ದಿತ್ತು. ಹೋದ ವರ್ಷದಿಂದ ಇಲ್ಲಿಯವರೆಗೆ ಸತತ 15 ಪಂದ್ಯಗಳನ್ನು ಗೆದ್ದ ದಾಖಲೆ ಮಾಡಿತ್ತು.
ಕರ್ನಾಟಕ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಆರಂಭದಲ್ಲಿ ವಿಕೆಟ್ ಉರುಳಿಸುವಲ್ಲಿ ಬೌಲರ್‌ಗಳು ಸಫಲರಾಗಲಿಲ್ಲ. ಬರೋಡಾದ ಅರಂಭಿಕ ಜೋಡಿ ಕೇದಾರ್ ದೇವಧರ್ (52; 38ಎಸೆತ, 1ಬೌಂಡರಿ, 4ಸಿಕ್ಸರ್) ಮತ್ತು ಆದಿತ್ಯ ವಾಘಮೋಡೆ (32;19ಎಸೆತ, 5ಬೌಂಡರಿ, 1ಸಿಕ್ಸರ್) ಮೊದಲ ವಿಕೆಟ್‌ಗೆ 51 ರನ್ ಸೇರಿಸಿದರು. ಇದರಿಂದಾಗಿ ಬರೋಡಾ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 196 ರನ್ ಗಳಿಸಿತು. ಈ ಸವಾಲಿನ ಗುರಿಯನ್ನು ಮುಟ್ಟುವಲ್ಲಿ ಕರ್ನಾಟಕ ಯಶಸ್ವಿಯಾಗಲಿಲ್ಲ. 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 182 ರನ್ ಗಳಿಸಿತು.
ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕ ಬಾರಿಸಿದ ರೋಹನ್ ಕದಂ (57; 40ಎಸೆತ, 7ಬೌಂಡರಿ, 1ಸಿಕ್ಸರ್) ಮತ್ತು ಲವನೀತ್ ಸಿಸೋಡಿಯಾ (38;21ಎ,4ಬೌಂ,2ಸಿ) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಅವರು ಕೇವಲ ಐದು ಓವರ್‌ಗಳಲ್ಲಿ 53 ರನ್ ಪೇರಿಸಿದರು. ಆದರೆ ಇನಿಂಗ್ಸ್‌ನ ಪ್ರಮುಖ ಘಟ್ಟಗಳಲ್ಲಿ ವಿಕೆಟ್‌ಗಳನ್ನು ಉರುಳಿಸಿದ ಮೆರಿವಾಲಾ ಮಿಂಚಿದರು.
ಆರನೇ ಓವರ್‌ನಲ್ಲಿ ಮೆರಿವಾಲಾ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಲವನೀತ್ ದೀಪಕ್ ಹೂಡಾಗೆ ಕ್ಯಾಚ್ ಕೊಟ್ಟರು. ಮೊದಲ ವಿಕೆಟ್ ಜೊತೆಯಾಗಿ ಮುರಿದುಬಿತ್ತು. ಈ ಪಂದ್ಯದಲ್ಲಿ ಆರ್. ಸಮರ್ಥ್ ಅವರಿಗೆ ಅವಕಾಶ ಸಿಗಲಿಲ್ಲ. ಅವರ ಸ್ಥಾನದಲ್ಲಿ ಲವನೀತ್ ಇನಿಂಗ್ಸ್ ಆರಂಭಿಸಿದ್ದರು. ಹೋದ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಎಡಗೈ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ (7ರನ್) ಬೇಗನೆ ನಿರ್ಗಮಿಸಿದರು. ಈ ಹಂತದಲ್ಲಿ ನಾಯಕ ಕರುಣ್ ನಾಯರ್ (47;31ಎ, 3ಬೌಂ, 3ಸಿ) ಚೆಂದದ ಆಟವಾಡಿದರು. ಮೂರನೇ ವಿಕೆಟ್‌ಗೆ 86 (57ಎಸೆತಗಳು) ರನ್ ಸೇರಿಸಿದರು. ಇದರಿಂದಾಗಿ ತಂಡದ ಗೆಲುವಿನ ಭರವಸೆ ಇನ್ನೂ ಜೀವಂತವಿತ್ತು.
ಆದರೆ 16ನೇ ಓವರ್‌ನಲ್ಲಿ ಮೆರಿವಾಲಾ ಕೊಟ್ಟ ಪೆಟ್ಟಿಗೆ ಕರ್ನಾಟಕ ಚೇತರಿಸಿಕೊಳ್ಳಲಿಲ್ಲ. ಅವರು ಕರುಣ್ ನಾಯರ್ ವಿಕೆಟ್ ಕಬಳಿಸಿದರು. ಅದೇ ಓವರ್‌ನಲ್ಲಿ ಪವನ್ ದೇಶಪಾಂಡೆಗೂ ಪೆವಿಲಿಯನ್ ಹಾದಿ ತೋರಿಸಿದರು. ರೋಹನ್ ಮತ್ತು ಕೆ.ಗೌತಮ್ ಅವರ ವಿಕೆಟ್‌ಗಳನ್ನು ಅತಿಥ್ ಶೇಟ್ ಕಬಳಿಸಿ ಗಾಯದ ಮೇಲೆ ಬರೆ ಎಳೆದರು. ಶ್ರೇಯಸ್ ಗೋಪಾಲ್ ಮತ್ತು ವಿ. ಕೌಶಿಕ್ ವಿಕೆಟ್ ಗಳಿಸಿದ ಮೆರಿವಾಲಾ ಸಂಭ್ರಮಿಸಿದರು.
ಸಂಕ್ಷಿಪ್ತ ಸ್ಕೋರು
‘ಎ’ ಗುಂಪು
ಬರೋಡಾ: 20 ಓವರ್‌ಗಳಲ್ಲಿ 4ಕ್ಕೆ196(ಕೇದಾರ್ ದೇವಧರ್ 52, ಆದಿತ್ಯ ವಾಘಮೋಡೆ 32, ಸ್ವಪ್ನಿಲ್ ಸಿಂಗ್ 36, ಯೂಸುಫ್ ಪಠಾಣ್ ಔಟಾಗದೆ 23, ವಿಷ್ಣು ಸೋಳಂಕಿ ಔಟಾಗದೆ 35, ಕೃಷ್ಣಪ್ಪ ಗೌತಮ್ 22ಕ್ಕೆ2, ವಿ. ಕೌಶಿಕ್ 47ಕ್ಕೆ1, ಜೆ.ಸುಚಿತ್ 33ಕ್ಕೆ1)
ಕರ್ನಾಟಕ: 20 ಓವರ್‌ಗಳಲ್ಲಿ 9ಕ್ಕೆ182 (ರೋಹನ್ ಕದಂ 57, ಲವನೀತ್ ಸಿಸೋಡಿಯಾ 38, ಕರುಣ್ ನಾಯರ್ 47, ಶ್ರೇಯಸ್ ಗೋಪಾಲ್ 20, ಅತೀಥ್ ಸೇಟ್ 50ಕ್ಕೆ2, ಲಕ್ಮನ್ ಮೆರಿವಾಲಾ 21ಕ್ಕೆ5)
ಫಲಿತಾಂಶ: ಬರೋಡಾ ತಂಡಕ್ಕೆ 14 ರನ್‌ಗಳ ಜಯ. ಮುಂದಿನ ಪಂದ್ಯ: ನವೆಂಬರ್ 11 (ಆಂಧ್ರದ ವಿರುದ್ಧ)
ಗೋವಾ: 20 ಓವರ್‌ಗಳಲ್ಲಿ 4ಕ್ಕೆ202 (ಆದಿತ್ಯ ಕೌಶಿಕ್ 53, ರಾಜಶೇಖರ್ ಹರಿಕಾಂತ್ 26, ಸ್ನೇಹಲ್ ಸುಹಾಸ್ ಕೌತಣಕರ್ 55, ಅಮಿತ್ ವರ್ಮಾ 42, ವಿಪುಲ್ ಕೃಷ್ಣ 47ಕ್ಕೆ2)
ಬಿಹಾರ: 20 ಓವರ್‌ಗಳಲ್ಲಿ 8ಕ್ಕೆ173 (ಮೊಹಮ್ಮದ್ ರೆಹಮತ್ ಉಲ್ಲಾ 38, ರಾಜೇಶ್ ಸಿಂಗ್ 64, ಅಫ್ಸಾನ್ ಖಾನ್ 29, ಹೆರಂಭ ಪರಬ್ 21ಕ್ಕೆ3, ದರ್ಶನ್ ಮಿಸಾಳ್ 31ಕ್ಕೆ2)
ಫಲಿತಾಂಶ: ಗೋವಾ ತಂಡಕ್ಕೆ 29 ರನ್‌ಗಳ ಜಯ.
ಉತ್ತರಾಖಂಡ: 20 ಓವರ್‌ಗಳಲ್ಲಿ 8ಕ್ಕೆ134 (ಹರ್ಷಿತ್ ಶತ್ರುಘ್ನ ಬಿಷ್ಠ್ 28, ತನ್ಮಯ್ ಶ್ರೀವಾಸ್ತವ 67, ವರುಣ್ ಚೌಧರಿ 20ಕ್ಕೆ2, ಪುಳಕಿತ್ ನಾರಂಗ್ 24ಕ್ಕೆ2)
ಸರ್ವಿಸಸ್: 18.5 ಓವರ್‌ಗಳಲ್ಲಿ 4ಕ್ಕೆ137 (ರವಿ ಚವ್ಹಾಣ್ 67, ರಜತ್ ಪಲಿವಾಲಾ ಔಟಾಗದೆ 31)
ಫಲಿತಾಂಶ: ಸರ್ವಿಸಸ್‌ಗೆ 6 ವಿಕೆಟ್‌ಗಳ ಜಯ.
ಬಿ ಗುಂಪು
ಉತ್ತರಪ್ರದೇಶ: 14.4 ಓವರ್‌ಗಳಲ್ಲಿ 60 (ಉಪೇಂದ್ರ ಯಾದವ್ 15, ಮೊಹಸಿನ್ ಖಾನ್ 15, ದರ್ಶನ್ ನಾಲ್ಕಂಡೆ 18ಕ್ಕೆ5, ಶ್ರೀಕಾಂತ್ ವಾಘ್ 13ಕ್ಕೆ2)
ವಿದರ್ಭ: 7.5 ಓವರ್‌ಗಳಲ್ಲಿ 1 ವಿಕೆಟ್‌ಗೆ 62 (ಫೈಜ್ ಫಜಲ್ 25, ಅಕ್ಷಯ್ ಕೊಲ್ಹಾರ್ ಔಟಾಗದೆ 29, ಕುಲದೀಪ್ ಯಾದವ್ 10ಕ್ಕೆ1)
ಫಲಿತಾಂಶ: ವಿದರ್ಭ ತಂಡಕ್ಕೆ 9 ವಿಕೆಟ್‌ಗಳ ಜಯ.
ತಮಿಳುನಾಡು: 20 ಓವರ್‌ಗಳಲ್ಲಿ 5ಕ್ಕೆ155 (ಮುರಳಿ ವಿಜಯ್ 35, ಎನ್. ಜಗದೀಶನ್ 34, ದಿನೇಶ್ ಕಾರ್ತಿಕ್ 48, ಆಕಾಶ್ ಸಿಂಗ್ 26ಕ್ಕೆ2)
ರಾಜಸ್ಥಾನ: 20 ಓವರ್‌ಗಳಲ್ಲಿ 8ಕ್ಕೆ116 (ಮಹಿಪಾಲ್ ಲೊಮ್ರೊರ್ 32, ರವಿಶ್ರೀನಿವಾಸನ್ ಸಾಯಿಕಿಶೋರ್ 19ಕ್ಕೆ3)
ಫಲಿತಾಂಶ: ತಮಿಳುನಾಡಿಗೆ 39 ರನ್ ಜಯ.
ಸಿ ಗುಂಪು
ಹೈದರಾಬಾದ್: 20 ಓವರ್‌ಗಳಲ್ಲಿ 3ಕ್ಕೆ183 (ಅಂಬಟಿ ರಾಯುಡು 77, ಅಕ್ಷತ್ ರೆಡ್ಡಿ 21, ಭಾವನಕ ಸಂದೀಪ್ ಔಟಾಗದೆ 74)
ರೈಲ್ವೆ: 20 ಓವರ್‌ಗಳಲ್ಲಿ 8ಕ್ಕೆ184 (ಮೃಣಾಲ್ ದೇವಧರ್ 20, ಪ್ರಥಮ್ ಸಿಂಗ್ 35, ದಿನೇಶ್ ಮೊರ್ 21, ಮೊಹಮ್ಮದ್ ಅಹಮದ್ ಔಟಾಗದೆ 40, ಕರ್ಣ್ ಶರ್ಮಾ 26, ಟಿ. ಪ್ರದೀಪ್ 35, ಮೊಹಮ್ಮದ್ ಸಿರಾಜ್ 23ಕ್ಕೆ2, ಮೆಹದಿ ಹಸನ್ 29ಕ್ಕೆ3)
ಫಲಿತಾಂಶ: ರೈಲ್ವೆಸ್‌ಗೆ 4 ವಿಕೆಟ್‌ಗಳ ಜಯ
ಡಿ ಗುಂಪು
ಹರಿಯಾಣ: 20 ಓವರ್‌ಗಳಲ್ಲಿ 5ಕ್ಕೆ153 (ಶಿವಂ ಚೌಹಾಣ್ 28, ಹರ್ಷಲ್ ಪಟೇಲ್ 33, ಚೈತನ್ಯ ಬಿಷ್ಣೊಯ್ 27, ರಾಹುಲ್ ತೆವಾಟಿಯಾ ಔಟಾಗದೆ 29, ತುಷಾರ್ ದೇಶಪಾಂಡೆ 27ಕ್ಕೆ2)
ಮುಂಬೈ: 15.4 ಓವರ್‌ಗಳಲ್ಲಿ 2ಕ್ಕೆ154 (ಆದಿತ್ಯ ತಾರೆ 39, ಸೂರ್ಯಕುಮಾರ್ ಯಾದವ್ ಔಟಾಗದೆ 81)
ಫಲಿತಾಂಶ: ಮುಂಬೈ ತಂಡಕ್ಕೆ 8 ವಿಕೆಟ್ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.