ADVERTISEMENT

ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಸಂಭವನೀಯರ ಪಟ್ಟಿಯಲ್ಲಿ ಸ್ಮರಣ್‌

ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 1:48 IST
Last Updated 5 ನವೆಂಬರ್ 2024, 1:48 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಬೆಂಗಳೂರು: ಯುವ ಬ್ಯಾಟರ್‌ಗಳಾದ ಆರ್‌.ಸ್ಮರಣ್ ಮತ್ತು ಮ್ಯಾಕ್ನಿಲ್ ಎಚ್‌.ನೊರೊನ್ಹಾ ಅವರು ಸೈಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಟೂರ್ನಿಗೆ ಪ್ರಕಟಿಸಲಾದ 26 ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಆಟಗಾರರಿಗೆ ನವೆಂಬರ್‌ 11 ರಿಂದ ಶಿಬಿರ ನಡೆಯಲಿದೆ.

ADVERTISEMENT

ಕಳೆದ ವರ್ಷ,  23 ವರ್ಷದೊಳಗಿನವರ ಸಿ.ಕೆ. ನಾಯ್ಡು ಟ್ರೋಫಿಯಲ್ಲಿ ಸ್ಮರಣ್‌ ಮತ್ತು ಮ್ಯಾಕ್ನಿಲ್‌ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಸ್ಮರಣ್ 16 ಇನ್ನಿಂಗ್ಸ್‌ಗಳಿಂದ 829 ರನ್‌ ಕಲೆ ಹಾಕಿ ತಂಡದ ಪರ ಎರಡನೆ ಅತಿ ಹೆಚ್ಚು ರನ್‌ ಹೊಡೆದ ಆಟಗಾರ ಎನಿಸಿದ್ದರು. ಇದರಲ್ಲಿ 194 ರನ್‌ಗಳ ಇನಿಂಗ್ಸ್‌ ಒಳಗೊಂಡಿತ್ತು. ನೊರೊನ್ಹಾ ಗರಿಷ್ಠ 117 ರನ್ ಸೇರಿದಂತೆ ಒಟ್ಟು  638 ರನ್‌ ಪೇರಿಸಿದ್ದರು.

ಹಾಲಿ ಚಾಂಪಿಯನ್‌ ಕರ್ನಾಟಕ ತಂಡವು ಬಿ ಗುಂಪಿನಲ್ಲಿದೆ. ಉತ್ತರಾಖಂಡ, ತ್ರಿಪುರ, ಸೌರಾಷ್ಟ್ರ, ಸಿಕ್ಕಿಂ, ತಮಿಳುನಾಡು, ಬರೋಡಾ ಇದೇ ಗುಂಪಿನಲ್ಲಿವೆ.

ಸಂಭವನೀಯರು: ಕೆ.ಎಲ್‌.ರಾಹುಲ್‌, ಮಯಂಕ್‌ ಅಗರ್‌ವಾಲ್‌, ಮನೀಷ್‌ ಪಾಂಡೆ, ಪ್ರಸಿದ್ಧ ಎಂ.ಕೃಷ್ಣ, ದೇವದತ್ತ ಪಡಿಕ್ಕಲ್‌, ಎಲ್‌.ಆರ್‌.ಚೇತನ್‌, ಮ್ಯಾಕ್ನಿಲ್‌ ನೊರೊನ್ಹಾ, ಶ್ರೇಯಸ್‌ ಗೋಪಾಲ್, ಕೆ.ಎಲ್‌.ಶ್ರೀಜಿತ್‌ (ವಿಕೆಟ್‌ ಕೀಪರ್‌), ಅಭಿನವ್‌ ಮನೋಹರ್, ಮನೋಜ್‌ ಭಾಂಡಗೆ, ಹಾರ್ದಿಕ್‌ ರಾಜ್‌, ವಿ.ಕೌಶಿಕ್‌, ವಿದ್ಯಾಧರ ಪಾಟೀಲ, ಶುಭಾಂಗ್‌ ಹೆಗ್ಡೆ, ಅಭಿಲಾಷ್‌ ಶೆಟ್ಟಿ, ಮೊಹ್ಸಿನ್‌ ಖಾನ್‌, ಆರ್‌.ಸ್ಮರಣ್‌, ಲವನೀತ್‌ ಸಿಸೋಡಿಯಾ (ವಿಕೆಟ್‌ ಕೀಪರ್‌), ವೈಶಾಖ ವಿಜಯಕುಮಾರ್‌,  ಮನ್ವಂತ್‌ ಕುಮಾರ್‌ ಎಲ್‌., ಯಶೋವರ್ಧನ ಪರಂತಾಪ್‌, ಅಧೋಕ್ಷ ಹೆಗಡೆ, ಶರತ್‌ ಬಿ.ಆರ್‌
(ವಿಕೆಟ್‌ ಕೀಪರ್‌), ಪ್ರವೀಣ್‌ ದುಬೆ, ವೆಂಕಟೇಶ್‌ ಎಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.