ಕರಾಚಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿರುವ ಟೀಮ್ ಇಂಡಿಯಾದ ಟ್ರೋಫಿ ಕನಸು ಭಗ್ನಗೊಂಡಿದೆ.
ಮತ್ತೊಂದೆಡೆ ಪಾಕಿಸ್ತಾನ ತಂಡವು ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದನ್ನೇ ಉಲ್ಲೇಖಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮುಖ್ಯಸ್ಥ ರಮೀಜ್ ರಾಜಾ, ಬಿಲಿಯನ್ ಡಾಲರ್ ತಂಡಗಳೇ ಟೂರ್ನಿಯಿಂದ ಹೊರಬಿದ್ದಿವೆ ಎಂದು ಅಣಕಿಸಿದರು.
ಸುದ್ದಿ ಸಂಸ್ಥೆ 'ಎನ್‌ಡಿಟಿವಿ' ಈ ಕುರಿತು ವರದಿ ಮಾಡಿದೆ.
ನಾವು ನಮ್ಮನ್ನೇ ಅನುಮಾನಪಟ್ಟುಕೊಳ್ಳುತ್ತೇವೆ. ನೀವೇ ನೋಡಿ ವಿಶ್ವ ಕ್ರಿಕೆಟ್ ಎಷ್ಟೊಂದು ಹಿಂದೆ ಬಿದ್ದಿದ್ದು, ನಾವು ಮುನ್ನಡೆಯುತ್ತಿದ್ದೇವೆ. ಬಿಲಿಯನ್ ಡಾಲರ್ ಉದ್ಯಮದ ತಂಡಗಳೇ ನಮಗಿಂತಲೂ ಹಿಂದೆ ಬಿದ್ದಿವೆ. ಹಾಗಾಗಿ ಹಲವು ಅಂಶಗಳನ್ನು ನಾವು ಸರಿಯಾಗಿ ಮಾಡುತ್ತಿದ್ದು, ಅದನ್ನು ಆನಂದಿಸಿ ಮತ್ತು ಗೌರವಿಸಿ ಎಂದು ರಮೀಜ್ ರಾಜಾ ಹೇಳಿದ್ದಾರೆ.
ಭಾನುವಾರ ನಡೆಯಲಿರುವ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನ ತಂಡವು ಇಂಗ್ಲೆಂಡ್ ಸವಾಲನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.