ಬೆಂಗಳೂರು: 177 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ಒಂದು ಹಂತದಲ್ಲಿ ಗೆಲುವು ದಾಖಲಿಸಲಿದೆ ಎಂದೇ ಅಂದಾಜಿಸಲಾಗಿತ್ತು. 15 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು.
ಅಲ್ಲದೆ ಗೆಲುವಿಗೆ ಕೊನೆಯ 30 ಎಸೆತಗಳಲ್ಲಿ 30 ರನ್ ಮಾತ್ರ ಬೇಕಿತ್ತು. ಆರು ವಿಕೆಟ್ ಬಾಕಿಯಿತ್ತು. ಆದರೆ ಕೊನೆಯ ಹಂತದಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ ಜಸ್‌ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ ಹಾಗೂ ಅರ್ಷದೀಪ್ ಸಿಂಗ್ ಪಂದ್ಯದ ಫಲಿತಾಂಶವನ್ನೇ ಬದಲಿಸಿದರು.
16ನೇ ಓವರ್‌ನಲ್ಲಿ ಬೂಮ್ರಾ ನಾಲ್ಕು ರನ್ ಮಾತ್ರ ಬಿಟ್ಟುಕೊಟ್ಟರು. 17ನೇ ಓವರ್‌ನಲ್ಲಿ ಅಪಯಕಾರಿ ಹೆನ್ರಿಚ್ ಕ್ಲಾಸೆನ್ ವಿಕೆಟ್ ಅನ್ನು ಹಾರ್ದಿಕ್ ಪಡೆದರು. ಇದರೊಂದಿಗೆ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದ ಹೆನ್ರಿಚ್ ಕ್ಲಾಸೆನ್ ಹೋರಾಟವು ವ್ಯರ್ಥವೆನಿಸಿತು. ಇದು ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಾಖಲಾದ ವೇಗದ ಅರ್ಧಶತಕವಾಗಿದೆ.
18ನೇ ಓವರ್‌ನಲ್ಲಿ ಒಂದು ರನ್ ಮಾತ್ರ ಬಿಟ್ಟುಕೊಟ್ಟ ಬೂಮ್ರಾ ಮಾರ್ಕೊ ಜಾನ್ಸೆನ್ ಅವರನ್ನು ಹೊರದಬ್ಬಿದರು. ಬಳಿಕ 19ನೇ ಓವರ್‌ನಲ್ಲಿ ಅರ್ಷದೀಪ್ ನಾಲ್ಕು ರನ್ ನೀಡಿ ಪಂದ್ಯದಲ್ಲಿ ಭಾರತ ಹಿಡಿತ ಸಾಧಿಸುವಂತೆ ಮಾಡಿದರು.
ಕೊನೆಯ ಓವರ್‌ನಲ್ಲಿ ದಕ್ಷಿಣ ಆಫ್ರಿಕಾದ ಗೆಲುವಿಗೆ 16 ರನ್‌ಗಳ ಅವಶ್ಯಕತೆಯಿತ್ತು. ಆದರೆ ಮಿಲ್ಲರ್ ಹೊಡೆದ ಚೆಂಡನ್ನು ಬೌಂಡರಿ ಗೆರೆ ಅಂಚಿನಲ್ಲಿ ಅದ್ಭುತವಾಗಿ ಕ್ಯಾಚ್ ಪಡೆದ ಸೂರ್ಯಕುಮಾರ್ ಯಾದವ್, ಭಾರತದ ಪಾಳಯದಲ್ಲಿ ಗೆಲುವಿನ ನಗೆ ಬೀರಲು ಕಾರಣರಾದರು. ಮತ್ತೊಂದೆಡೆ ಐಪಿಎಲ್ ವೇಳೆ ಅತಿ ಹೆಚ್ಚು ಟೀಕೆಗೆ ಒಳಗಾಗಿದ್ದ ಹಾರ್ದಿಕ್ ತಮ್ಮ ಕೊನೆಯ ಓವರ್‌ನಲ್ಲಿ ಎಂಟು ರನ್ ಮಾತ್ರ ಬಿಟ್ಟುಕೊಡುವ ಮೂಲಕ ಹೀರೊ ಎನಿಸಿದರು.
ಅಂತಿಮವಾಗಿ ಭಾರತ ಏಳು ರನ್ ಅಂತರದಿಂದ ಪಂದ್ಯ ಗೆದ್ದಿತು. ಪಾಂಡ್ಯ ಮೂರು ಮತ್ತು ಬೂಮ್ರಾ ಹಾಗೂ ಅರ್ಷದೀಪ್ ತಲಾ ಎರಡು ವಿಕೆಟ್ ಗಳಿಸಿ ಮಿಂಚಿದರು.
ಭಾರತ ವಿಶ್ವಕಪ್ ಗೆದ್ದಿದ್ದು ಹೀಗೆ...ಮ್ಯಾಚ್ ಹೈಲೈಟ್ಸ್ ಇಲ್ಲಿ ವೀಕ್ಷಿಸಿ...
ಕಣ್ಣೀರಿಟ್ಟ ಆಟಗಾರರು, ಮುಗಿಲುಮುಟ್ಟಿದ ಹರ್ಷೋದ್ಗಾರ: ಗೆಲುವಿನ ಪ್ರತಿಯೊಂದು ರೋಚಕ ಕ್ಷಣ ಮಿಸ್ ಮಾಡದೇ ನೋಡಿ...
ಚಾಂಪಿಯನ್ ಕೋಚ್
ನಾಯಕ ರೋಹಿತ್ ಸಂಭ್ರಮ
ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ರೋಹಿತ್-ಕೊಹ್ಲಿ ವಿದಾಯ
ಹಾರ್ದಿಕ್ ಮ್ಯಾಜಿಕ್
ಟ್ರೋಫಿ ಗೆಲುವಿನ ಸಂಭ್ರಮ
ಸೂರ್ಯ ಪಡೆದ ಅದ್ಭುತ ಕ್ಯಾಚ್
ಅಭಿನಂದನೆ ಸಲ್ಲಿಸಿದ ಸಚಿನ್ ತೆಂಡೂಲ್ಕರ್
ಪಂದ್ಯಶ್ರೇಷ್ಠ ವಿರಾಟ್
'ರೋ-ಕೊ'
ಪಂಜಾಬಿ ಹಾಡಿಗೆ ನೃತ್ಯ
ಬೂಮ್ರಾ ಸರಣಿಶ್ರೇಷ್ಠ
ಕೊನೆಗೂ ಟ್ರೋಫಿ ಗೆದ್ದ ನಾಯಕ ರೋಹಿತ್
ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ
ರಾಷ್ಟ್ರಗೀತೆ ಹಾಡುವ ವೇಳೆ...
ಕೊಹ್ಲಿ ಸಿಕ್ಸರ್
ವಿಂಟೇಜ್ ಬೂಮ್ರಾhttps://www.instagram.com/reel/C8zu_npI6r5/?igsh=MXh0cDVhd2thNmliaA==
ಹಾರ್ದಿಕ್ ಕೂಲ್...
ಸೂರ್ಯ ಪಡೆದ ಅದ್ಭುತ ಕ್ಯಾಚ್...
ಪಾಂಡ್ಯಗೆ ಮುತ್ತಿಕ್ಕಿದ ರೋಹಿತ್
ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ರೋಹಿತ್
ಭಾವುಕರಾದ ಕೊಹ್ಲಿ, ರೋಹಿತ್, ಸಹ ಆಟಗಾರರು
ಫೈನಲ್‌ಗೆ ಶ್ರೇಷ್ಠ ಪ್ರದರ್ಶನವನ್ನೇ ಮೀಸಲಿಟ್ಟ ವಿರಾಟ್...
ನಾಯಕನ ಮಾತುಗಳು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.