ADVERTISEMENT

ಟಿ20 ವಿಶ್ವಕಪ್: ವಿಜೇತರಿಗೆ ₹13 ಕೋಟಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 11:32 IST
Last Updated 30 ಸೆಪ್ಟೆಂಬರ್ 2022, 11:32 IST
   

ದುಬೈ: ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ತಂಡಕ್ಕೆ ₹ 13 ಕೋಟಿ ನಗದು ಬಹುಮಾನ ನೀಡಲಾಗುವುದು.

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶುಕ್ರವಾರ ನೀಡಿರುವ ಪ್ರಕಟಣೆಯಲ್ಲಿ ಈವಿಷಯ ತಿಳಿಸಿದೆ.

ಅಕ್ಟೋಬರ್ 16ರಿಂದ ನಡೆಯಲಿರುವ ಟೂರ್ನಿಯಲ್ಲಿ 16 ತಂಡಗಳು ಸ್ಪರ್ಧಿಸಲಿವೆ. ರನ್ನರ್ಸ್ ಅಪ್ ತಂಡವು ₹6.5 ಕೋಟಿ ಪಡೆಯಲಿದೆ.

ADVERTISEMENT

ಸೆಮಿಫೈನಲ್‌ನಲ್ಲಿ ಸೋಲುವ ತಂಡಗಳು ತಲಾ ₹ 3.25 ಕೋಟಿ ಪಡೆಯಲಿವೆ. ಸೂಪರ್ 12 ಹಂತ ತಲುಪುವ ಎಂಟು ತಂಡಗಳೂ ತಲಾ ₹ 57 ಲಕ್ಷ ನಗದು ಬಹುಮಾನ ಗಳಿಸಲಿವೆ.

‘ಹೋದ ವರ್ಷದಂತೆಯೇ ಈ ಬಾರಿಯೂ ಪುರುಷರ ಟಿ20 ವಿಶ್ವಕಪ್ ಟೂರ್ನಿಯಲ್ಲಿ 30 ಪಂದ್ಯಗಳ ನಡೆಯಲಿವೆ. ಈಗಾಗಲೇ ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಆಫ್ಗಾನಿಸ್ತಾನ ತಂಡಗಳು ಸೂಪರ್ 12 ಹಂತ ಪ್ರವೇಶಿಸಿವೆ’ ಎಂದು ಐಸಿಸಿ ತಿಳಿಸಿದೆ.

ನಮಿಬಿಯಾ, ಶ್ರೀಲಂಕಾ, ನೆದರ್ಲೆಂಡ್ಸ್, ಯುಎಇ ತಂಡಗಳು ಎ ಗುಂಪು ಹಾಗೂ ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಐರ್ಲೆಂಡ್ ಮತ್ತು ಜಿಂಬಾಬ್ವೆ ತಂಡಗಳು ಬಿ ಗುಂಪಿನಲ್ಲಿ ಆಡಲಿವೆ.

ಮೊದಲ ಸುತ್ತಿನಲ್ಲಿ ಪಂದ್ಯ ಗೆಲ್ಲುವ ತಂಡಗಳಿಗೆ ₹32.50 ಲಕ್ಷ ನೀಡಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.