ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಜೆರ್ಸಿ ಹೊಂದಿರುವ ತಂಡಗಳ ಸಾಲಿನಲ್ಲಿ ಸ್ಕಾಟ್ಲೆಂಡ್ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಅಭಿಮಾನಿಗಳಿಂದಲೂ ಈ ಕುರಿತು ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ.
ಈ ನಡುವೆ ಜೆರ್ಸಿಗೆ ಸಂಬಂಧಿಸಿದಂತೆ ಕುತೂಹಲದಾಯಕ ಮಾಹಿತಿಯನ್ನು 'ಕ್ರಿಕೆಟ್ ಸ್ಕಾಟ್ಲೆಂಡ್' ಬಹಿರಂಗಪಡಿಸಿದೆ. 12 ವರ್ಷದ ಬಾಲಕಿ ರೆಬೆಕಾ ಡೌನಿ ಎಂಬಾಕೆ ಇದನ್ನು ವಿನ್ಯಾಸಗೊಳಿಸಿದ್ದಾರೆ.
ಜೆರ್ಸಿಯನ್ನು ಧರಿಸಿರುವ ಬಾಲಕಿ ತಂಡವನ್ನು ಬೆಂಬಲಿಸುತ್ತಿರುವ ಚಿತ್ರವನ್ನು ಕ್ರಿಕೆಟ್ ಸ್ಕಾಟ್ಲೆಂಡ್ ಬಿಡುಗಡೆಗೊಳಿಸಿದೆ. ಅಲ್ಲದೆ ಬಾಲಕಿಗೆ ಧನ್ಯವಾದಗಳನ್ನು ಸಲ್ಲಿಸಿದೆ.
ಬಾಲಕಿಗೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಮೈದಾನದಲ್ಲೂ ಸ್ಕಾಟ್ಲೆಂಡ್ ಅಮೋಘ ನಿರ್ವಹಣೆ ನೀಡುತ್ತಿದ್ದು, ಸತತ ಎರಡು ಗೆಲುವುಗಳನ್ನು ದಾಖಲಿಸಿದೆ. ಮೊದಲ ಪಂದ್ಯದಲ್ಲೇ ಬಾಂಗ್ಲಾದೇಶಕ್ಕೆ ಆಘಾತ ನೀಡಿತ್ತು. ಈ ಮೂಲಕ 'ಸೂಪರ್ 12' ಹಂತಕ್ಕೆ ಪ್ರವೇಶಿಸುವುದು ಬಹುತೇಕ ಖಚಿತವೆನಿಸಿದೆ.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸಹ ಅಭಿನಂದನೆಯನ್ನು ಸಲ್ಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.