ADVERTISEMENT

T20 World Cup: ಭಾರತ ಸೇರಿದಂತೆ ಸೂಪರ್ ಎಂಟರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ನಾಗರಾಜ್ ಬಿ.
Published 15 ಜೂನ್ 2024, 10:08 IST
Last Updated 15 ಜೂನ್ 2024, 10:08 IST
<div class="paragraphs"><p>ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ</p></div>

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ

   

(ಪಿಟಿಐ ಚಿತ್ರ)

ಬೆಂಗಳೂರು: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಗುಂಪು ಹಂತದ ಪಂದ್ಯಗಳು ಕೊನೆಯ ಹಂತಕ್ಕೆ ತಲುಪಿದ್ದು, 'ಸೂಪರ್ 8'ರ ಹಂತಕ್ಕೆ ವೇದಿಕೆ ಸಜ್ಜುಗೊಂಡಿದೆ.

ADVERTISEMENT

ವೆಸ್ಟ್‌‌ಇಂಡೀಸ್ ಹಾಗೂ ಅಮೆರಿಕದ ಅತಿಥ್ಯದಲ್ಲಿ ಸಾಗುತ್ತಿರುವ 9ನೇ ಆವೃತ್ತಿಯ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಹಲವು ಅಚ್ಚರಿಯ ಫಲಿತಾಂಶಗಳು ಕಂಡಿವೆ.

ಟೂರ್ನಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದು, ಐದು ತಂಡಗಳಂತೆ ತಲಾ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಪ್ರತಿ ಗುಂಪಿನಿಂದಲೂ ಅಗ್ರ ಎರಡು ತಂಡಗಳು ಸೂಪರ್ ಎಂಟರ ಹಂತಕ್ಕೆ ತೇರ್ಗಡೆ ಹೊಂದಿವೆ.

ಸೂಪರ್ 8ರ ಹಂತದಲ್ಲೂ ತಲಾ ನಾಲ್ಕು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಈಗಾಗಲೇ ಆರು ತಂಡಗಳು ಸ್ಥಾನ ಖಚಿತಪಡಿಸಿಕೊಂಡಿದ್ದು, ಇನ್ನೆರಡು ತಂಡಗಳು ಇನ್ನಷ್ಟೇ ನಿರ್ಧಾರವಾಗಬೇಕಿದೆ.

ಸೂಪರ್ 8ರ ಹಂತಕ್ಕೆ ಪ್ರವೇಶಿಸಿದ ತಂಡಗಳು:

  • ಮೊದಲ ಗುಂಪು: ಭಾರತ, ಆಸ್ಟ್ರೇಲಿಯಾ, ಅಫ್ಗಾನಿಸ್ತಾನ, ಡಿ2.

  • ಎರಡನೇ ಗುಂಪು: ಅಮೆರಿಕ, ವೆಸ್ಟ್ ‌ಇಂಡೀಸ್, ದ.ಆಫ್ರಿಕಾ, ಬಿ1.

ಭಾರತಕ್ಕೆ ಯಾವ ತಂಡಗಳ ಸವಾಲು?

'ಎ' ಗುಂಪಿನಿಂದ ತೇರ್ಗಡೆ ಹೊಂದಿರುವ ಭಾರತ ಸೂಪರ್ ಎಂಟರ ಹಂತದಲ್ಲಿ ಮೊದಲ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಅಲ್ಲದೆ ಆಸ್ಟ್ರೇಲಿಯಾ, ಅಫ್ಗಾನಿಸ್ತಾನ ಹಾಗೂ ಡಿ2 ತಂಡಗಳ ವಿರುದ್ಧ ಮುಖಾಮುಖಿಯಾಗಲಿವೆ.

ಸೂಪರ್ 8 ವಿಭಾಗದಲ್ಲಿ ಭಾರತದ ವೇಳಾಪಟ್ಟಿ ಇಂತಿದೆ:

ಜೂನ್ 20: ಅಫ್ಗಾನಿಸ್ತಾನ ವಿರುದ್ಧ, ಬಾರ್ಬಡಾಸ್

ಜೂನ್ 22: ಡಿ2 ವಿರುದ್ಧ (ಬಾಂಗ್ಲಾದೇಶ ಅಥವಾ ನೆದರ್ಲೆಂಡ್ಸ್), ಆ್ಯಂಟಿಗುವಾ

ಜೂನ್ 24: ಆಸ್ಟ್ರೇಲಿಯಾ ವಿರುದ್ಧ, ಸೈಂಟ್ ಲೂಸಿಯಾ

ಸೂಪರ್ 8 ಹಂತದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ:

ಜೂನ್ 19: ಅಮೆರಿಕ vs ದಕ್ಷಿಣ ಆಫ್ರಿಕಾ, ಆ್ಯಂಟಿಗುವಾ

ಜೂನ್ 19: ಬಿ1 vs ವೆಸ್ಟ್‌ಇಂಡೀಸ್, ಸೈಂಟ್ ಲೂಸಿಯಾ

ಜೂನ್ 20: ಅಫ್ಗಾನಿಸ್ತಾನ vs ಭಾರತ, ಬಾರ್ಬಡಾಸ್

ಜೂನ್ 20: ಆಸ್ಟ್ರೇಲಿಯಾ vs ಡಿ2, ಆ್ಯಂಟಿಗುವಾ

ಜೂನ್ 21: ಬಿ1 vs ದಕ್ಷಿಣ ಆಫ್ರಿಕಾ, ಸೈಂಟ್ ಲೂಸಿಯಾ

ಜೂನ್ 21: ಅಮೆರಿಕ vs ವೆಸ್ಟ್‌ಇಂಡೀಸ್, ಬಾರ್ಬಡಾಸ್

ಜೂನ್ 22: ಭಾರತ vs ಡಿ2, ಆ್ಯಟಿಂಗುವಾ

ಜೂನ್ 22: ಅಫ್ಗಾನಿಸ್ತಾನ vs ಆಸ್ಟ್ರೇಲಿಯಾ, ಸೈಂಟ್ ವಿನ್ಸೆಂಟ್

ಜೂನ್ 23: ಅಮೆರಿಕ vs ಬಿ1, ಬಾರ್ಬಡಾಸ್

ಜೂನ್ 23: ವೆಸ್ಟ್‌ಇಂಡೀಸ್ vs ದ.ಆಫ್ರಿಕಾ, ಆ್ಯಂಟಿಗುವಾ

ಜೂನ್ 24: ಆಸ್ಟ್ರೇಲಿಯಾ vs ಭಾರತ, ಸೈಂಟ್ ಲೂಸಿಯಾ

ಜೂನ್ 24: ಅಫ್ಗಾನಿಸ್ತಾನ vs ಡಿ2, ಸೈಂಟ್ ವಿನ್ಸೆಂಟ್.

ಜೂನ್ 26ರಂದು ಮೊದಲ ಸೆಮಿಫೈನಲ್ (ಟ್ರಿನಿಡಾಡ್), ಜೂನ್ 27ರಂದು ಎರಡನೇ ಸೆಮಿಫೈನಲ್ (ಗಯಾನ) ಮತ್ತು ಜೂನ್ 29ರಂದು ಫೈನಲ್ ಪಂದ್ಯ (ಬಾರ್ಬಡಾಸ್) ನಡೆಯಲಿದೆ.

ನಿರ್ಗಮಿಸಿದ ತಂಡಗಳು: ಪಾಕಿಸ್ತಾನ, ನ್ಯೂಜಿಲೆಂಡ್, ಶ್ರೀಲಂಕಾ, ಕೆನಡಾ, ಐರ್ಲೆಂಡ್, ಒಮಾನ್, ನಮೀಬಿಯಾ, ಉಗಾಂಡ, ಪಾಪುವಾ ನ್ಯೂಗಿನಿ, ನೇಪಾಳ, ಶ್ರೀಲಂಕಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.