ADVERTISEMENT

ಟಿ20 ವಿಶ್ವಕಪ್–2024 ವೇಳಾಪಟ್ಟಿ ಪ್ರಕಟ: ನ್ಯೂಯಾರ್ಕ್‌ನಲ್ಲಿ ಭಾರತ–ಪಾಕ್‌ ಸೆಣಸು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜನವರಿ 2024, 14:45 IST
Last Updated 5 ಜನವರಿ 2024, 14:45 IST
<div class="paragraphs"><p>ಭಾರತ ಕ್ರಿಕೆಟ್‌ ತಂಡದ ಆಟಗಾರರು</p></div>

ಭಾರತ ಕ್ರಿಕೆಟ್‌ ತಂಡದ ಆಟಗಾರರು

   

ಪಿಟಿಐ ಚಿತ್ರ

ದುಬೈ: ಇದೇ ವರ್ಷ ಯುಎಸ್‌ನಲ್ಲಿ ಆಯೋಜನೆಗೊಳ್ಳಲಿರುವ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಬಿಡುಗಡೆ ಮಾಡಿದೆ.

ADVERTISEMENT

ಡಲಾಸ್‌ನಲ್ಲಿ ಜೂನ್‌ 1ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಯುಎಸ್‌ಎ ಹಾಗೂ ಕೆನಡಾ ಮುಖಾಮುಖಿಯಾಗಲಿವೆ.

ಜೂನ್‌ 5ರಂದು ಐರ್ಲೆಂಡ್‌ ವಿರುದ್ಧ ಕಣಕ್ಕಿಳಿಯುವುದರೊಂದಿಗೆ ತನ್ನ ಅಭಿಯಾನ ಆರಂಭಿಸಲಿರುವ ಭಾರತ ತಂಡ, ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್‌ ಪಂದ್ಯವನ್ನು ಜೂನ್‌ 9ರಂದು ಆಡಲಿದೆ. ಈ ಎರಡೂ ಪಂದ್ಯಗಳು ನ್ಯೂಯಾರ್ಕ್‌ನಲ್ಲಿ ನಡೆಯಲಿವೆ.

ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಪಾಲ್ಗೊಳ್ಳಲಿವೆ. ತಲಾ ಐದು ತಂಡಗಳನ್ನು ನಾಲ್ಕು ಗುಂಪುಗಳಲ್ಲಿ ಸೇರಿಸಲಾಗಿದೆ. ಈ ಹಂತದಲ್ಲಿ ಪ್ರತಿ ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಆಡಲಿವೆ.

ಚೊಚ್ಚಲ ವಿಶ್ವಕಪ್‌ ಟೂರ್ನಿಯ ಚಾಂಪಿಯನ್‌ ಭಾರತ, ಪಾಕಿಸ್ತಾನ, ಐರ್ಲೆಂಡ್‌, ಯುಎಸ್‌ಎ ಮತ್ತು ಕೆನಡಾ 'ಎ' ಗುಂಪಿನಲ್ಲಿ ಸ್ಥಾನ ಪಡೆದಿವೆ.

ಪ್ರತಿ ಗುಂಪಿನ ಅಗ್ರ ಎರಡು ತಂಡಗಳು 'ಸೂಪರ್–8' ಹಂತ ಪ್ರವೇಶಿಸಲಿವೆ. ಎಂಟು ತಂಡಗಳನ್ನು ಮತ್ತೆ ಎರಡು ಗುಂಪುಗಳಲ್ಲಿ ಆಡಿಸಲಾಗುತ್ತದೆ. ಎರಡೂ ಗುಂಪಿನಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕಾಣಿಸಿಕೊಳ್ಳುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಲಿವೆ.

ಫೈನಲ್‌ ಪಂದ್ಯವು ಜೂನ್‌ 29ರಂದು ನಡೆಯಲಿದೆ.

ಗುಂಪು ಹಂತದಲ್ಲಿ ಭಾರತದ ಪಂದ್ಯಗಳು
01. ಭಾರತ vs ಐರ್ಲೆಂಡ್:
ಜೂನ್‌ 5 (ನ್ಯೂಯಾರ್ಕ್‌)
02. ಭಾರತ vs ಪಾಕಿಸ್ತಾನ:
ಜೂನ್‌ 9 (ನ್ಯೂಯಾರ್ಕ್‌)
03. ಭಾರತ vs ಯುಎಸ್‌ಎ: ಜೂನ್‌ 12 (ನ್ಯೂಯಾರ್ಕ್‌)
04. ಭಾರತ vs ಕೆನಡಾ: ಜೂನ್‌ 15 (ಫ್ಲೋರಿಡಾ)

ಐಸಿಸಿ ಟ್ವೆಂಟಿ-20 ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.