ADVERTISEMENT

T20 World Cup: ಸೂಪರ್ ಎಂಟರ ಘಟ್ಟಕ್ಕೆ ಆಸ್ಟ್ರೇಲಿಯಾ

ಆ್ಯಡಂ ಜಂಪಾ ಸ್ಪಿನ್ ಮೋಡಿ; ನಮಿಬಿಯಾಗೆ ಸೋಲು

ಪಿಟಿಐ
Published 12 ಜೂನ್ 2024, 12:12 IST
Last Updated 12 ಜೂನ್ 2024, 12:12 IST
<div class="paragraphs"><p>ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ಆ್ಯಡಂ ಜಂಪಾ&nbsp; &nbsp;</p></div>

ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ಆ್ಯಡಂ ಜಂಪಾ   

   

–ಪಿಟಿಐ ಚಿತ್ರ

ನಾರ್ತ್‌ಸೌಂಡ್, ಆ್ಯಂಟಿಗಾ: ಲೆಗ್‌ಸ್ಪಿನ್ನರ್ ಆ್ಯಡಂ ಜಂಪಾ ಅವರ ಮೋಡಿಯ ಮುಂದೆ ನಮಿಬಿಯಾ ತಂಡವು ಶರಣಾಯಿತು.  

ADVERTISEMENT

9 ವಿಕೆಟ್‌ಗಳಿಂದ ಜಯಿಸಿದ ಆಸ್ಟ್ರೇಲಿಯಾ ತಂಡವು ಸೂಪರ್ 8ರ ಹಂತಕ್ಕೆ ಪ್ರವೇಶಿಸಿತು. 

ಬುಧವಾರ ಬೆಳಿಗ್ಗೆ (ಭಾರತೀಯ ಕಾಲಮಾನ) ನಡೆದ  ಬಿ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. 

ಜಂಪಾ (12ಕ್ಕೆ4) ಅವರ ದಾಳಿಯ ಮುಂದೆ ನಮಿಬಿಯಾ ತಂಡವು 17 ಓವರ್‌ಗಳಲ್ಲಿ 72 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ವೇಗಿಗಳಾದ ಜೋಷ್ ಹ್ಯಾಜಲ್‌ವುಡ್ ಹಾಗೂ ಮಾರ್ಕಸ್ ಸ್ಟೋಯಿನಿಸ್ ಅವರೂ ತಲಾ ಎರಡು ವಿಕೆಟ್ ಗಳಿಸಿದರು. 

ನಮಿಬಿಯಾ ತಂಡದ ನಾಯಕ ಗೆರಾರ್ಡ್ ಎರಸ್ಮಸ್ (36; 43ಎ, 4X4, 6X1) ಹಾಗೂ ಮಿಚೆಲ್ ವ್ಯಾನ್ ಲಿಂಗೆನ್ (10; 10ಎ) ಅವರಿಬ್ಬರನ್ನು ಬಿಟ್ಟರೆ ಉಳಿದವರು ಎರಡಂಕಿ ಮುಟ್ಟಲಿಲ್ಲ. 

ಕ್ರಿಕೆಟ್ ಕ್ಷೇತದಲ್ಲಿ ಅಂಬೆಗಾಲಿಕ್ಕುತ್ತಿರುವ ನಮಿಬಿಯಾ ತಂಡಕ್ಕೆ ಇದು ಮೂರನೇ ಪಂದ್ಯ ಹಾಗೂ ಎರಡನೇ ಸೋಲು. ಇದರೊಂದಿಗೆ ಸೂಪರ್ 8 ಪ್ರವೇಶದ ಹಾದಿಯಿಂದ ಹೊರಬಿದ್ದಿದೆ. 

ಚಿಕ್ಕ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು 5.4 ಓವರ್‌ಗಳಲ್ಲಿ 1 ವಿಕೆಟ್‌ಗೆ 74 ರನ್‌ ಗಳಿಸಿತು. 

8 ಎಸೆತಗಳಲ್ಲಿ 20 ರನ್ ಗಳಿಸಿದ ಡೇವಿಡ್ ವಾರ್ನರ್ ಅವರ ವಿಕೆಟ್ ಅನ್ನು ನಮಿಬಿಯಾದ ಡೇವಿಡ್ ವೀಸ್ ಗಳಿಸಿದರು. 

ಟ್ರಾವಿಸ್ ಹೆಡ್ (ಔಟಾಗದೆ 34; 17ಎ, 4X5, 6X2) ಹಾಗೂ ಮಿಚೆಲ್ ಮಾರ್ಷ್ (ಔಟಾಗದೆ 18; 9ಎ, 4X3, 6X1) ತಂಡವನ್ನು ಗೆಲುವಿನ ದಡ ಸೇರಿಸಿದರು.  ಆಸ್ಟ್ರೇಲಿಯಾ ಬಳಗಕ್ಕೆ ಇದು ಸತತ ಮೂರನೇ ಜಯ. ತಂಡಕ್ಕೆ ಇನ್ನೊಂದು ಪಂದ್ಯ ಬಾಕಿಯಿದ್ದು ಸ್ಕಾಟ್ಲೆಂಡ್ ವಿರುದ್ಧ ಆಡಲಿದೆ.

ಸಂಕ್ಷಿಪ್ತ ಸ್ಕೋರು:

ನಮಿಬಿಯಾ: 17 ಓವರ್‌ಗಳಲ್ಲಿ 72 (ಮೈಕೆಲ್ ವ್ಯಾನ್ ಲಿಂಗೆನ್ 10, ಗೆರಾರ್ಡ್ ಎರಸ್ಮಸ್ 36, ಜೋಷ್ ಹ್ಯಾಜಲ್‌ವುಡ್ 18ಕ್ಕೆ2, ಮಾರ್ಕಸ್ ಸ್ಟೊಯಿನಿಸ್ 9ಕ್ಕೆ2, ಆ್ಯಡಂ ಜಂಪಾ 12ಕ್ಕೆ4)

ಆಸ್ಟ್ರೇಲಿಯಾ: 5.4 ಓವರ್‌ಗಳಲ್ಲಿ 1 ವಿಕೆಟ್‌ಗೆ 74 (ಡೇವಿಡ್ ವಾರ್ನರ್ 20, ಟ್ರಾವಿಸ್ ಹೆಡ್ ಔಟಾಗದೆ 34, ಮಿಚೆಲ್ ಮಾರ್ಷ್ ಔಟಾಗದೆ 18, ಡೇವಿಡ್ ವೀಸ್ 15ಕ್ಕೆ1)

ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 9 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಆ್ಯಡಂ ಜಂಪಾ. 

ಪಂದ್ಯ ರದ್ದು: ಹೊರಬಿದ್ದ ಶ್ರೀಲಂಕಾ

ಲಾಡರ್‌ಹಿಲ್, ಅಮೆರಿಕ (ಪಿಟಿಐ): ಶ್ರೀಲಂಕಾ ಮತ್ತು ನೇಪಾಳ ತಂಡಗಳ ನಡುವಣ ಪಂದ್ಯವು ಮಳೆಯಿಂದಾಗಿ ರದ್ದಾಯಿತು.  ಉಭಯ ತಂಡಗಳೂ ಸೂಪರ್ 8 ಹಂತಕ್ಕೆ ಸಾಗುವ ದಾರಿಯಿಂದ ಹೊರಬಿದ್ದವು. 

ಬುಧವಾರ ಡಿ ಗುಂಪಿನ ಪಂದ್ಯದಲ್ಲಿ ಇವೆರಡೂ ತಂಡಗಳೂ ಹಣಾಹಣಿ ನಡೆಸಬೇಕಿತ್ತು. ಆದರೆ ಮಳೆಯಾದ ಕಾರಣ ಪಂದ್ಯ ರದ್ದಾಯಿತು.  ಶ್ರೀಲಂಕಾ 3 ಪಂದ್ಯಗಳಿಂದ ಒಂದು ಅಂಕ ಹಾಗೂ ನೇಪಾಳ ಎರಡು ಪಂದ್ಯಗಳನ್ನು ಆಡಿ ಒಂದು ಅಂಕ ಪಡೆದಿವೆ.  ಈ ಗುಂಪಿನಲ್ಲಿ 6 ಅಂಕ ಗಳಿಸಿ ಅಗ್ರಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ ಸೂಪರ್ 8 ಹಂತ ಪ್ರವೇಶಿಸಿದೆ. ತಲಾ 2 ಅಂಕ ಗಳಿಸಿರುವ ಬಾಂಗ್ಲಾ ಹಾಗೂ ನೆದರ್ಲೆಂಡ್ಸ್ ತಂಡಗಳು ಎರಡನೇ ಸ್ಥಾನ ಪಡೆಯಲು ಪೈಪೋಟಿಯಲ್ಲಿವೆ. ಉಭಯ ತಂಡಗಳೂ ತಲಾ ಎರಡು ಪಂದ್ಯಗಳನ್ನು ಆಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.