ADVERTISEMENT

T20 World Cup | ಶಕೀಬ್‌ ಅರ್ಧಶತಕ: ಡಚ್ಚರ ವಿರುದ್ಧ ಬಾಂಗ್ಲಾಕ್ಕೆ ಜಯ

ಪಿಟಿಐ
Published 13 ಜೂನ್ 2024, 14:39 IST
Last Updated 13 ಜೂನ್ 2024, 14:39 IST
<div class="paragraphs"><p>ಶಕೀಬ್‌&nbsp;ಅಲ್ ಹಸನ್</p></div>

ಶಕೀಬ್‌ ಅಲ್ ಹಸನ್

   

- ಪಿಟಿಐ ಚಿತ್ರ

ಕಿಂಗ್ಸ್‌ಟೌನ್‌, ಸೇಂಟ್‌ ವಿನ್ಸೆಂಟ್‌: ಅನುಭವಿ ಆಟಗಾರ ಶಕೀಬ್‌ ಅಲ್ ಹಸನ್ (64*, 46ಎ, 4X9) ಅವರ ಅಜೇಯ ಅರ್ಧಶತಕ ಹಾಗೂ ರಿಶಾದ್ ಹುಸೇನ್‌ (33ಕ್ಕೆ 3) ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ನೆರವಿನಿಂದ ಬಾಂಗ್ಲಾದೇಶ ತಂಡವು ಟಿ20 ವಿಶ್ವಕಪ್‌ ‘ಡಿ’ ಗುಂಪಿನ ಮಹತ್ವದ ಪಂದ್ಯದಲ್ಲಿ ಗುರುವಾರ ನೆದರ್ಲೆಂಡ್ಸ್‌ ತಂಡವನ್ನು 25 ರನ್‌ಗಳಿಂದ ಮಣಿಸಿತು.

ADVERTISEMENT

160 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಡಚ್‌ ತಂಡವು ಆರಂಭಿಕ ಆಟಗಾರರನ್ನು ಬೇಗನೆ ಕಳೆದುಕೊಂಡರೂ ನಂತರ ಚೇತರಿಕೆಯ ಹಾದಿಯಲ್ಲಿತ್ತು. ಒಂದು ಹಂತದಲ್ಲಿ 3 ವಿಕೆಟ್‌ಗೆ 111 ರನ್‌ ಗಳಿಸಿ, ಜಯಕ್ಕೆ 32 ಎಸೆತಗಳಲ್ಲಿ 49 ರನ್‌ ಬೇಕಾಗಿತ್ತು. ಈ ವೇಳೆ ತಂಡವು ನಾಟಕೀಯ ಕುಸಿತಕ್ಕೆ ಒಳಗಾಯಿತು. ಕೇವಲ 6 ರನ್‌ ಅಂತರದಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡಿತು. ಹೀಗಾಗಿ, 20 ಓವರ್‌ಗಳಲ್ಲಿ 8 ವಿಕೆಟ್‌ಗೆ 134 ರನ್‌ಗಳಿಸಿ ಸವಾಲನ್ನು ಮುಗಿಸಿತು. ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ (33), ವಿಕ್ರಮಜಿತ್ ಸಿಂಗ್ (26), ನಾಯಕ ಸ್ಕಾಟ್ ಎಡ್ವರ್ಡ್ಸ್ (25) ಕೊಂಚ ಹೋರಾಟ ತೋರಿದರು.

ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾ ತಂಡವು ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ಗೆ 159 ರನ್‌ ಗಳಿಸಿತ್ತು. ಆಫ್ ಸ್ಪಿನ್ನರ್‌ ಆರ್ಯನ್ ದತ್‌ (17ಕ್ಕೆ2) ತಂಡಕ್ಕೆ ಆರಂಭದಲ್ಲೇ ಯಶಸ್ಸು ದೊರಕಿಸಿಕೊಟ್ಟರು. ಆದರೆ, ಶಕೀಬ್ ಕೆಲವು ಜೊತೆಯಾಟಗಳ ಮೂಲಕ ತಂಡ ಕುಸಿಯದಂತೆ ನೋಡಿಕೊಂಡರು. ಇದು ಅವರಿಗೆ ಈ ಮಾದರಿಯಲ್ಲಿ 13ನೇ ಅರ್ಧ ಶತಕ.

ಮೂರನೇ ವಿಕೆಟ್‌ಗೆ ತಂಜಿದ್ ಹಸನ್ (35, 26ಎ, 4x5, 6x1) ಜೊತೆಗೂಡಿದ ಶಕೀಬ್ ಲಗುಬಗನೇ 48 ರನ್ ಸೇರಿಸಿದರು. ಮಹಮುದುಲ್ಲಾ (25, 21ಎ) ಜೊತೆ ಐದನೇ ವಿಕೆಟ್‌ಗೆ 41 ರನ್ ಸೇರಿಸಿದ್ದರಿಂದ ತಂಡ ಗೌರವದ ಮೊತ್ತ ಗಳಿಸಲು ಸಾಧ್ಯವಾಯಿತು.

ಸ್ಕೋರುಗಳು

ಬಾಂಗ್ಲಾದೇಶ: 20 ಓವರುಗಳಲ್ಲಿ 5 ವಿಕೆಟ್‌ಗೆ 159 (ತಂಜಿದ್ ಹಸನ್ 35, ಶಕೀಬ್ ಅಲ್‌ ಹಸನ್‌ ಔಟಾಗದೇ 64, ಮಹಮುದುಲ್ಲಾ 25; ಆರ್ಯನ್ ದತ್‌ 17ಕ್ಕೆ2, ‍ಪಾಲ್‌ ವಾನ್ ಮೀಕೆರನ್ 15ಕ್ಕೆ2, ಟಿಮ್‌ ಪ್ರಿಂಗಲ್ 26ಕ್ಕೆ1).

ನೆದರ್ಲೆಂಡ್ಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 134 (ವಿಕ್ರಮಜಿತ್ ಸಿಂಗ್ 26, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 33, ಸ್ಕಾಟ್ ಎಡ್ವರ್ಡ್ಸ್ 25; ರಿಶಾದ್ ಹುಸೇನ್‌ 33ಕ್ಕೆ 3, ತಸ್ಕಿನ್ ಅಹ್ಮದ್ 30ಕ್ಕೆ 2). ಪಂದ್ಯದ ಆಟಗಾರ: ಶಕೀಬ್‌ ಅಲ್ ಹಸನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.