ADVERTISEMENT

ಟ್ರೋಫಿ ಎತ್ತುವಾಗ ವಿಭಿನ್ನ ಹೆಜ್ಜೆ ಹಾಕಲು ರೋಹಿತ್‌ಗೆ ಹೇಳಿಕೊಟ್ಟಿದ್ದು ಯಾರು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜುಲೈ 2024, 5:14 IST
Last Updated 6 ಜುಲೈ 2024, 5:14 IST
<div class="paragraphs"><p>ರೋಹಿತ್ ಶರ್ಮಾ</p></div>

ರೋಹಿತ್ ಶರ್ಮಾ

   

(ಟ್ವಿಟರ್ ಚಿತ್ರ)

ನವದೆಹಲಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆಲುವಿನ ಟ್ರೋಫಿ ಎತ್ತಿ ಹಿಡಿಯುವಾಗ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶೇಷ ರೀತಿಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ADVERTISEMENT

ಈ ಕುರಿತು ಪ್ರಧಾನಿ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಉಪಾಹಾರ ಕೂಟದಲ್ಲೂ ಸ್ವತಃ ನರೇಂದ್ರ ಮೋದಿ ಅವರೇ ರೋಹಿತ್ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಈ ವೇಳೆ ರಹಸ್ಯ ಬಹಿರಂಗಪಡಿಸಿರುವ ರೋಹಿತ್, 'ನನಗೆ ಈ ರೀತಿಯಲ್ಲಿ ಸಂಭ್ರಮಿಸುವಂತೆ ಯಜುವೇಂದ್ರ ಚಾಹಲ್ ಹಾಗೂ ಕುಲದೀಪ್ ಯಾದವ್ ಸಲಹೆ ನೀಡಿದ್ದರು' ಎಂದು ತಿಳಿಸಿದ್ದಾರೆ.

ಟೀಮ್ ಇಂಡಿಯಾ ಆಟಗಾರರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಈ ವೇಳೆ ಪ್ರತಿಕ್ರಿಯಿಸಿದ ರೋಹಿತ್, 'ಇದು ನಮ್ಮ ಪಾಲಿಗೆ ಮಹತ್ತರ ಕ್ಷಣವಾಗಿತ್ತು. ನಾವು ಇದಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೆವು. ಸಹಜವಾಗಿಯೇ ವೇದಿಕೆಯತ್ತ ನಡೆದುಕೊಂಡು ಹೋಗಬೇಡ. ಏನನ್ನಾದರೂ ವಿಭಿನ್ನವಾಗಿ ಪ್ರಯತ್ನಿಸು ಎಂದು ಸಹ ಆಟಗಾರರು ಸಲಹೆ ನೀಡಿದರು' ಎಂದು ರೋಹಿತ್ ವಿವರಿಸಿದ್ದಾರೆ.

ಇದು ಚಾಹಲ್ ಅವರ ಸಲಹೆಯಾಗಿತ್ತೇ ಎಂದು ಪ್ರಧಾನಿ ಕೇಳಿದರು. ಈ ವೇಳೆ ನಗುಮುಖದಿಂದಲೇ ರೋಹಿತ್, 'ಹೌದು ಚಾಹಲ್ ಹಾಗೂ ಕುಲದೀಪ್ ಅವರು ಸಲಹೆ ನೀಡಿದ್ದರು' ಎಂದು ತಿಳಿಸಿದರು.

ಬಳಿಕ ಕುಲದೀಪ್ ಅವರಲ್ಲಿ ನಿಮ್ಮ ನಾಯಕನನ್ನು ನೃತ್ಯ ಮಾಡುವಂತೆ ಹೇಳಲು ಹೇಗೆ ಧೈರ್ಯ ಬಂತು ಎಂದು ಪ್ರಧಾನಿ ಕೇಳಿದರು. ಇದಕ್ಕೆ 'ನಾನು ಹೇಳಿಕೊಟ್ಟಂತೆ ರೋಹಿತ್ ಅನುಕರಿಸಲಿಲ್ಲ' ಎಂದು ಕುಲದೀಪ್ ಹೇಳಿದಾಗ ಸಹ ಆಟಗಾರರೆಲ್ಲ ಗೊಳ್ಳನೆ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.