ADVERTISEMENT

T20 World Cup: ಒಮನ್‌ ವಿರುದ್ಧ ಮೂರೇ ಓವರ್‌ಗಳಲ್ಲಿ ಗೆದ್ದ ಇಂಗ್ಲೆಂಡ್‌

ಪಿಟಿಐ
Published 14 ಜೂನ್ 2024, 6:05 IST
Last Updated 14 ಜೂನ್ 2024, 6:05 IST
<div class="paragraphs"><p>T20 World Cup</p></div>

T20 World Cup

   

ನಾರ್ತ್‌ ಸೌಂಡ್, ಆ್ಯಂಟಿಗಾ: ಇಂಗ್ಲೆಂಡ್ ತಂಡವು ಶುಕ್ರವಾರ ಇಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಕೇವಲ 3.1 ಓವರ್‌ಗಳಲ್ಲಿ 50 ರನ್‌ ಗಳಿಸಿ ಗೆದ್ದಿತು. ಇದರೊಂದಿಗೆ ನೆಟ್‌ ರನ್‌ರೇಟ್‌ನಲ್ಲಿ ಗಮನಾರ್ಹ (+3.081) ಏರಿಕೆ ಕಂಡಿತು. 

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಒಮಾನ್ ತಂಡವು ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ (11ಕ್ಕೆ4) ಅವರ ದಾಳಿಗೆ ತತ್ತರಿಸಿದರು. 13.2 ಓವರ್‌ಗಳಲ್ಲಿ  ಕೇವಲ 47 ರನ್ ಗಳಿಸಿತು. ಜೋಫ್ರಾ ಆರ್ಚರ್ ಮತ್ತು ಮಾರ್ಕ್ ವುಡ್ ಕೂಡ ತಲಾ 3 ವಿಕೆಟ್ ಗಳಿಸಿದರು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 3.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 50 ರನ್ ಗಳಿಸಿತು. ಜೋಸ್ ಬಟ್ಲರ್ ಕೇವಲ 8 ಎಸೆತಗಳಲ್ಲಿ 24 ರನ್ ಗಳಿಸಿದರು. ಅದರಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್‌ ಇದ್ದವು.

ADVERTISEMENT

ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡದ ಸೂಪರ್ 8 ತಲುಪುವ ಅವಕಾಶ ಜೀವಂತವಾಗುಳಿಯಿತು. ಇನ್ನೊಂದು ಪಂದ್ಯದಲ್ಲಿ ನಮಿಬಿಯಾ ವಿರುದ್ಧ ಇಂಗ್ಲೆಂಡ್ ತಂಡವು ಆಡಬೇಕಿದೆ. 

ಸಂಕ್ಷಿಪ್ತ ಸ್ಕೋರು: ಒಮಾನ್: 13.2 ಓವರ್‌ಗಳಲ್ಲಿ 47 (ಶೋಯಬ್ ಖಾನ್ 11,  ಜೋಫ್ರಾ ಆರ್ಚರ್ 12ಕ್ಕೆ3, ಮಾರ್ಕ್ ವುಡ್ 12ಕ್ಕೆ3, ಆದಿಲ್ ರಶೀದ್ 11ಕ್ಕೆ4) ಇಂಗ್ಲೆಂಡ್: 3.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 50 (ಫಿಲಿಪ್ ಸಾಲ್ಟ್ 12, ಜೋಸ್ ಬಟ್ಲರ್ ಔಟಾಗದೆ 24, ಬಿಲಾಲ್ ಖಾನ್ 36ಕ್ಕೆ1, ಖಲೀಮುಲ್ಲಾ 10ಕ್ಕೆ1) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 8 ವಿಕೆಟ್‌ಗಳ ಜಯ.  ಪಂದ್ಯಶ್ರೇಷ್ಠ: ಆದಿಲ್ ರಶೀದ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.