ADVERTISEMENT

T20 World Cup: ನೆದರ್ಲೆಂಡ್ಸ್‌ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2022, 7:34 IST
Last Updated 27 ಅಕ್ಟೋಬರ್ 2022, 7:34 IST
   

ಸಿಡ್ನಿ: ಟಿ–ವಿಶ್ವಕಪ್‌ ಪಂದ್ಯಾವಳಿಯ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿ ಬೀಗುತ್ತಿರುವ ಭಾರತ ಕ್ರಿಕೆಟ್ ತಂಡ, ನೆದರ್ಲೆಂಡ್ಸ್ ವಿರುದ್ಧ ಇಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಪಾಕಿಸ್ತಾನ ವಿರುದ್ಧ ಆಡಿದ ತಂಡವನ್ನೇ ಭಾರತ ಕಣಕ್ಕಿಳಿಸಿದೆ. ನೆದರ್ಲೆಂಡ್ಸ್ ತಂಡದಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ. ಬಾಂಗ್ಲಾ ವಿರುದ್ಧ ಆಡಿದ ತಂಡವನ್ನೇ ಉಳಿಸಿಕೊಳ್ಳಲಾಗಿದೆ.

ಎ ಗುಂಪಿನಿಂದ ಅರ್ಹತೆ ಗಳಿಸಿ ಸೂಪರ್ 12ಕ್ಕೆ ಪ್ರವೇಶಿಸಿರುವ ನೆದರ್ಲೆಂಡ್ಸ್‌ ತಂಡವು ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋತಿದೆ. ಸ್ಕಾಟ್ ಎಡ್ವರ್ಡ್ಸ್‌ ನಾಯಕತ್ವದ ತಂಡದಲ್ಲಿ ಬೌಲಿಂಗ್ ವಿಭಾಗ ಉತ್ತಮವಾಗಿದೆ. ಬ್ಯಾಟಿಂಗ್‌ನಲ್ಲಿ ಕಾಲಿನ್ ಅಕೆಮನ್ ಬಾಂಗ್ಲಾ ವಿರುದ್ಧ ಅರ್ಧಶತಕ ಗಳಿಸಿದ್ದರು.

ADVERTISEMENT

ಭಾರತ ತಂಡ: ಕೆ.ಎಲ್. ರಾಹುಲ್. ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯಾ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್, ಮಹಮ್ಮದ್ ಶಮಿ, ಅರ್ಶ್‌ದೀಪ್

ನೆದರ್ಲೆಂಡ್ಸ್: ವಿಕ್ರಮ್‌ಜೀತ್, ಓ ಡೌಡ್, ಕೂಪರ್, ಎಡ್ವರ್ಡ್(ನಾಯಕ), ಅಕರ್ಮನ್, ಡೆ ಲೀಡೆ, ಪ್ರಿಂಗ್ಲೆ, ವ್ಯಾನ್ ಬೀಕ್, ಅಹ್ಮದ್, ಕ್ಲಾಸೆನ್, ವ್ಯಾನ್ ಮೀಕರನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.