ADVERTISEMENT

T20 WC | IND vs AFG: ಅಫ್ಗಾನಿಸ್ತಾನಕ್ಕೆ 182 ರನ್‌ಗಳ ಗುರಿ ನೀಡಿದ ಭಾರತ

ಪಿಟಿಐ
Published 20 ಜೂನ್ 2024, 16:25 IST
Last Updated 20 ಜೂನ್ 2024, 16:25 IST
<div class="paragraphs"><p>ಸೂರ್ಯಕುಮಾರ್‌ ಯಾದವ್‌</p></div>

ಸೂರ್ಯಕುಮಾರ್‌ ಯಾದವ್‌

   

ಪಿಟಿಐ ಚಿತ್ರ

ಬಾರ್ಬಡೋಸ್‌: ಸೂರ್ಯಕುಮಾರ್‌ ಯಾದವ್‌ ಅವರ ಅರ್ಧಶತಕದ ನೆರವಿನೊಂದಿಗೆ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 181 ರನ್‌ ಗಳಿಸಿದ ಭಾರತ ಅಫ್ಗಾನಿಸ್ತಾನಕ್ಕೆ ಬೃಹತ್‌ ಗುರಿ ನೀಡಿದೆ. 

ADVERTISEMENT

ಇಲ್ಲಿನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ 20 ವಿಶ್ವಕಪ್‌ ಸೂಪರ್‌ 8 ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ ಮಾಡಿತು. ಸೂರ್ಯಕುಮಾರ್ ಯಾದವ್‌ ಅವರು 28 ಬಾಲ್‌ಗಳಿಗೆ 53 ರನ್‌ ಗಳಿಸಿದರು. ಇನ್ನುಳಿದಂತೆ ಹಾರ್ದಿಕ್ ಪಾಂಡ್ಯ (32), ವಿರಾಟ್‌ ಕೊಹ್ಲಿ (24), ರಿಶಬ್‌ (20), ಅಕ್ಸರ್‌ ಪಟೇಲ್‌ (12), ರೋಹಿತ್‌ ಶರ್ಮಾ (8), ಅರ್ಷ್‌ದೀಪ್‌ (2) ತಂಡಕ್ಕೆ ಬಲ ನೀಡಿದರು.

ಅಫ್ಗನ್‌ ಪರ ಫಜಲ್‌ಹಕ್ ಫರೂಕಿ ಹಾಗೂ ನಾಯಕ ರಶೀದ್‌ ಖಾನ್‌ ತಲಾ 3 ವಿಕೆಟ್‌ ಕಿತ್ತರು. ಭಾರತ ಪರ ಪ್ರಮುಖ ಬ್ಯಾಟರ್‌ಗಳ ವಿಕೆಟ್‌ ಕಬಳಿಸುವಲ್ಲಿ ಇವರು ಯಶಸ್ವಿಯಾದರು. ಉಳಿದಂತೆ ನವೀನ್ ಉಲ್ ಹಕ್ ಅವರು ಹಾರ್ದಿಕ್‌ ಪಾಂಡ್ಯ ಅವರು 7 ರನ್‌ಗಳಿಸುವಷ್ಟರಲ್ಲಿ ಔಟ್‌ ಮಾಡಿದರು. 

ಭಾರತ ತಂಡ: ರೋಹಿತ್‌ ಶರ್ಮಾ (ನಾಯಕ), ವಿರಾಟ್‌ ಕೊಹ್ಲಿ, ರಿಶಬ್‌ ಪಂತ್‌, ಸೂರ್ಯಕುಮಾರ್ ಯಾದವ್‌, ಶಿವಂ ದುಬೆ, ಹಾರ್ದಿಕ್‌ ಪಾಂಡ್ಯ, ರವೀದ್ರ ಜಡೇಜಾ,ಅಕ್ಸರ್‌ ಪಟೇಲ್‌, ಕುಲದೀಪ್‌ ಯಾದವ್‌, ಅರ್ಷದೀಪ್‌ ಸಿಂಗ್‌, ಜಸಪ್ರೀತ್‌ ಬೂಮ್ರಾ

ಅಫ್ಗಾನಿಸ್ತಾನ ತಂಡ: ರಶೀದ್ ಖಾನ್ (ನಾಯಕ), ರೆಹಮಾನುಲ್ಲಾ ಗುರ್ಬಾಜ್ (ವಿಕೆಟ್‌ಕೀಪರ್), ಇಬ್ರಾಹಿಂ ಝದ್ರಾನ್, ಹಜ್ರತ್‌ಉಲ್ಲಾ ಝಝೈ, ಗುಲ್ಬದಿನ್ ನೈಬ್, ಅಜ್ಮತ್‌ವುಲ್ಲಾ ಒಮರ್‌ಝೈ, ಮೊಹಮ್ಮದ್ ನಬಿ, ನೂರ್ ಅಹಮದ್, ನವೀನ್ ಉಲ್ ಹಕ್, ಫಜಲ್‌ಹಕ್ ಫರೂಕಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.