ದುಬೈ: ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ತಂಡವು 2007ರ ಚೊಚ್ಚಲ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟ್ರೋಫಿ ಜಯಿಸಿತ್ತು. ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿದ ಭಾರತ ಪ್ರಶಸ್ತಿಗೆ ಮುತ್ತಿಕ್ಕಿತು.
ಪ್ರಸ್ತುತ ಗೆಲುವಿನ ಕ್ಷಣವನ್ನು ನೆನಪಿಸಿರುವ ರೋಹಿತ್ ಶರ್ಮಾ, ತಮ್ಮ ಕ್ರೀಡಾ ಜೀವನದ ಮರೆಯಲಾಗದ ಕ್ಷಣ ಎಂದಿದ್ದಾರೆ.
ಕೊನೆಯ ಓವರ್‌ನಲ್ಲಿ ಜೋಗಿಂದರ್ ಶರ್ಮಾ ಬೌಲಿಂಗ್‌ನಲ್ಲಿ ಮಿಸ್ಬಾ ಉಲ್ ಹಕ್ ಹೊಡೆದಾಗ ಎಸ್. ಶ್ರೀಶಾಂತ್ ಕ್ಯಾಚ್ ಕೈಚೆಲ್ಲುವುದಾಗಿಯುವರಾಜ್ ಸಿಂಗ್ ಭಾವಿಸಿದ್ದರು ಎಂದು ರೋಹಿತ್ ತಿಳಿಸಿದರು.
'ನಾನು ಕವರ್‌ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದೆ. ಯುವರಾಜ್ ಸಿಂಗ್ ಪಾಯಿಂಟ್‌ನಲ್ಲಿದ್ದರು. ಶ್ರೀಶಾಂತ್ ಅವರನ್ನು ನೋಡಲು ಯುವಿ ಬಯಸಲಿಲ್ಲ. ಯಾಕೆಂದರೆ ಅವರು ಕ್ಯಾಚ್ ಕೈಚೆಲ್ಲುತ್ತಾರೆ ಎಂದೇ ನಿರೀಕ್ಷಿಸುತ್ತಿದ್ದರು' ಎಂದು ಹೇಳಿದರು.
'ಯುವರಾಜ್ ಸಿಂಗ್ ಮನಸ್ಸಲ್ಲಿ ಏನಿತ್ತು ನನಗೆ ತಿಳಿದಿಲ್ಲ. ಆದರೆ ಆ ಕ್ಷಣದಲ್ಲಿ ಅತ್ತ ನೋಡುವ ಬದಲು ಹಿಂತಿರುಗಿ ನೋಡುತ್ತಿದ್ದರು' ಎಂದು ನಗುಮುಖದಿಂದಲೇ ತಿಳಿಸಿದರು.
'ಬಹುಶಃ ಶ್ರೀಶಾಂತ್ ತಮ್ಮ ವೃತ್ತಿ ಜೀವನದಲ್ಲಿ ತೆಗೆದುಕೊಂಡಿರುವ ಅತ್ಯಂತ ಒತ್ತಡದ ಕ್ಯಾಚ್ ಆಗಿರಬಹುದು' ಎಂದು ರೋಹಿತ್ ಹೇಳಿದರು.
'ಅದು ನನ್ನ ಚೊಚ್ಚಲ ವಿಶ್ವಕಪ್ ಗೆಲುವಾಗಿತ್ತು. ವಿಶ್ವಕಪ್ ಹಾಗೂ ಪಾಕಿಸ್ತಾನ ವಿರುದ್ಧ ಗೆಲ್ಲುವ ಭಾವನೆ ಹೇಗಿರುತ್ತೆ ಎಂಬುದು ನನಗೆ ಗೊತ್ತಿರಲಿಲ್ಲ' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.