ಅಲ್ ಅಮೆರತ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ 'ಬಿ' ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಒಮನ್ ವಿರುದ್ಧ ಸ್ಕಾಟ್ಲೆಂಡ್ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಈ ಮೂಲಕ ಸತತ ಮೂರನೇ ಗೆಲುವು ದಾಖಲಿಸಿರುವ ಸ್ಕಾಟ್ಲೆಂಡ್, ಗುಂಪಿನಅಗ್ರಸ್ಥಾನಿಯಾಗಿ 'ಸೂಪರ್-12'ರ ಹಂತಕ್ಕೆ ಲಗ್ಗೆಯಟ್ಟಿದೆ. ಈ ಮೂಲಕ ಸೂಪರ್-12 ಹಂತದಲ್ಲಿಭಾರತ ಇರುವ'ಗ್ರೂಪ್ 2'ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
ಅತ್ತ ಸತತ ಎರಡನೇ ಸೋಲಿನ ಆಘಾತಕ್ಕೆ ಒಳಗಾಗಿರುವ ಒಮನ್ ಟೂರ್ನಿಯಿಂದಲೇ ನಿರ್ಗಮಿಸಿದೆ. ಈ ಮೊದಲು ಪಪುವಾ ನ್ಯೂನಿಗಿ ವಿರುದ್ಧ ಗೆಲುವು ದಾಖಲಿಸಿರುವ ಬಾಂಗ್ಲಾದೇಶ ಕೂಡ ಸೂಪರ್-12 ಹಂತಕ್ಕೆ ಪ್ರವೇಶಿಸಿತ್ತು.
'ಬಿ' ಗುಂಪಿನಿಂದ ಸೂಪರ್-12 ಹಂತಕ್ಕೆ ಪ್ರವೇಶಿಸಿದ ತಂಡಗಳು:
ಸ್ಕಾಟ್ಲೆಂಡ್ ಹಾಗೂ ಬಾಂಗ್ಲಾದೇಶ
'ಬಿ' ಗುಂಪಿನಿಂದ ನಿರ್ಗಮಿಸಿದ ತಂಡಗಳು:
ಒಮನ್ ಹಾಗೂ ಪಪುವಾ ನ್ಯೂಗಿನಿ
ಬಾಂಗ್ಲಾದೇಶ ಸೇರ್ಪಡೆಯೊಂದಿಗೆ 'ಸೂಪರ್-12' - 'ಗ್ರೂಪ್ 1'ತಂಡಗಳು ಇಂತಿದೆ:
ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್, ಬಾಂಗ್ಲಾದೇಶ ಮತ್ತು ಎ1.
ಸ್ಕಾಟ್ಲೆಂಡ್ ಸೇರ್ಪಡೆಯೊಂದಿಗೆ 'ಸೂಪರ್-12' - 'ಗ್ರೂಪ್ 2' ತಂಡಗಳು ಇಂತಿದೆ:
ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಗಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ಎ2.
ಸೂಪರ್-12 ಹಂತಕ್ಕೆ 'ಎ' ಗುಂಪಿನ ಇನ್ನೆರಡು ತಂಡಗಳು (ಎ1 ಹಾಗೂ ಎ2) ಶುಕ್ರವಾರದಂದು ನಿಗದಿಯಾಗಲಿವೆ. ಈ ಪೈಕಿ ಶ್ರೀಲಂಕಾ ಈಗಾಗಲೇ ಸೂಪರ್-12 ಹಂತಕ್ಕೆ ಲಗ್ಗೆಯಿಟ್ಟಿದೆ.
ಸ್ಕಾಟ್ಲೆಂಡ್‌ಗೆ ಗೆಲುವಿನ'ಹ್ಯಾಟ್ರಿಕ್'
123 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಸ್ಕಾಟ್ಲೆಂಡ್ 17 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಸ್ಕಾಟ್ಲೆಂಡ್ ಪರ ನಾಯಕ ಕೈಲ್ ಕೋಜರ್ (41), ಜಾರ್ಜ್ ಮುನ್ಸೆ (20), ಮ್ಯಾಥ್ಯೂ ಕ್ರಾಸ್ (26*) ಹಾಗೂ ರಿಚರ್ಡ್ ಬ್ಯಾರಿಂಗ್ಟನ್ (31*) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಈ ಮೊದಲು ಸ್ಕಾಟ್ಲೆಂಡ್ ಬೌಲರ್‌ಗಳ ನಿಖರ ದಾಳಿಗೆ ಸಿಲುಕಿದ ಒಮನ್ 20 ಓವರ್‌ಗಳಲ್ಲಿ 122 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಉತ್ತಮ ಲಯದಲ್ಲಿದ್ದ ಜತಿಂದರ್ ಸಿಂಗ್ ರನೌಟ್ (0) ಆಗುವ ಮೂಲಕ ನಿರಾಸೆ ಅನುಭವಿಸಿದರು. ಅಕಿಖ್ ಇಲಿಯಾಸ್ ಗರಿಷ್ಠ 37 ರನ್ ಗಳಿಸಿದರು. ನಾಯಕ ಜೀಶನ್ ಮಖ್ಸೂದ್ (34) ಹಾಗೂ ಮೊಹಮ್ಮದ್ ನದೀಮ್ (25) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.
ಸ್ಕಾಟ್ಲೆಂಡ್ ಪರ ಜೋಶ್ ಡೇವಿ ಮೂರು ಮತ್ತು ಸಫೈನ್ ಶರೀಫ್ ಹಾಗೂ ಮೈಕೆಲ್ ಲೀಸ್ಕ್ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.