ಮೆಲ್ಬರ್ನ್:ಈ ಬಾರಿಯ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ 'ಎ' ಗುಂಪಿನಿಂದ ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ 'ಬಿ' ಗುಂಪಿನಿಂದ ಭಾರತ, ಪಾಕಿಸ್ತಾನ ಸೆಮಿಫೈನಲ್ಸ್‌ಗೆ ಲಗ್ಗೆ ಇಟ್ಟಿವೆ.
ಸೆಮಿಫೈನಲ್ ಪಂದ್ಯಗಳು ನವೆಂಬರ್ 9 ಮತ್ತು 10 ರಂದು ನಡೆಯಲಿವೆ.'ಎ' ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ನ್ಯೂಜಿಲೆಂಡ್ ಮತ್ತು'ಬಿ' ಗುಂಪಿನ ಎರಡನೇ ಸ್ಥಾನಿ ಪಾಕಿಸ್ತಾನಮೊದಲ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಅದೇರೀತಿ,'ಬಿ' ಗುಂಪಿನಲ್ಲಿ ಮೊದಲ ಸ್ಥಾನದಲ್ಲಿರುವ ಭಾರತಕ್ಕೆ, 'ಎ' ಗುಂಪಿನ ಎರಡನೇ ಸ್ಥಾನಿ ಇಂಗ್ಲೆಂಡ್ ಎರಡನೇ ಸೆಮಿಫೈನಲ್‌ನಲ್ಲಿ ಸವಾಲು ಹಾಕಲಿದೆ.
ನಾಕೌಟ್ ಹಂತದ ಮೊದಲ ಪಂದ್ಯವು ಸಿಡ್ನಿಯಲ್ಲಿ ಮತ್ತು ಎರಡನೇ ಪಂದ್ಯವು ಅಡಿಲೇಡ್‌ನಲ್ಲಿ ನಡೆಯಲಿದೆ. ಈ ಪಂದ್ಯಗಳಲ್ಲಿ ಗೆಲ್ಲುವವರು ನವೆಂಬರ್ 13ರಂದು ಮೆಲ್ಬರ್ನ್‌ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ.
ಸೂಪರ್ 12ರ ಹಂತದಲ್ಲಿ ತಂಡಗಳ ಸಾಧನೆ
'ಎ' ಗುಂಪು: ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳುಸೂಪರ್ 12ರ ಹಂತದಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ತಲಾ ಮೂರು ಜಯ, ಒಂದು ಸೋಲು ಕಂಡಿವೆ. ಎರಡೂ ತಂಡಗಳು ಮಳೆಯಿಂದಾಗಿ ಒಂದು ಪಂದ್ಯದಲ್ಲಿ ಆಡಲು ಸಾಧ್ಯವಾಗಿಲ್ಲ. ಹೀಗಾಗಿ ಸಮಾನ (7) ಅಂಕಗಳನ್ನು ಹೊಂದಿವೆ. ಆದರೆ, ನ್ಯೂಜಿಲೆಂಡ್ ರನ್‌ರೇಟ್ ಆಧಾರದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ನ್ಯೂಜಿಲೆಂಡ್
ಪಂದ್ಯ | ಎದುರಾಳಿ | ಫಲಿತಾಂಶ |
1ನೇ ಪಂದ್ಯ | ಆಸ್ಟ್ರೇಲಿಯಾ | 89 ರನ್ ಅಂತರದ ಜಯ |
2ನೇ ಪಂದ್ಯ | ಅಫ್ಗಾನಿಸ್ತಾನ | ಮಳೆಯಿಂದಾಗಿ ರದ್ದು |
3ನೇ ಪಂದ್ಯ | ಶ್ರೀಲಂಕಾ | 65 ರನ್ ಅಂತರದ ಜಯ |
4ನೇ ಪಂದ್ಯ | ಇಂಗ್ಲೆಂಡ್ | 20 ರನ್ ಅಂತರದ ಸೋಲು |
5ನೇ ಪಂದ್ಯ | ಐರ್ಲೆಂಡ್ | 35 ರನ್ ಅಂತರದ ಜಯ |
ಇಂಗ್ಲೆಂಡ್
ಪಂದ್ಯ | ಎದುರಾಳಿ | ಫಲಿತಾಂಶ |
1ನೇ ಪಂದ್ಯ | ಅಫ್ಗಾನಿಸ್ತಾನ | 5 ವಿಕೆಟ್ ಅಂತರದ ಜಯ |
2ನೇ ಪಂದ್ಯ | ಐರ್ಲೆಂಡ್ | 5 ರನ್ ಅಂತರದ ಜಯ |
3ನೇ ಪಂದ್ಯ | ಆಸ್ಟ್ರೇಲಿಯಾ | ಮಳೆಯಿಂದಾಗಿ ರದ್ದು |
4ನೇ ಪಂದ್ಯ | ನ್ಯೂಜಿಲೆಂಡ್ | 20 ರನ್ ಅಂತರದ ಜಯ |
5ನೇ ಪಂದ್ಯ | ಶ್ರೀಲಂಕಾ | 4 ವಿಕೆಟ್ ಅಂತರದ ಜಯ |
'ಬಿ' ಗುಂಪು: ಭಾರತ ತಂಡಸೂಪರ್ 12ರ ಹಂತದಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಜಯ ಮತ್ತು ಒಂದು ಸೋಲು ಕಂಡಿದೆ. ಪಾಕಿಸ್ತಾನ ಸಹ ಇಷ್ಟೇ ಪಂದ್ಯಗಳನ್ನು ಆಡಿದ್ದು 3 ಗೆಲುವು ಮತ್ತು 2 ಸೋಲು ಕಂಡಿದೆ. ಭಾರತದ ಬಳಿ 8 ಅಂಕಗಳಿದ್ದು, ಪಾಕಿಸ್ತಾನ 6 ಅಂಕಗಳನ್ನು ಹೊಂದಿದೆ.ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿ ಉಳಿದುಕೊಂಡಿವೆ.
ಭಾರತ
ಪಂದ್ಯ | ಎದುರಾಳಿ | ಫಲಿತಾಂಶ |
1ನೇ ಪಂದ್ಯ | ಪಾಕಿಸ್ತಾನ | 4 ವಿಕೆಟ್ ಅಂತರದ ಜಯ |
2ನೇ ಪಂದ್ಯ | ನೆದರ್‌ಲೆಂಡ್ಸ್ | 56 ರನ್ ಅಂತರದ ಜಯ |
3ನೇ ಪಂದ್ಯ | ದಕ್ಷಿಣ ಆಫ್ರಿಕಾ | 5 ವಿಕೆಟ್ ಅಂತರದ ಸೋಲು |
4ನೇ ಪಂದ್ಯ | ಬಾಂಗ್ಲಾದೇಶ | 5 ರನ್ ಅಂತರದ ಜಯ |
5ನೇ ಪಂದ್ಯ | ಜಿಂಬಾಬ್ವೆ | 71 ರನ್ ಅಂತರದ ಜಯ |
ಪಾಕಿಸ್ತಾನ
ಪಂದ್ಯ | ಎದುರಾಳಿ | ಫಲಿತಾಂಶ |
1ನೇ ಪಂದ್ಯ | ಭಾರತ | 4ವಿಕೆಟ್ ಅಂತರದ ಸೋಲು |
2ನೇ ಪಂದ್ಯ | ಜಿಂಬಾಬ್ವೆ | 1 ರನ್ ಅಂತರದ ಸೋಲು |
3ನೇ ಪಂದ್ಯ | ನೆದರ್‌ಲೆಂಡ್ಸ್ | 6 ವಿಕೆಟ್ ಅಂತರದ ಜಯ |
4ನೇ ಪಂದ್ಯ | ದಕ್ಷಿಣ ಆಫ್ರಿಕಾ | 33 ರನ್ ಅಂತರದ ಜಯ |
5ನೇ ಪಂದ್ಯ | ಬಾಂಗ್ಲಾದೇಶ | 5 ವಿಕೆಟ್ ಅಂತರದ ಜಯ |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.