ADVERTISEMENT

T20 World Cup: ವರುಣ್ ಚಕ್ರವರ್ತಿ ಟೀಮ್ ಇಂಡಿಯಾದ ಪ್ರಮುಖ ಅಸ್ತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಅಕ್ಟೋಬರ್ 2021, 15:29 IST
Last Updated 21 ಅಕ್ಟೋಬರ್ 2021, 15:29 IST
ವರುಣ್ ಚಕ್ರವರ್ತಿ (ಟ್ವಿಟರ್ ಚಿತ್ರ)
ವರುಣ್ ಚಕ್ರವರ್ತಿ (ಟ್ವಿಟರ್ ಚಿತ್ರ)   

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಟಗಾರರಾದ ವರುಣ್ ಚಕ್ರವರ್ತಿ ಹಾಗೂ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ವೈದ್ಯಕೀಯ ತಂಡ ತೀವ್ರ ನಿಗಾ ವಹಿಸುತ್ತಿದೆ.

ಆಫ್ ಸ್ಪಿನ್ನರ್ ವರುಣ್ ಮೊಣಕಾಲು ನೋವು ಆತಂಕಕ್ಕೆ ಕಾರಣವಾಗಿದೆ. ಅತ್ತ ಬೆನ್ನು ನೋವಿನಿಂದ ಮುಕ್ತರಾದರೂ ಹಾರ್ದಿಕ್ ಇನ್ನಷ್ಟೇ ಬೌಲಿಂಗ್ ಆರಂಭಿಸಬೇಕಿದೆ.

ಹಾಗಾಗಿ ವಿಶ್ವಕಪ್‌ನಲ್ಲಿ ವರುಣ್ ಚಕ್ರವರ್ತಿ ಅವರನ್ನು ವಿವೇಚನೆಯಿಂದ ಬಳಕೆ ಮಾಡಲು ಟೀಮ್ ಇಂಡಿಯಾ ರಣನೀತಿ ಸಿದ್ಧಗೊಳಿಸುತ್ತಿದೆ.

ಈ ಕುರಿತು ಎಎನ್‌ಐ ವರದಿ ಮಾಡಿದ್ದು, ತಾಜಾತನ ಕಾಪಾಡಿಕೊಳ್ಳುವ ಮೂಲಕ ವರುಣ್ ಚಕ್ರವರ್ತಿ ಅವರನ್ನು ಪ್ರಮುಖ ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಸುವ ಯೋಜನೆ ಹೊಂದಿದೆ.

ನಿಸ್ಸಂದೇಹವಾಗಿ ಚುಟುಕು ಕ್ರಿಕೆಟ್‌ನಲ್ಲಿ ವರುಣ್ ಚಕ್ರವರ್ತಿ ಮ್ಯಾಚ್ ವಿನ್ನರ್ ಆಗಿದ್ದಾರೆ. ವಿಶ್ವಕಪ್‌ನಂತಹ ದೊಡ್ಡ ಟೂರ್ನಿಯಲ್ಲಿ ಅವರ ನಾಲ್ಕು ಓವರ್ ಯಾವ ರೀತಿಯ ಬದಲಾವಣೆಯನ್ನು ತರಲಿದೆ ಎಂಬುದರ ಬಗ್ಗೆ ನಾಯಕತ್ವ ವಿಭಾಗಕ್ಕೆ ಅರಿವಿದೆ. ವೈದ್ಯಕೀಯ ತಂಡವು ವರುಣ್ ಚಕ್ರವರ್ತಿ ಮೇಲೆ ಸೂಕ್ಷ್ಮ ನಿಗಾ ವಹಿಸುತ್ತಿದ್ದು, ಅವರ ಸೇವೆಯನ್ನು ವಿಚೇಚನೆಯಿಂದ ಬಳಕೆ ಮಾಡಲಿದೆ. ವಿರಾಟ್ ಕೊಹ್ಲಿ ಪಾಲಿಗೆ ಅವರು 'ಟ್ರಂಪ್ ಕಾರ್ಡ್' ಆಗಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.