ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಮಂಗಳವಾರ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.
ಕಿಕ್ಕಿರಿದು ತುಂಬಿದ ಪಾಕಿಸ್ತಾನದ ಅಭಿಮಾನಿಗಳು, ನ್ಯೂಜಿಲೆಂಡ್ ತಂಡವನ್ನು 'ಸೆಕ್ಯೂರಿಟಿ...ಸೆಕ್ಯೂರಿಟಿ' ಎಂದು ಗೇಲಿ ಮಾಡುತ್ತಿರುವುದು ಕಂಡುಬಂದಿತ್ತು.
ಏನಿದು ವಿವಾದ?
ವಿಶ್ವಕಪ್‌ಗೂ ಮೊದಲು ನ್ಯೂಜಿಲೆಂಡ್ ತಂಡವು ಪಾಕಿಸ್ತಾನ ಪ್ರವಾಸವನ್ನು ಕೈಗೊಂಡಿತ್ತು. ಆದರೆ ಸರಣಿ ಆರಂಭಕ್ಕೆ ಕೆಲವೇ ತಾಸಿಗೂ ಮೊದಲು ಭದ್ರತಾ ಕಾರಣಗಳನ್ನು ಒಡ್ಡಿ ಟೂರ್ನಿಯಿಂದ ಹಿಂದಕ್ಕೆ ಸರಿದಿತ್ತು.
ಇದು ಆಟಗಾರರು ಸೇರಿದಂತೆ ಪಾಕ್ ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಯಾವುದೇ ಕಾರಣಕ್ಕೂ ವಿಶ್ವಕಪ್‌ನಲ್ಲಿ ಕಿವೀಸ್ ವಿರುದ್ಧ ಗೆಲ್ಲುವ ಪಣ ತೊಟ್ಟಿತ್ತು. ಪಾಕಿಸ್ತಾನದ ಮಾಜಿಗಳು ಬಹಿರಂಗವಾದ ಹೇಳಿಕೆಗಳನ್ನು ಕೊಟ್ಟಿದ್ದರು.
ಈಗ ಭಾರತದ ಬೆನ್ನಲ್ಲೇ ನ್ಯೂಜಿಲೆಂಡ್ ವಿರುದ್ಧವೂ ಪಾಕಿಸ್ತಾನ ಗೆಲುವು ಬಾರಿಸಿದೆ. ಅಲ್ಲದೆ ತಕ್ಕ ತಿರುಗೇಟು ನೀಡಿದೆ. ಅತ್ತ ಅಭಿಮಾನಿಗಳು ಸಂಭ್ರಮದ ಅಲೆಯಲ್ಲಿ ತೇಲಾಡಿದ್ದಾರೆ.
ಪಾಕಿಸ್ತಾನದ ಆಟಗಾರ ಮೊಹಮ್ಮದ್ ಹಫೀಜ್ ಈ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ತಾವು ಈ ಗೆಲುವನ್ನು ಪಾಕಿಸ್ತಾನದ ಭದ್ರತಾ ಪಡೆಗೆ ಅರ್ಪಿಸುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.