ಸಿಡ್ನಿ: ಭಾರತ ತಂಡದ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಅನುಭವಿ ಆಲ್‌ರೌಂಡರ್ ತಾಹಿಲಾ ಮೆಕ್‌ಗ್ರಾತ್ ಅವರನ್ನು ಆಸ್ಟ್ರೇಲಿಯಾ ತಂಡದ ನಾಯಕಿಯನ್ನಾಗಿ ನೇಮಕ ಮಾಡಲಾಗಿದೆ. 13 ಆಟಗಾರ್ತಿಯರ ತಂಡವನ್ನು ಶನಿವಾರ ಪ್ರಕಟಿಸಲಾಯಿತು.
ತಂಡದ ನಾಯಕಿಯಾಗಿದ್ದ ಅಲಿಸಾ ಹೀಲಿ ಅವರು ಮೊಣಕಾಲು ನೋವಿನಿಂದ ಬಳಲುತ್ತಿರುವ ಕಾರಣ ತಂಡದಲ್ಲಿ ಸ್ಥಾನ ಪಡೆದಿಲ್ಲ. ಬಿಗ್‌ಬ್ಯಾಷ್ ಲೀಗ್‌ನ ಕೊನೆಯ ಕೆಲವು ಪಂದ್ಯಗಳಲ್ಲಿ ಅವರು ಈ ಕಾರಣದಿಂದ ಆಡಿರಲಿಲ್ಲ.
ಭಾರತ ವಿರುದ್ಧ ಸರಣಿಯ ಮೊದಲ ಪಂದ್ಯ ಡಿಸೆಂಬರ್ 5ರಂದು ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಎರಡನೇ ಪಂದ್ಯವೂ ಡಿಸೆಂಬರ್ 8ರಂದು ಬ್ರಿಸ್ಬೇನ್‌ನಲ್ಲಿ ನಡೆಯಲಿದ್ದು, 11ರಂದು ಮೂರನೇ ಪಂದ್ಯ ಪರ್ತ್‌ನಲ್ಲಿ ನಡೆಯಲಿದೆ.
ತಂಡವು, ಬೆತ್ ಮೂನಿ, ಎಲಿಸ್ ಪೆರಿ, ಮೇಘನ್ ಶುಟ್ ಮತ್ತು ಅನ್ನಾಬೆಲ್ ಸದರ್‌ಲ್ಯಾಂಡ್, ಫೋಬಿ ಲಿಚ್‌ಫೀಲ್ಡ್, ಜಾರ್ಜಿಯಾ ವಾರ್ಹೆಮ್ ಅಂಥ ಅನುಭವಿಗಳನ್ನು ಹೊಂದಿದೆ. ಅಗ್ರ ಕ್ರಮಾಂಕದಲ್ಲಿ ಆಡುವ ಜಾರ್ಜಿಯಾ ವೊಲ್ ಅವರು ಮೊದಲ ಬಾರಿ ಸೀನಿಯರ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.