ADVERTISEMENT

PAK vs BAN Test Cricket | ಪಾಕ್ ವಿರುದ್ಧ ಸರಣಿ ಸ್ವೀಪ್ ಮಾಡಿದ ಬಾಂಗ್ಲಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಸೆಪ್ಟೆಂಬರ್ 2024, 11:03 IST
Last Updated 3 ಸೆಪ್ಟೆಂಬರ್ 2024, 11:03 IST
<div class="paragraphs"><p>ಬಾಂಗ್ಲಾದೇಶ ಆಟಗಾರರ ಸಂಭ್ರಮ </p></div>

ಬಾಂಗ್ಲಾದೇಶ ಆಟಗಾರರ ಸಂಭ್ರಮ

   

Credit: X/@BCBTigers

ರಾವಲ್ಪಿಂಡಿ (ಪಾಕಿಸ್ತಾನ): ಬಾಂಗ್ಲಾದೇಶ ತಂಡವು ಮಂಗಳವಾರ ಆರು ವಿಕೆಟ್‌ಗಳಿಂದ ಪಾಕಿಸ್ತಾನ ತಂಡವನ್ನು ಸೋಲಿಸಿ ಎರಡು ಟೆಸ್ಟ್‌ಗಳ ಸರಣಿಯಲ್ಲಿ 2–0 ಯಿಂದ ಚಾರಿತ್ರಿಕ ಜಯ ಸಾಧಿಸಿತು.

ADVERTISEMENT

ಗೆಲುವಿಗೆ 185 ರನ್‌ಗಳ ಗುರಿ ಎದುರಿಸಿದ್ದು ನಾಲ್ಕನೇ ದಿನದ ಕೊನೆಗೆ ವಿಕೆಟ್‌ ನಷ್ಟವಿಲ್ಲದೇ 42 ರನ್ ಗಳಿಸಿದ್ದ ಬಾಂಗ್ಲಾದೇಶ ಜಯ ಹೆಚ್ಚುಕಮ್ಮಿ ಖಚಿತವಾಗಿತ್ತು. ಕೊನೆಯ ದಿನ ಚಹ ವಿರಾಮಕ್ಕೆ 25 ನಿಮಿಷಗಳಿರುವಂತೆ 4 ವಿಕೆಟ್‌ಗೆ 185 ರನ್ (56 ಓವರುಗಳಲ್ಲಿ) ಗಳಿಸಿ ವಿಜಯೋತ್ಸವ ಆಚರಿಸಿತು.

ಲೆಗ್‌ಬ್ರೇಕ್ ಬೌಲರ್‌ ಅಬ್ರಾರ್ ಅಹ್ಮದ್‌ ಬೌಲಿಂಗ್‌ನಲ್ಲಿ ಕವರ್ಸ್‌ಗೆ ಬೌಂಡರಿ ಬಾರಿಸಿದ ಅನುಭವಿ ಶಕೀಬ್‌ ಅಲ್ ಹಸನ್ (ಔಟಾಗದೇ 21) ಗೆಲುವಿನ ರನ್ ಗಳಿಸಿದರು. ಮುಷ್ಫಿಕುರ್‌ ರಹೀಂ ಅಜೇಯ 22 ರನ್ ಹೊಡೆದರು.

ಪ್ರವಾಸಿ ತಂಡವು ಮೊದಲ ಟೆಸ್ಟ್‌ ಪಂದ್ಯವನ್ನು ನಾಲ್ಕು ದಿನಗಳ ಒಳಗೆ 10 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.

ಇದು ಬಾಂಗ್ಲಾದೇಶಕ್ಕೆ ತವರಿನಿಂದ ಹೊರಗೆ ಎರಡನೇ ಸರಣಿ ಗೆಲುವು. ಈ ಹಿಂದೆ 2009ರಲ್ಲಿ ವೆಟ್‌ ಇಂಡೀಸ್‌ ವಿರುದ್ಧ ಗೆಲುವು ಸಾಧಿಸಿತ್ತು.

ಪಾಕಿಸ್ತಾನ ತವರಿನಲ್ಲಿ 10 ಟೆಸ್ಟ್‌ಗಳಿಂದ ಗೆಲುವನ್ನೇ ಕಂಡಿಲ್ಲ. 2021ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರಾವಲ್ಪಿಂಡಿಯಲ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯವೊಂದನ್ನು ಗೆದ್ದುಕೊಂಡಿತ್ತು. ಕಳೆದ ವರ್ಷ ನಾಯಕನಾದ ನಂತರ ಶಾನ್‌ ಮಸೂದ್‌ ಅನುಭವಿಸಿದ ಎರಡನೇ ಸರಣಿ ಸೋಲು ಇದಾಗಿದೆ. ಈ ಹಿಂದೆ ಆಸ್ಟ್ರೇಲಿಯಾಕ್ಕೆ 0–3 ರಿಂದ ಸೋತಿತ್ತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಪಾಕಿಸ್ತಾನ: 274, ಬಾಂಗ್ಲಾದೇಶ: 262; ಎರಡನೇ ಇನಿಂಗ್ಸ್‌: ಪಾಕಿಸ್ತಾನ: 172; ಬಾಂಗ್ಲಾದೇಶ: 56 ಓವರುಗಳಲ್ಲಿ 4 ವಿಕೆಟ್‌ಗೆ 185 (ಝಾಕಿರ್‌ ಹಸನ್‌ 40, ನಜ್ಮುಲ್ ಹುಸೇನ್ ಶಾಂತೊ 38, ಮೊಮಿನುಲ್ ಹಕ್ 34, ಮುಷ್ಫಿಕುರ್ ರಹೀಂ ಔಟಾಗದೇ 22, ಶಕೀಬ್ ಅಲ್ ಹಸನ್ ಔಟಾಗದೇ 21). ಪಂದ್ಯದ ಆಟಗಾರ: ಲಿಟನ್ ದಾಸ್ (ಮೊದಲ ಇನಿಂಗ್ಸ್‌ನಲ್ಲಿ 138). ಸರಣಿಯ ಆಟಗಾರ: ಮೆಹಿದಿ ಹಸನ್ ಮಿರಾಜ್ (155 ರನ್‌, 10 ವಿಕೆಟ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.