ADVERTISEMENT

Test Cricket: ದ.ಆಫ್ರಿಕಾ–ವೆಸ್ಟ್‌ ಇಂಡೀಸ್‌ ಟೆಸ್ಟ್‌ ಡ್ರಾ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 23:45 IST
Last Updated 12 ಆಗಸ್ಟ್ 2024, 23:45 IST
<div class="paragraphs"><p>ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)</p></div>

ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)

   

ಪೋರ್ಟ್ ಆಫ್ ಸ್ಪೇನ್: ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ಇಂಡೀಸ್‌ ನಡುವಿನ ಮೊದಲ ಟೆಸ್ಟ್‌ ವೆಸ್ಟ್ ಇಂಡೀಸ್‌ ತಂಡದ ಪಂದ್ಯವು ಡ್ರಾಗೊಂಡಿದೆ.

ಮಳೆ-ಬಾಧಿತ ಮೊದಲ ಟೆಸ್ಟ್‌ನ ಅಂತಿಮ ಭಾನುವಾರದಂದು ಚೊಚ್ಚಲ ಶತಕ ಬಾರಿಸುವ ಅವಕಾಶ ಕಳೆದುಕೊಂಡ  ವೆಸ್ಟ್ ಇಂಡೀಸ್‌ ತಂಡದ ಅಲಿಕ್ ಅಥಾನಾಜೆ ದಕ್ಷಿಣ ಆಫ್ರಿಕಾ ವಿರುದ್ಧ ಗೆ ಡ್ರಾ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ADVERTISEMENT

ಭೋಜನ ವಿರಾಮಕ್ಕೂ ಮೊದಲು ದಕ್ಷಿಣ ಆಫ್ರಿಕಾ ಮೂರು ವಿಕೆಟ್ ನಷ್ಟಕ್ಕೆ 173ರನ್ ಗಳಿಸಿ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಎದುರಾಳಿಗೆ 298 ರನ್‌ ಗುರಿ ನೀಡಿತು. ಅಥನಾಜೆ  ಮತ್ತು ಜೇಸನ್ ಹೋಲ್ಡರ್ ಅವರ 65ರನ್‌ಗಳ ಐದನೇ ವಿಕೆಟ್ ಜೊತೆಯಾಟವು ವೆಸ್ಟ್‌ ಇಂಡೀಸ್‌ ತಂಡಕ್ಕೆ ಚೇತರಿಕೆ ನೀಡಿತು.

ಮೊದಲ ಇನ್ನಿಂಗ್ಸ್‌ನಂತೆ, ಕೇಶವ್ ಮಹಾರಾಜ್ ಆತಿಥೇಯರಿಗೆ ದೊಡ್ಡ ಆಘಾತ ನೀಡಿದರು. ಎಡಗೈ ಸಾಂಪ್ರದಾಯಿಕ ಸ್ಪಿನ್ನರ್ 88 ಕ್ಕೆ 4 ಗಳಿಸಿ ಪಂದ್ಯದ ಅಂಕಿಅಂಶಗಳನ್ನು 164ಕ್ಕೆ ಎಂಟು ಗಳಿಸಿದರು.

ಮಹಾರಾಜ್ ಮತ್ತು ಕಗಿಸೊ ರಬಾಡ ಅವರ ದಾಳಿಯಿಂದ ಕಂಗೆಟ್ಟಿದ್ದ ವೆಸ್ಟ್ ಇಂಡೀಸ್ ತಂಡವನ್ನು ಅಥನಾಜೆ ಕಾಪಾಡಿದರು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ: 357 ಮತ್ತು 173/3ಡಿ. ವೆಸ್ಟ್ ಇಂಡೀಸ್: 233 ಮತ್ತು 56.2 ಓವರ್‌ಗಳಲ್ಲಿ 201/5  (ಅಲಿಕ್ ಅಥಾನಾಜೆ 92, ಕವೆಮ್ ಹಾಡ್ಜ್ 29, ಜೇಸನ್ ಹೋಲ್ಡರ್ 31). ಕೇಶವ್ ಮಹಾರಾಜ್ 4-88).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.