ADVERTISEMENT

ಕೆಎಸ್‌ಸಿಎ ಕ್ರಿಕೆಟ್: ಅಕ್ಷಯ್ ಅಮೋಘ ಶತಕ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 14:15 IST
Last Updated 11 ಜುಲೈ 2024, 14:15 IST
ಕೆಎಸ್‌ಸಿಎ ಲೋಗೊ
ಕೆಎಸ್‌ಸಿಎ ಲೋಗೊ   

ಬೆಂಗಳೂರು: ಆರ್. ಅಕ್ಷಯ್ (126; 191ಎಸೆತ, 4X17) ಅವರ ಶತಕ ಮತ್ತು ವಿನಾಯಕ ಹೊಳ್ಳ( 58ಕ್ಕೆ5) ಅವರ ಅಮೋಘ ಬೌಲಿಂಗ್‌ನಿಂದ ದ ಬೆಂಗಳೂರು ಕ್ರಿಕೆಟರ್ಸ್ ತಂಡವು ಎಂ.ಎ.ಟಿ ಆಚಾರ್ಯ ಶೀಲ್ಡ್‌ಗಾಗಿ ನಡೆಯುತ್ತಿರುವ  ಕೆಎಸ್‌ಸಿಎ ಒಂದನೇ ಗುಂಪು, ಎರಡನೇ ಡಿವಿಷನ್ ಲಿಗ್ ನಾಕೌಟ್ ಟೂರ್ನಿಯಲ್ಲಿ  ಇನಿಂಗ್ಸ್‌ ಮತ್ತು 76 ರನ್‌ಗಳಿಂದ ವರ್ಲ್‌ವಿಂಡ್ ಕ್ರಿಕೆಟರ್ಸ್ ಎದುರು ಜಯಿಸಿತು. 

ಇನ್ನೊಂದು ಪಂದ್ಯದಲ್ಲಿ; ಹೆರಾನ್ಸ್ ಕ್ಲಬ್ ತಂಡದ ಎಸ್‌. ವಿನೋದ್ (ಅಜೇಯ 109) ಅವರು ಶತಕ ದಾಖಲಿಸಿದರು. ರಾಜಾಜಿನಗರ ಕ್ರಿಕೆಟರ್ಸ್ ವಿರುದ್ಧದ ಈ ಪಂದ್ಯವು ಡ್ರಾ ಆಯಿತು. 

ಸಂಕ್ಷಿಪ್ತ ಸ್ಕೋರುಗಳು

ದ ಬೆಂಗಳೂರು ಕ್ರಿಕೆಟರ್ಸ್: 81.1 ಓವರ್‌ಗಳಲ್ಲಿ 351 (ಎಂ. ತನುಷ್ 47, ಆರ್‌. ಅಕ್ಷಯ್ 126, ಯು. ನಕುಲ್ 42, ಡಿ. ಭರತ್ 24, ಕೆ.ಬಿ. ಶ್ರೇಯಸ್ 31, ಮಂಜುನಾಥ್ ಔಟಾಗದೆ 38, ಕೆ. ಸೋಮಸುಂದರ್ 72ಕ್ಕೆ2, ಮಾಣಿಕ್ ರಾಜ್ 76ಕ್ಕೆ2 ತೇಜಸ್ ರೆಡ್ಡಿ 20ಕ್ಕೆ2, ಸೌರವ್ ಪಿ. ಸಾಮಂತ್ 64ಕ್ಕೆ2) ವರ್ಲ್‌ವಿಂಡ್ ಕ್ರಿಕೆಟರ್ಸ್: 35 ಓವರ್‌ಗಳಲ್ಲಿ 102 (ಕೃಶವ್ ಎಸ್. ಸೋಮಸುಂದರ್ 35, ತೇಜಸ್ ರೆಡ್ಡಿ 32, ಮಂಜುನಾಥ್ 17ಕ್ಕೆ3, ಕೇಶವ್ ಮಂಜುನಾಥ್ 24ಕ್ಕೆ3, ವಿನಾಯಕ ಹೊಳ್ಳ 27ಕ್ಕೆ2) ಎರಡನೇ ಇನಿಂಗ್ಸ್: 58 ಓವರ್‌ಗಳಲ್ಲಿ 173 (ಆರ್. ಪ್ರತೀಕ್ಷ್ 53, ವಿ.ಎಲ್. ಸೂರಜ್ 76, ಕೇಶವ್ ಮಂಜುನಾಥ್ 32ಕ್ಕೆ2, ವಿನಾಯಕ ಹೊಳ್ಳ 58ಕ್ಕೆ5) ಬೆಂಗಳೂರು ಕ್ರಿಕೆಟರ್ಸ್‌ಗೆ ಇನಿಂಗ್ಸ್ ಮತ್ತು 76 ರನ್‌ಗಳ ಜಯ. 

ADVERTISEMENT

ಮೊದಲ ಇನಿಂಗ್ಸ್: ಮಲ್ಲೇಶ್ವರಂ ಜಿಮ್‌ಖಾನಾ:  41.2 ಓವರ್‌ಗಳಲ್ಲಿ 157 (ಗ್ಯಾನ್ ಸೋಮಯ್ಯ 22, ಆರ್. ಬದರಿನಾರಾಯಣ 20, ಶ್ರೇಯಾಂಕ ಸಾಗರ 70, ಲವೀಶ್ ಕೌಶಲ್ 59ಕ್ಕೆ3, ಅಗಸ್ತ್ಯ 24ಕ್ಕೆ4). ವಿಜಯಾ ಸಿಸಿ: 53 ಓವರ್‌ಗಳಲ್ಲಿ 204 (ಯಶ್ ಜಾಧವ್ 49, ಅಬುಲ್ ಹಸನ್ ಖಾಲೀದ್ 43, ಲವೀಶ್ ಕೌಶಲ್ 39, ಮಲಿಕ್‌ಸಾಬ್ ಜಿ ಶಿರೂರ್ 29, ಸಮ್ಯಕ್ ವೆಲಾಲೋರ್ 68ಕ್ಕೆ3, ಬಿ.ಪಿ. ಮನೀಷ್ 42ಕ್ಕೆ2). ಎರಡನೇ ಇನಿಂಗ್ಸ್: ಮಲ್ಲೇಶ್ವರಂ–  29.5 ಓವರ್‌ಗಳಲ್ಲಿ 119 (ಶ್ರೇಯಾಂಕ ಸಾಗರ್ 26, ನಚಿಕೇತ್ 38, ಲವೀಶ್ ಕೌಶಲ್ 20ಕ್ಕೆ2, ಎಸ್. ಅಗಸ್ತ್ಯ 38ಕ್ಕೆ2, ವೀರೇಂದ್ರ 35ಕ್ಕೆ3, ಮಲಿಕ್ ಸಾಬ್ ಶಿರೂರ್ 19ಕ್ಕೆ3). 11.2 ಓವರ್‌ಗಳಲ್ಲಿ 1 ವಿಕೆಟ್‌ಗೆ 74 (ಯಶ್ ಜಾಧವ್ ಔಟಾಗದೆ 41, ಲಿಯಾನ್ ಖಾನ್ ಔಟಾಗದೇ 29) ಫಲಿತಾಂಶ: ವಿಜಯಾ ಸಿಸಿಗೆ 9 ವಿಕೆಟ್‌ಗಳ ಜಯ ಹಾಗೂ 6 ಪಾಯಿಂಟ್.

ಹೆರಾನ್ಸ್ ಕ್ಲಬ್: 83.3 ಓವರ್‌ಗಳಲ್ಲಿ 302 (ಪ್ರಜ್ವಲ್ ಪವನ್ 48, ಎಸ್. ವಿನೋದ್ ಅಜೇಯ 109, ಆದಿತ್ಯ ಮಣಿ 57, ಕೆ.ಎಂ. ಪ್ರವೇಶ್ 28, ನಿಶ್ಚಿತ್ ಎನ್ ರಾವ್ 56ಕ್ಕೆ3, ಎಸ್. ಭಾರ್ಗವ್ 74ಕ್ಕೆ3, ರಾಹುಲ್ ಪ್ರಸನ್ನ 57ಕ್ಕೆ3) ರಾಜಾಜಿನಗರ ಕ್ರಿಕೆಟಟರ್ಸ್: 64.1 ಓವರ್‌ಗಳಲ್ಲಿ 264 (ಶಿರೀಶ್ ಬಳಗಾರ್ 33, ನಿಖಿಲ್ ವೇದಾಂತ್ 57, ಎನ್. ರೋಃಇತ್ 34, ನಿಹಾಲ್ ಉಲ್ಲಾಳ 22) ಫಲಿತಾಂಶ: ಪಂದ್ಯ ಡ್ರಾ. ಇಬ್ಬರಿಗೂ ತಲಾ ಒಂದು ಅಂಕ.

ಜವಾನ್ಸ್ ಸಿಸಿ: 90 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 381 (ಎಸ್‌.ಯು. ಕಾರ್ತಿಕ್ 65, ಹರ್ಷಿಲ್ 89, ಧೀರಜ್ ಜೆ ಗೌಡ 20, ರೋಹಿತ್ ಎಸ್‌.ಎಸ್‌.ಜಿ 30, ಸುಮಿತ್ ಕುಮಾರ್ 95, ಎಸ್. ಇಶಾನ್ 31, ವಿದ್ಯಾಧರ್ ಪಾಟೀಲ 64ಕ್ಕೆ3, ಪ್ರಣವ್ ಭಾಟಿಯಾ 95ಕ್ಕೆ3) ಬೆಂಗಳೂರು ಯುನೈಟೆಡ್ ಸಿಸಿ: 61 ಓವರ್‌ಗಳಲ್ಲಿ 216 (ಎಂ. ಅರ್ಸಲನ್ 79, ಅಭಿನವ್ ಮನೋಹರ್ 85, ಇಶಾನ್ 41ಕ್ಕೆ5, ಈಸಾ ಹಕೀಂ ಪುತ್ತಿಗೆ 32ಕ್ಕೆ2, ಎಸ್. ಅಮೋಘ 34ಕ್ಕೆ2), ಎರಡನೇ ಇನಿಂಗ್ಸ್: 14 ಓವರ್‌ಗಳಲ್ಲಿ 1 ವಿಕೆಟ್‌ಗೆ 74 (ಅಕ್ಷಯ್ ಶೆಟ್ಟಿ ವಟಾಗದೆ 46) ಪಂದ್ಯ ಡ್ರಾ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.