ADVERTISEMENT

ಬಾಗಲಕೋಟೆ: ರಕ್ತದಲ್ಲಿ ಕೊಹ್ಲಿ ಚಿತ್ರ ರಚಿಸಿದ ಮಹಾಲಿಂಗಪುರದ ಕೆಎಲ್‌ಇ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 21 ಮೇ 2024, 15:44 IST
Last Updated 21 ಮೇ 2024, 15:44 IST
ಮಹಾಲಿಂಗಪುರದ ಚಿತ್ರಕಲಾ ಶಿಕ್ಷಕ ಶಿವಾನಂದ ನೀಲನ್ನವರ ಅವರು ರಕ್ತದಿಂದ ಬಿಡಿಸಿದ ವಿರಾಟ್ ಕೊಹ್ಲಿ ಚಿತ್ರ.
ಮಹಾಲಿಂಗಪುರದ ಚಿತ್ರಕಲಾ ಶಿಕ್ಷಕ ಶಿವಾನಂದ ನೀಲನ್ನವರ ಅವರು ರಕ್ತದಿಂದ ಬಿಡಿಸಿದ ವಿರಾಟ್ ಕೊಹ್ಲಿ ಚಿತ್ರ.   

ಮಹಾಲಿಂಗಪುರ (ಬಾಗಲಕೋಟೆ ಜಿಲ್ಲೆ): ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಶಿವಾನಂದ ನೀಲನ್ನವರ ಅವರು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಚಿತ್ರವನ್ನು ತಮ್ಮ ರಕ್ತದಿಂದಲೇ ರಚಿಸಿದ್ದಾರೆ.

ಶನಿವಾರ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್‌ ಬೆಂಗಳೂರು  ತಂಡ ಗೆಲುವು ಸಾಧಿಸಿತ್ತು.

ಆರ್‌ಸಿಬಿ ಅಭಿಮಾನಿಯೂ ಆಗಿರುವ ಈ ಶಿಕ್ಷಕ, ವಿರಾಟ್ ಕೊಹ್ಲಿ ಆಟಕ್ಕೆ ಮಾರುಹೋಗಿ ತಮ್ಮದೇ ರಕ್ತದಿಂದ 3–4 ಗಂಟೆಗಳ ಸತತ ಪ್ರಯತ್ನದಿಂದ ಚಿತ್ರ ಬಿಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.