ಚೆನ್ನೈ: ಕೊರೊನಾ ಕಾಲದಲ್ಲೂ ಐಪಿಎಲ್ ಆಟಗಾರರ ಹರಾಜಿನಲ್ಲಿ ಲಕ್ಷ್ಮೀ ಕಟಾಕ್ಷ ಜೋರಾಗಿದೆ. ದಾಖಲೆ ಬೆಲೆಗೆ ದಕ್ಷಿಣ ಆಫ್ರಿಕಾದ ಬೌಲಿಂಗ್ ಆಲೌರೌಂಡರ್ ಕ್ರಿಸ್ ಮೋರಿಸ್ (₹ 16.25 ಕೋಟಿ) ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ ಖರೀದಿಸಿದೆ.
ನಿರೀಕ್ಷೆಯಂತೆ ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್ ವೆಲ್ (₹ 14.25 ಕೋಟಿ) ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ. ಕರ್ನಾಟಕ ತಂಡದ ಆಲ್‌ರೌಂಡರ್ ಗೌತಮ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಫ್ರ್ಯಾಂಚೈಸಿಯು ₹ 9.25 ಕೋಟಿ ನೀಡಿ ಖರೀದಿಸಿತು. ಆಫ್‌ಸ್ಪಿನ್ನರ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡುವ ಆಟಗಾರ ಗೌತಮ್ ಅವರು ಬೆಂಗಳೂರಿನವರು.ಇಲ್ಲಿಯವರೆಗೆ ಅಧಿಕ ಮೊತ್ತಕ್ಕೆ ಬಿಕರಿಯಾದ ಆಟಗಾರರ ಪಟ್ಟಿ ಇಂತಿದೆ.
ಐಪಿಎಲ್ 14ನೇ ಆವೃತ್ತಿ:ಅಧಿಕ ಮೊತ್ತಕ್ಕೆ ಬಿಕರಿಯಾದಆಟಗಾರರ ಪಟ್ಟಿ
1. ಕ್ರಿಸ್ ಮೊರಿಸ್ (ದಕ್ಷಿಣ ಆಫ್ರಿಕಾ): ₹ 16.25 ಕೋಟಿ – ರಾಜಸ್ಥಾನ್ ರಾಯಲ್ಸ್
2. ಕೈಲ್ ಜೆಮಿಸನ್(ನ್ಯೂಜಿಲೆಂಡ್): ₹ 15 ಕೋಟಿ -ರಾಯಲ್ ಚಾಲೆಂಜರ್ಸ್ ಬೆಂಗಳೂರು
3. ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ): ₹ 14.25 ಕೋಟಿ – ರಾಯಲ್ ಚಾಲೆಂಜರ್ಸ್ ಬೆಂಗಳೂರು-ಆರ್‌ಸಿಬಿ
4. ಜಯ್ ರಿಚರ್ಡ್‌ಸನ್ (ಆಸ್ಟ್ರೇಲಿಯಾ): ₹14 ಕೋಟಿ – ಪಂಜಾಬ್ ಕಿಂಗ್ಸ್
5. ಕೆ. ಗೌತಮ್ (ಭಾರತ): ₹ 9.25 ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
6. ರಿಲೆ ಮೆರೆಡಿತ್(ಆಸ್ಟ್ರೇಲಿಯಾ): ₹8 ಕೋಟಿ - ಪಂಜಾಬ್ ಕಿಂಗ್ಸ್
7. ಮೊಯಿನ್ ಅಲಿ (ಇಂಗ್ಲೆಂಡ್) : ₹ 7 ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
8. ಶಾರೂಖ್ ಖಾನ್ (ಭಾರತ): ₹ 5.25 ಕೋಟಿ – ರಾಜಸ್ಥಾನ್ ರಾಯಲ್ಸ್
9. ನಾತನ್ ಕೋಲ್ಟರ್ (ಆಸ್ಟ್ರೇಲಿಯಾ): ₹ 5 ಕೋಟಿ – ಮುಂಬೈ ಇಂಡಿಯನ್ಸ್
10. ಶಿವಂ ದುಬೆ (ಭಾರತ): ₹ 4.4 ಕೋಟಿ – ರಾಜಸ್ಥಾನ್ ರಾಯಲ್ಸ್
ಇದನ್ನೂ ಓದಿ.. ಯಾವ ಆಟಗಾರ ಎಷ್ಟು ಬೆಲೆಗೆಸೇಲ್? ನೋಡಿ ಲೈವ್ ಬ್ಲಾಗ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.