ADVERTISEMENT

ಫಿಕ್ಸಿಂಗ್: ಯುಎಇ ಕ್ರಿಕೆಟಿಗರ ಅಮಾನತು ಮಾಡಿದ ಐಸಿಸಿ

ಪಿಟಿಐ
Published 26 ಜನವರಿ 2021, 16:32 IST
Last Updated 26 ಜನವರಿ 2021, 16:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ದುಬೈ: ಎರಡು ವರ್ಷಗಳ ಹಿಂದೆ ಟ್ವೆಂಟಿ–20 ವಿಶ್ವಕಪ್ ಅರ್ಹತ ಸುತ್ತಿನ ಪಂದ್ಯಗಳನ್ನು ಫಿಕ್ಸಿಂಗ್ ಮಾಡಲು ಯತ್ನಿಸಿದರೆನ್ನಲಾದ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಇಬ್ಬರು ಆಟಗಾರರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಅಮಾನತು ಮಾಡಿದೆ.

ಯುಎಇ ಆಟಗಾರರಾದ ಮೊಹಮ್ಮದ್ ನವೀದ್ ಮತ್ತು ಶೈಮನ್ ಅನ್ವರ್ ಭಟ್ ಅವರು ತಪ್ಪಿತಸ್ಥರೆಂದು ಸಾಬೀತಾಗಿದ್ದು ಅಮಾನತು ಮಾಡಲಾಗಿದೆ ಎಂದು ಮಂಗಳವಾರ ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

2019ರ ಟಿ10 ಲೀಗ್‌ ಟೂರ್ನಿಯ್ಲಿಯೂ ನವೀದ್ ಫಿಕ್ಸಿಂಗ್ ಮಾಡಲು ಪ್ರಯತ್ನಿಸಿದ ಆರೋಪ ಎದುರಿಸಿದ್ದರು. ಅದರ ನಂತರ ಟಿ20 ವಿಶ್ವಕಪ್ ಕ್ವಾಲಿಫೈಯರ್‌ನಲ್ಲಿಯೂ ನವೀದ್ ಮತ್ತು ಶೈಮನ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅವರ ವಿರುದ್ಧ ಐಸಿಸಿಯ ಭ್ರಷ್ಟಾಚಾರ ತಡೆ ಘಟಕವು ತನಿಖೆ ನಡೆಸಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.