ಮುಂಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಎಸಿಸಿ 19 ವರ್ಷದೊಳಗಿನ ಪುರುಷರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಭಾರತ ತಂಡವನ್ನು ಪ್ರಕಟಿಸಲಾಗಿದೆ.
ಈ ತಂಡದಲ್ಲಿ ರಾಜ್ಯದ ಮಧ್ಯಮ ವೇಗದ ಬೌಲರ್ ಧನುಷ್ ಗೌಡ ಸ್ಥಾನ ಪಡೆದಿದ್ದಾರೆ. ಡಿಸೆಂಬರ್ 8ರಂದು ಈ ಟೂರ್ನಿ ಆರಂಭವಾಗಲಿದ್ದು ಫೈನಲ್ 17ಕ್ಕೆ ನಿಗದಿಯಾಗಿದೆ.
ಉದಯೋನ್ಮುಖ ಬ್ಯಾಟರ್ ಉದಯ್ ಸಹಾರನ್ ಅವರು ಭಾರತ ತಂಡದ ನಾಯಕರಾಗಿದ್ದಾರೆ. ಜೂನಿಯರ್ ಏಷ್ಯಾ ಕಪ್‌ನಲ್ಲಿ ಭಾರತ ಎಂಟು ಬಾರಿ ಪ್ರಶಸ್ತಿ ಗೆದ್ದುಕೊಂಡು ಪ್ರಾಬಲ್ಯ ಮೆರೆದಿದೆ.
ಉದಯ್ ಸಹಾರನ್ (ನಾಯಕ), ಸೌಮಿ ಕುಮಾರ್ ಪಾಂಡೆ (ಉಪನಾಯಕ), ಅರ್ಷಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ಧಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಧನುಷ್ ಗೌಡ, ಅವಿನಾಶ್ ರಾವ್ (ವಿಕೆಟ್ ಕೀಪರ್), ಎಂ.ಅಭಿಷೇಕ್, ಇನ್ನೇಶ್ ಮಹಾಜನ್ (ವಿಕೆಟ್ ಕೀಪರ್), ಆರ್ಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.