ಪ್ಯಾರಿಸ್ : ಮುಂದಿನ ವರ್ಷ ಅಮೆರಿಕ ಮತ್ತು ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಉಗಾಂಡ ಅರ್ಹತೆ ಪಡೆದಿದೆ.
ಆಫ್ರಿಕಾ ವಲಯದ ಅರ್ಹತಾ ಕೂಟದಲ್ಲಿ ಗುರುವಾರ ರವಾಂಡ ವಿರುದ್ಧ 9 ವಿಕೆಟ್‌ಗಳ ಗೆಲುವು ದಾಖಲಿಸುವ ಮೂಲಕ ದ್ವಿತೀಯ ಸ್ಥಾನದೊಂದಿಗೆ ಪುರುಷರ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಪಾಲ್ಗೊಳ್ಳುವ ಅವಕಾಶ ಪಡೆದಿದೆ.
ಈಗಾಗಲೇ ನಮೀಬಿಯಾ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿದೆ. ನಮೀಬಿಯಾ ಮತ್ತು ಉಗಾಂಡ ವಿರುದ್ಧ ಸೋತಿರುವ ಜಿಂಬಾಬ್ವೆ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಅರ್ಹತೆ ಕಳೆದುಕೊಂಡಿದೆ. ರುವಾಂಡ ತಂಡ 65 ರನ್‌ಗಳಿಗೆ ಅಲೌಟ್ ಆಯಿತು. 8.1 ಓವರ್‌ಗಳಲ್ಲಿ ಈ ಗುರಿ ತಲುಪುವುದರೊಂದಿಗೆ ಉಗಾಂಡ, ಟೂರ್ನಿಯಲ್ಲಿ ಆರು ಪಂದ್ಯಗಳಿಂದ ಐದನೇ ಜಯ ದಾಖಲಿಸಿತು.
ಜಿಂಬಾಬ್ವೆ ಮೂರು ಆವೃತ್ತಿಗಳಲ್ಲಿ ಎರಡನೇ ಬಾರಿಗೆ ಟೂರ್ನಿಯಲ್ಲಿ ಭಾಗವಹಿಸುವ ಅರ್ಹತೆ ಕಳೆದುಕೊಂಡಿದೆ. ಕಳೆದ ಎರಡು ವರ್ಷ 50 ಓವರ್‌ಗಳ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲೂ ಭಾಗವಹಿಸುವ ಅರ್ಹತೆ ಪಡೆದಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.