ಮುಂಬೈ: ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಪಂದ್ಯದ ಅಧಿಕಾರಿಗಳು, ಸ್ಕೋರರ್‌ಗಳು ಹಾಗೂ ಮೈದಾನ ಸಿಬ್ಬಂದಿಗೆ ಮಹಾರಾಷ್ಟ್ರದ ಹಿರಿಯ ಅಂಪೈರ್‌ಗಳು ನೆರವು ನೀಡಲು ಮುಂದಾಗಿದ್ದಾರೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಿರಿಯ ಅಂಪೈರ್ ಹಾಗೂ ಈ ಹಿಂದೆ ಮುಂಬೈ ಕ್ರಿಕೆಟ್ ಸಂಸ್ಥೆಯ (ಎಂಸಿಎ) ವ್ಯವಸ್ಥಾಪನ ಮಂಡಳಿಯ ಸದಸ್ಯರಾಗಿದ್ದ ಗಣೇಶ್ ಅಯ್ಯರ್ ನೇತೃತ್ವದ ತಂಡವು ‘ಲೆಂಡಿಂಗ್ ಎ ಹ್ಯಾಂಡ್’ ಎಂಬ ಅಭಿಯಾನದ ಮೂಲಕ ನೊಂದವರ ಕಣ್ಣೀರು ಒರೆಸುವ ಪ್ರಯತ್ನ ಮಾಡುತ್ತಿದೆ.
‘ಲಾಕ್‌ಡೌನ್‌ನಿಂದಾಗಿ ಮೈದಾನ ಸಿಬ್ಬಂದಿ, ಸ್ಕೋರರ್‌ಗಳು ಸೇರಿದಂತೆ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಅವರಿಗೆ ಒಂದು ಕೆ.ಜಿ.ತೊಗರಿ ಬೇಳೆ, ಎರಡು ಕೆ.ಜಿ.ಅಕ್ಕಿ, ಎರಡು ಕೆ.ಜಿ. ಗೋದಿ ಹಿಟ್ಟು, ಅಡುಗೆ ಎಣ್ಣೆ ಹಾಗೂ ಸಾಂಬಾರು ಪೌಡರ್ ಒಳಗೊಂಡ ಆಹಾರದ ಕಿಟ್ ವಿತರಿಸುತ್ತಿದ್ದೇವೆ. ಸಂದೀಪ್ ಠಾಕೂರ್ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ’ ಎಂದು ಗಣೇಶ್ ಅವರು ಶುಕ್ರವಾರ ತಿಳಿಸಿದ್ದಾರೆ.
‘ನಾವೆಲ್ಲರೂ ಸೇರಿ ಒಂದು ಗುಂಪು ಮಾಡಿಕೊಂಡಿದ್ದೇವೆ. ಈಗಾಗಲೇ ₹5.04 ಲಕ್ಷ ದೇಣಿಗೆ ಸಂಗ್ರಹಿಸಿದ್ದೇವೆ. ಈ ಪೈಕಿ ₹4.30 ಲಕ್ಷವನ್ನು ಆಹಾರದ ಕಿಟ್ ವಿತರಿಸಲು ವಿನಿಯೋಗಿಸಿದ್ದೇವೆ. ಉಳಿದ ಹಣವನ್ನು ಹಾಗೆ ಇಟ್ಟುಕೊಂಡಿದ್ದೇವೆ. ತುರ್ತು ಸಂದರ್ಭದಲ್ಲಿ ಅದನ್ನು ವಿನಿಯೋಗಿಸುತ್ತೇವೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.