ADVERTISEMENT

ಮಹಿಳಾ ಐಪಿಎಲ್: ಪ್ರಸಾರ ಹಕ್ಕು ₹951 ಕೋಟಿಗೆ ವಯಾಕಾಮ್ ಪಾಲು

ಟಿ20 ಕ್ರಿಕೆಟ್‌: ಮಹಿಳಾ ಐಪಿಎಲ್‌ ಪ್ರಸಾರ ಹಕ್ಕು ಹರಾಜು

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 10:48 IST
Last Updated 16 ಜನವರಿ 2023, 10:48 IST
ಭಾರತ ಮಹಿಳಾ ಕ್ರಿಕೆಟ್ ತಂಡ
ಭಾರತ ಮಹಿಳಾ ಕ್ರಿಕೆಟ್ ತಂಡ   

ನವದೆಹಲಿ: ಮಹಿಳಾ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಐಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಪಂದ್ಯಗಳ ಮುಂದಿನ ಐದು ವರ್ಷಗಳ ಪ್ರಸಾರ ಹಕ್ಕನ್ನು ವಯಾಕಾಮ್‌ 18 ಸಂಸ್ಥೆ ₹ 951 ಕೋಟಿಗೆ ತನ್ನದಾಗಿಸಿಕೊಂಡಿದೆ.

ಸೋಮವಾರ ನಡೆದ ಹರಾಜಿನಲ್ಲಿ ಡಿಸ್ನಿ ಸ್ಟಾರ್‌ ಮತ್ತು ಸೋನಿ ಒಳಗೊಂಡಂತೆ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದ ವಯಾಕಾಮ್‌, ಅತಿದೊಡ್ಡ ಮೊತ್ತ ನೀಡಿ ಟಿ.ವಿ ಮತ್ತು ಡಿಜಿಟಲ್‌ ಪ್ರಸಾರದ ಹಕ್ಕನ್ನು ಜತೆಯಾಗಿ ಗೆದ್ದುಕೊಂಡಿದೆ. ಪ್ರತಿ ಪಂದ್ಯದ ಮೌಲ್ಯ ₹ 7 ಕೋಟಿ 9 ಲಕ್ಷ ಆಗಲಿದೆ.

ಚೊಚ್ಚಲ ಮಹಿಳಾ ಐಪಿಎಲ್‌ ಟೂರ್ನಿ ಮಾರ್ಚ್‌ ಮೊದಲ ವಾರದಲ್ಲಿ ಆಯೋಜನೆಯಾಗಲಿದೆ. ಮುಂಬೈನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಐದು ತಂಡಗಳು ಪಾಲ್ಗೊಳ್ಳಲಿವೆ.

ADVERTISEMENT

‘ಟಿ.ವಿ ಮತ್ತು ಡಿಜಿಟಲ್‌ ಪ್ರಸಾರದ ಹಕ್ಕುಗಳನ್ನು ಪಡೆದ ವಯಾಕಾಮ್‌ 18 ಸಂಸ್ಥೆಯನ್ನು ಅಭಿನಂದಿಸುತ್ತೇನೆ. ಮಹಿಳಾ ಐಪಿಎಲ್‌ ಟೂರ್ನಿ ಆಯೋಜಿಸುವ ನಿಟ್ಟಿನಲ್ಲಿ ನಮ್ಮ ಪ್ರಯಾಣ ಇದರೊಂದಿಗೆ ಆರಂಭವಾಗಿದೆ. ಇದೇ ತಿಂಗಳಲ್ಲಿ ಐದು ಫ್ರಾಂಚೈಸ್‌ಗಳನ್ನು ಘೋಷಿಸುವ ಮೂಲಕ ಇನ್ನೊಂದು ಹೆಜ್ಜೆ ಇಡಲಿದ್ದೇವೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.