ರಾಜ್‌ಕೋಟ್: ವೇಗಿ ಹರ್ಷಲ್ ಪಟೇಲ್ ಅವರ ನಿಖರ ದಾಳಿಯ ನೆರವಿನಿಂದ ಹರಿಯಾಣ ತಂಡವು ಶನಿವಾರ 30 ರನ್‌ಗಳಿಂದ ರಾಜಸ್ಥಾನ ವಿರುದ್ಧ ಗೆದ್ದು ವಿಜಯ್ ಹಜಾರೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
288 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ರಾಜಸ್ಥಾನ ತಂಡದ ಆರಂಭಿಕ ಬ್ಯಾಟರ್ ಅಭಿಜಿತ್ ತೋಮರ್ (106; 129ಎ) ಶತಕ ಬಾರಿಸಿದರು. ಕುನಾಲಸಿಂಗ್ (79; 65ಎ) ಅರ್ಧಶತಕ ಗಳಿಸಿದರು. ಆದರೂ ತಂಡವು 48 ಓವರ್‌ಗಳಲ್ಲಿ 257 ರನ್ ಗಳಿಸಿ ಸೋತಿತು. ಹರಿಯಾಣ ತಂಡದ ಹರ್ಷಲ್ ಮತ್ತು ಸುಮಿತ್ ಕುಮಾರ್ ತಲಾ ಮೂರು ವಿಕೆಟ್ ಗಳಿಸಿದರು.
ಸಂಕ್ಷಿಪ್ತ ಸ್ಕೋರು: ಹರಿಯಾಣ : 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 287 (ಅಂಕಿತ್ ಕುಮಾರ್ 88, ಅಶೋಕ್ ಮನೇರಿಯಾ 70, ರೋಹಿತ್ ಪ್ರಮೋದ್ ಶರ್ಮಾ 20, ನಿಶಾಂತ್ ಸಿಂಧು 29, ರಾಹುಲ್ ತೆವಾಟಿಯಾ 24, ಸುಮಿತ್ ಕುಮಾರ್ ಔಟಾಗದೆ 28, ಅರಾಫತ್ ಖಾನ್ 59ಕ್ಕೆ2, ಅನಿಕೇತ್ ಚೌಧರಿ 49ಕ್ಕೆ4) ರಾಜಸ್ಥಾನ: 48 ಓವರ್‌ಗಳಲ್ಲಿ 257 (ಅಭಿಜಿತ್ ತೋಮರ್ 106, ಕರಣ್ ಲಂಬಾ 20, ಕುನಾಲ್ ಸಿಂಗ್ ರಾಥೋಡ್ 79, ಅನ್ಷುಲ್ ಕಾಂಬೋಜ್ 34ಕ್ಕೆ2, ಸುಮಿತ್ ಕುಮಾರ್ 34ಕ್ಕೆ3, ಹರ್ಷಲ್ ಪಟೇಲ್ 47ಕ್ಕೆ3, ರಾಹುಲ್ ತೆವಾಟಿಯಾ 50ಕ್ಕೆ2) ಫಲಿತಾಂಶ: ಹರಿಯಾಣ ತಂಡಕ್ಕೆ 30 ರನ್‌ಗಳ ಜಯ ಮತ್ತು ಪ್ರಶಸ್ತಿ: ಪಂದ್ಯ ಹಾಗೂ ಸರಣಿಶ್ರೇಷ್ಠ: ಸುಮಿತ್ ಕುಮಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.