ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ನಾಕೌಟ್ ಪ್ರವೇಶದ ಹಾದಿಯಿಂದ ಈಗಾಗಲೇ ಹೊರಬಿದ್ದಿರುವ ಕರ್ನಾಟಕ ತಂಡ ದುರ್ಬಲ ರೈಲ್ವೆ ತಂಡದ ವಿರುದ್ಧ ಗೆದ್ದು ಸಮಾಧಾನಪಡುವ ಅವಕಾಶವನ್ನೂ ಮಳೆ ಕಿತ್ತುಕೊಂಡಿತು!
ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕದ ಇನಿಂಗ್ಸ್ ಮುಗಿಯುವ ಮುನ್ನವೇ ಸುರಿದ ಮಳೆಯಿಂದಾಗಿ ಪಂದ್ಯ ಸ್ಥಗಿತವಾಯಿತು. ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವು 42.5 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 229 ರನ್ ಗಳಿಸಿತ್ತು. ಇದರಿಂದಾಗಿ ಎರಡೂ ತಂಡಗಳಿಗೆ ತಲಾ ಎರಡು ಪಾಯಿಂಟ್‌ಗಳನ್ನು ನೀಡಲಾಯಿತು.
ಎಲೀಟ್ ‘ಎ’ ಗುಂಪಿನಲ್ಲಿ ಒಟ್ಟು ಆರು ಪಂದ್ಯಗಳನ್ನು ಆಡಿರುವ ಕರ್ನಾ ಟಕ ಕೇವಲ ಒಂದರಲ್ಲಿ ಮಾತ್ರ ಗೆದ್ದಿದೆ. ಇದರಿಂದಾಗಿ ಹಾಲಿ ಚಾಂಪಿಯನ್ ತಂಡಕ್ಕೆ ಪ್ರಶಸ್ತಿ ಉಳಿಸಿಕೊಳ್ಳುವ ಯಾವ ಅವಕಾಶವೂ ಉಳಿದಿಲ್ಲ. ಉಳಿದಿರುವ ಇನ್ನೆರಡು ಪಂದ್ಯಗಳು ಕೇವಲ ಔಪಚಾರಿಕವಾಗಿವೆ.
ಸಂಕ್ಷಿಪ್ತ ಸ್ಕೋರು: ಚಿನ್ನಸ್ವಾಮಿ ಕ್ರೀಡಾಂಗಣ: ಕರ್ನಾಟಕ: 42.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 229 (ಅಭಿಷೇಕ್ ರೆಡ್ಡಿ 31, ಎಂ.ಜಿ. ನವೀನ್ 34, ಮನೀಷ್ ಪಾಂಡೆ 35, ಮೀರ್ ಕೌನೇನ್ ಅಬ್ಬಾಸ್ 46, ಶ್ರೇಯಸ್ ಗೋಪಾಲ್ ಔಟಾಗದೆ 35, ಬಿ.ಆರ್. ಶರತ್ ಔಟಾಗದೆ 28, ಮಂಜೀತ್ ಸಿಂಗ್ 30ಕ್ಕೆ2, ಮನೀಷ್ ರಾವ್ 32ಕ್ಕೆ2) –ರೈಲ್ವೆ ವಿರುದ್ಧದ ಪಂದ್ಯ: ಫಲಿತಾಂಶ: ಮಳೆಯಿಂದಾಗಿ ಪಂದ್ಯ ಸ್ಥಗಿತ. ಉಭಯ ತಂಡಗಳಿಗೆ ತಲಾ 2 ಪಾಯಿಂಟ್; ಆಲೂರು ಕ್ರೀಡಾಂಗಣ (2) : ಪಂಜಾಬ್; 50 ಓವರ್‌ಗಳಲ್ಲಿ 4 ವಿಕೆಟ್‌ಗಳಗೆ 359 (ಅನ್ಮೋಲ್‌ಪ್ರೀತ್ ಸಿಂಗ್ 141, ಶುಭಮನ್ ಗಿಲ್ 73, ಮನದೀಪ್ ಸಿಂಗ್ 60, ಗುರುಕೀರತ್ ಸಿಂಗ್ ಮಾನ್ 30, ಮನಪ್ರೀತ್ ಗೋಣಿ 36) ಗೋವಾ: 10 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 46 (ಅಮೋಘ್ ಸುನಿಲ್ ದೇಸಾಯಿ 30, ಸ್ನೇಹಲ್ ಸುಹಾಸ್ ಕೌಟನಕರ್ 10) ಮಳೆಯಿಂದಾಗಿ ಪಂದ್ಯ ಸ್ಥಗಿತ; ಎರಡೂ ತಂಡಗಳಿಗೆ ತಲಾ ಎರಡು ಪಾಯಿಂಟ್
ಆಲೂರು ಕ್ರೀಡಾಂಗಣ (3) : ಬರೋಡಾ: 41.2 ಓವರ್‌ಗಳಲ್ಲಿ 153 (ಕೇದಾರ್ ದೇವಧರ್ 41, ಆದಿತ್ಯ ವಾಗ್ಮೋಡೆ 29, ಕೃಣಾಲ್ ಪಾಂಡ್ಯ 11, ದೀಪಕ್ ಹೂಡಾ 17, ವಿಷ್ಣು ಸೋಳಂಕಿ 13, ಸ್ವಪ್ನಿಲ್ ಸಿಂಗ್ 20, ಪಂಕಜ್ ಜೈಸ್ವಾಲ್ 40ಕ್ಕೆ2, ಮಯಂಕ್ ದಾಗರ್ 27ಕ್ಕೆ5, ಆಯುಷ್ ಜಮ್ವಾಲ್ 35ಕ್ಕೆ2) ಹಿಮಾಚಲಪ್ರದೇಶ: 11.3 ಓವರ್‌ಗಳಲ್ಲಿ 1 ವಿಕೆಟ್‌ಗೆ 41 (ಪ್ರಿಯಾಂಶು ಖಂಡೂರಿ 33, ಪ್ರಶಾಂತ್ ಚೋಪ್ರಾ ಔಟಾಗದೆ 8) ಫಲಿತಾಂಶ: ಮಳೆಯಿಂದಾಗಿ ಪಂದ್ಯ ಸ್ಥಗಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.